'ಮಾಸ್ಟರ್' 3ನೇ ಲುಕ್: ಭಯಾನಕವಾಗಿದೆ ವಿಜಯ್ ಮತ್ತು ಸೇತುಪತಿ ನೋಟ

ಕಾಲಿವುಡ್ ನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಾಸ್ಟರ್ ಸಿನಿಮಾದ ಮೂರನೆ ಲುಕ್ ರಿಲೀಸ್ ಆಗಿದೆ. ಗಣರಾಜ್ಯದಿನದ ಅಂಗವಾಗಿ ಇಂದು ಮಾಸ್ಟರ್ ಸಿನಿಮಾದ ಲುಕ್ ರಿಲೀಸ್ ಮಾಡಲಾಗಿದೆ. ಇಳಯದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಬಹುನಿರೀಕ್ಷೆಯ ಸಿನಿಮಾವಿದು.

ಸದ್ಯ ರಿಲೀಸ್ ಆಗಿರುವ ಫೋಸ್ಟರ್ ಭಯಾನಕವಾಗಿದ್ದು, ವಿಜಯ್ ಮತ್ತು ವಿಜಯ್ ಇಬ್ಬರು ಅಬ್ಬರಿಸಿದ್ದಾರೆ. ವಿಜಯ್ ಮತ್ತು ಸೇತುಪತಿ ಇಬ್ಬರು ಮುಖಾಮುಖಿಯಾಗಿ ನಿಂತು ಘರ್ಜಿಸುತ್ತಿದ್ದಾರೆ. ಮುಖದಲ್ಲಿ ರಕ್ತ ಸುರಿಯುತ್ತಿದೆ. ಪಕ್ಕಾ ರಾ ಫ್ಲೇವರ್ ನಲ್ಲಿದೆ ಈ ಪೋಸ್ಟರ್. ಅಂದ್ಹಾಗೆ ಮಾಸ್ಟರ್ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ.

ಮಾಸ್ಟರ್ ಸಿನಿಮಾದ ಚಿತ್ರೀಕರಣ ಕಳೆದ ಕೆಲವು ದಿನಗಳಿಂದ ಶಿವಮೊಗ್ಗದಲ್ಲಿ ನಡೆಯುತ್ತಿದ್ದರು. ಶಿವಮೊಗ್ಗದ ಹಳೆ ಜೈಲಿನಲ್ಲಿ ಮಾಸ್ಟರ್ ಸಿನಿಮಾದ ಜೈಲು ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಸೇತುಪತಿ ಮತ್ತು ವಿಜಯ್ ಇಬ್ಬರು ಸುಮಾರು ಒಂದು ತಿಂಗಳ ಕಾಲ ಶಿವಮೊಗ್ಗದಲ್ಲಿ ಬೀಡುಬಿಟ್ಟಿದ್ದರು.

Vijay And Vijay Sethupathi Starrer Master Movie Third Look Released

ಈಗಾಗಲೆ ರಿಲೀಸ್ ಆಗಿರುವ ಎರಡು ಪೋಸ್ಟರ್ಸ್ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿತ್ತು. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಕೂಡ ಭಯಾನಕವಾಗಿದ್ದು, ಈಗಾಗಲೆ ಟ್ರೆಂಡಿಂಗ್ ನಲ್ಲಿದೆ. ಬಾರಿ ನಿರೀಕ್ಷೆ ಮೂಡಿಸಿರುವ ಮಾಸ್ಟರ್ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
Tamil Actor Vijay And Vijay Sethupathi starrer most expected Master movie third look released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X