ಕೋಟಿ ವೆಚ್ಚದ ಬೀಸ್ಟ್‌ ಚಿತ್ರದ ಅದ್ದೂರಿ ಸೆಟ್ ಜಲಾವೃತ!

ತಮಿಳು ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಕೆಲವು ಹಂತದ ಚಿತ್ರೀಕರಣ ಮಾತ್ರ ಬಾಕಿ ಇದೆ. ಬೀಸ್ಟ್ ತಮಿಳಿನ ಬಹುನಿರೀಕ್ಷಿತ ಸಿನಿಮಾ. ಭರದಿಂದ ಸಾಗುತ್ತಿರುವ ಚಿತ್ರೀಕರಣಕ್ಕೆ ಮಳೆರಾಯ ಕಂಟಕ ಆಗಿದ್ದಾನೆ. ನಿರಂತರ ಮಳೆಯಿಂದ ಸಿನಿಮಾ ತಂಡಕ್ಕೆ ಬಿಕ್ಕಟ್ಟು ಎದುರಾಗಿದೆ. ಚೆನ್ನೈನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬೀಸ್ಟ್‌ ಚಿತ್ರ ತಂಡ ಅದ್ದೂರಿ ಸೆಟ್ ನಿರ್ಮಾಣ ಮಾಡಿತ್ತು. ಫಿಲ್ಮ್ ಸ್ಟೂಡಿಯೋದಲ್ಲಿ ಬೃಹತ್ ಮಾಲ್ ಸೆಟ್ ಹಾಕಲಾಗಿತ್ತು. ಆದರೆ ಈಗ ಆ ಮಾಲ್ ಸೆಟ್‌ಗೆ ಮಳೆರಾಯ ಕಂಟಕವಾಗಿದ್ದಾನೆ.

ಚೆನ್ನೈನಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಾಗಾಗಿ ಚಿತ್ರತಂಡ ನಿರ್ಮಾಣ ಮಾಡಿದ ಮಾಲ್‌ ಸೆಟ್ ಜಲಾವೃತ ಆಗಿದೆ. ಹಾಗಾಗಿ ಸೆಟ್ ಹಾಳಾಗಿದೆ ಎಂದು ವರದಿ ಆಗಿದೆ. ಈಗ ಚಿತ್ರ ತಂಡಕ್ಕೆ ಸೆಟ್‌ ಸರಿಪಡಿಸಲು ಸಮಯ ಬೇಕಾಗುತ್ತದೆ. ಹಾಗಾಗಿ ಚಿತ್ರೀಕರಣ ಮತ್ತೆ ಕೆಲವು ದಿನ ಮುಂದೆ ಹೋಗುವ ಸಾಧ್ಯತೆ ಇದೆ. ಚಿತ್ರ ತಂಡ ಅಂದು ಕೊಂಡ ಹಾಗೆ ನಿಗಧಿತ ಸಮಯಕ್ಕೆ ಚಿತ್ರದ ಶೂಟಿಂಗ್ ಮುಗುಸಲು ಮಳೆ ಅಡ್ಡಿ ಆಗಿದೆ.

ಸೆಟ್ ಹಾಳಾಗಿರುವ ಕಾರಣ ಬೀಸ್ಟ್ ಸಿನಿಮಾ ತಂಡ ಚೆನ್ನೈನಲ್ಲಿ ಶೂಟಿಂಗ್ ಆರಂಭಿಸಲು ತಡವಾಗುತ್ತದೆ. ಚೆನ್ನೈನಲ್ಲಿ ನೆಡೆಯಲಿರುವ ಚಿತ್ರೀಕರಣಕ್ಕೆ ನಟಿ ಪೂಜಾ ಹೆಗ್ಡೆ ಸೇರಿಕೊಳ್ಳಲಿದ್ದಾರೆ. ಸದ್ಯ ಜಾರ್ಜಿಯಾ ದೇಶದಲ್ಲಿ ಬೀಸ್ಟ್ ಚಿತ್ರತಂಡ ಬೀಡು ಬಿಟ್ಟಿದ್ದು, ಅಲ್ಲಿ ಚಿತ್ರೀಕರಣ ನಡೆಯುತ್ತಿದೆ. ಜಾರ್ಜಿಯಾದಲ್ಲಿ ದೇಶದಲ್ಲಿ ಕಾಶ್ಮೀರದ ಸೆಟ್ ಹಾಕಲಾಗಿದೆ. ಕಾಶ್ಮೀರದಲ್ಲಿ ಸೇನೆಗೆ ಸಂಬಂಧಿಸಿದ ಕೆಲವು ದೃಶ್ಯಗಳು ಚಿತ್ರದಲ್ಲಿ ಇವೆ. ಹಾಗಾಗಿ ಕಾಶ್ಮೀರವನ್ನು ರೀಕ್ರಿಯೇಟ್ ಮಾಡಲಾಗಿದೆ.

Vijay Beast Movie Set Flooded Due To Rain

ಜಾರ್ಜಿಯ ಶೂಟಿಂಗ್ ಬಳಿಕ ಚಿತ್ರ ತಂಡ ಚೆನ್ನೈಗೆ ಮರಳಲಿದೆ. ಬಂದ ಕೂಡಲೇ ಚೆನ್ನೈನಲ್ಲಿ ಚಿತ್ರೀಕರಣವನ್ನು ಆರಂಭಿಸುವ ಯೋಜನೆ ಇತ್ತು. ಆದರೆ ಸದ್ಯ ಚಿತ್ರಕ್ಕಾಗಿ ಹಾಕಿರುವ ಮಾಲ್‌ನ ಸೆಟ್ ಜಲಾವೃತ ಆಗಿದೆ. ಹಾಗಾಗಿ ಚೆನ್ನೈನಲ್ಲಿ ಚಿತ್ರೀಕರಣ ಆರಂಭವಾಗುವುದು ಕೊಂಚ ವಿಳಂಬ ಆಗಲಿದೆ. ಚಿತ್ರತಂಡ ಅದ್ಧೂರಿ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಸಿನಿಮಾ ಸೆಟ್‌ಗಳಿಗಾಗಿಯೇ ಕೋಟಿ ಕೋಟಿ ಹಣವನ್ನು ಖರ್ಚು ಮಾಡಲಾಗುತ್ತಿದೆ.

ಬೀಸ್ಟ್ ಚಿತ್ರವನ್ನು ನೆಲ್ಸನ್ ದಿಲಿಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಟಿ ಪೂಜಾ ಹೆಗ್ಡೆ ವಿಜಯ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮಾಸ್ಟರ್‌ ಚಿತ್ರದ ಬಳಿಕ ಬರುತ್ತಿರುವ ವಿಜಯ್ ಸಿನಿಮಾ ಇದು. ಈ ಚಿತ್ರದಲ್ಲಿ ವಿಜಯ್ ಸೇನಾ ಅಧಿಕಾರಿ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದ ಪೋಸ್ಟರ್‌ನಲ್ಲಿ ವಿಜಯ್ ಕೈಯಲ್ಲಿ ಬಂದೂಕು ಹಿಡಿದು ಪೋಸ್‌ ಕೊಟ್ಟಿದ್ದಾರೆ. ವಿಜಯ್‌ ಚಿತ್ರಗಳ ಬಗ್ಗೆ ನಿರೀಕ್ಷೆ ಹುಟ್ಟಿಕೊಳ್ಳುವುದು ಸಹಜ. ಅಂತೆಯೇ ಬೀಸ್ಟ್‌ ಚಿತ್ರದ ಮೇಲೂ ಎಲ್ಲಿಲ್ಲದ ನಿರೀಕ್ಷೆ ಇದೆ. ಚಿತ್ರದ ನಿರ್ದೇಶಕ ಈ ಹಿಂದೆ ಮಾಡಿದ್ದ ಕೊಲಮಾವು ಕೋಕಿಲ ಮತ್ತು ಡಾಕ್ಟರ್‌ ಚಿತ್ರಗಳು ಯಶಸ್ಸು ಕಂಡಿವೆ. ಹಾಗಾಗಿ ಈ ಚಿತ್ರದ ಮೇಲೆ ಭರವಸೆ ಇದೆ.

ಇನ್ನುಳಿದಂತೆ ಚಿತ್ರದಲ್ಲಿ ಸೆಲ್ವ ರಾಘವನ್, ಯೋಗಿ ಬಾಬು, ಸೇರಿದಂತೆ ಹಲವು ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಮೂಲಗಳ ಪ್ರಕಾರ ಬೀಸ್ಟ್ ಸಿನಿಮಾ ಗೋಲ್ಡ್ ಟ್ರಾಫಿಕಿಂಗ್ ಕುರಿತಾದಂತಹ ಸಿನಿಮಾ ಎನ್ನಲಾಗಿದೆ. ಚಿತ್ರದಲ್ಲಿ ವಿಜಯ್ ವಿಶೇಷ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ ಮತ್ತು ಅನಿರುದ್ಧ ರವಿಚಂದ್ರನ್ ಸಂಗೀತ ಚಿತ್ರಕ್ಕಿದೆ.

More from Filmibeat

English summary
Beast Tamil Movie Set Flooded Due To Chennai Rain,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X