For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ವಿಚಾರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಿಂದಿಕ್ಕಿದ ನಟ ವಿಜಯ್

  |

  ದಕ್ಷಿಣ ಭಾರತೀಯ ಚಿತ್ರರಂದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಸೂಪರ್ ಸ್ಟಾರ್ ರಜಿನಿಕಾಂತ್. ತಲೈವಾ ಕಬಾಲಿ, ಪೆಟಾ, 2.0 ಸಿನಿಮಾಗಳಿಗೆ ಅತೀ ಹೆಚ್ಚು ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ದರ್ಬಾರ್ ಸಿನಿಮಾಗೆ ರಜನಿಕಾಂತ್ ಬರೋಬ್ಬರಿ 90 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

  ಶಿವಮೊಗ್ಗ ಜೈಲಿನಿಂದ ಹೊರಬಂದು ಅಭಿಮಾನಿಗಳಿಗೆ ದರ್ಶನ ನೀಡಿದ ನಟ ವಿಜಯ್ಶಿವಮೊಗ್ಗ ಜೈಲಿನಿಂದ ಹೊರಬಂದು ಅಭಿಮಾನಿಗಳಿಗೆ ದರ್ಶನ ನೀಡಿದ ನಟ ವಿಜಯ್

  ಆದರೆ ಅಚ್ಚರಿಕರ ಸಂಗತಿಯಂದರೆ ಸೂಪರ್ ಸ್ಟಾರ್ ಪಡೆಯುತ್ತಿರುವ ಸಂಭಾವನೆಗಿಂತ ಅತೀ ಹೆಚ್ಚು ಸಂಭಾವನೆಯನ್ನು ಇಳಯದಳಪತಿ ವಿಜಯ್ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಂಭಾವನೆ ವಿಚಾರದಲ್ಲಿ ರಜನಿಕಾಂತ್ ಅವರನ್ನು ಹಿಂದಿಕ್ಕಿ ವಿಜಯ್ ಈಗ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾದರೆ ವಿಜಯ್ ಪಡೆಯುತ್ತಿರುವ ಸಂಭಾವನೆ ಎಷ್ಟು? ಮುಂದೆ ಓದಿ..

  ವಿಜಯ್ ದಾಖಲೆ ಸಂಭಾವನೆ

  ವಿಜಯ್ ದಾಖಲೆ ಸಂಭಾವನೆ

  ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆಗಲೆ ವಿಜಯ್ ಮುಂದಿನ ಸಿನಿಮಾಗೆ ಮುಂಗಡ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಅಂದ್ಹಾಗೆ ವಿಜಯ್ ಮುಂದಿನ ಸಿನಿಮಾಗೆ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಇನ್ನು ಹೆಸರಿಡದ ವಿಜಯ್ ಮುಂದಿನ ಸಿನಿಮಾಗೆ ಸನ್ ಪಿಕ್ಟರ್ಸ್ ಬಂಡವಾಳ ಹೂಡುತ್ತಿದ್ದಾರೆ.

  ಮುಂಗಡ ಹಣ ಸಂಭಾವನೆ ಪಡೆದಿರುವ ವಿಜಯ್

  ಮುಂಗಡ ಹಣ ಸಂಭಾವನೆ ಪಡೆದಿರುವ ವಿಜಯ್

  ಈಗಾಗಲೆ ಸನ್ ಪಿಕ್ಟರ್ಸ್ ವಿಜಯ್ ಗೆ 50 ಕೋಟಿ ರೂಪಾಯಿ ಮುಂಗಡ ಹಣ ನೀಡಿದೆಯಂತೆ. ವಿಜಯ್ ಮುಂದಿನ ಸಿನಿಮಾಗೆ ಖ್ಯಾತ ನಿರ್ದೇಶಕ 'ಅಸುರನ್' ಖ್ಯಾತಿಯ ವೆಟ್ರಿಮಾರನ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗಿಲ್ ಸಕ್ಸಸ್ ನ ನಂತರ ವಿಜಯ್ ಸಂಭಾವನೆ ಹೆಚ್ಚಿಸಿಕೊಂಡು, ಸೂಪರ್ ಸ್ಟಾರ್ ಹಿಂದಿಕ್ಕಿ ದಾಖಲೆಯ ನಿರ್ಮಿಸಿರುವುದು ಅಚ್ಚರಿ ಮೂಡಿಸಿದೆ.

  'ದರ್ಬಾರ್' ಚಿತ್ರದ ಕಿಸ್ಸಿಂಗ್ ದೃಶ್ಯ ಸೇರಿದ್ದಂತೆ 11 ಕಡೆ ಕತ್ತರಿ'ದರ್ಬಾರ್' ಚಿತ್ರದ ಕಿಸ್ಸಿಂಗ್ ದೃಶ್ಯ ಸೇರಿದ್ದಂತೆ 11 ಕಡೆ ಕತ್ತರಿ

  ಮಾಸ್ಟರ್ ಚಿತ್ರದಲ್ಲಿ ವಿಜಯ್

  ಮಾಸ್ಟರ್ ಚಿತ್ರದಲ್ಲಿ ವಿಜಯ್

  ವಿಜಯ್ ಸದ್ಯ ಮಾಸ್ಟರ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಮತ್ತು ವಿಜಯ್ ಸೇತುಪತಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಾಸ್ಟರ್ ಸದ್ಯ ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮಾಸ್ಟರ್ ಸಿನಿಮಾ ಈ ವರ್ಷ ದೀಪಾವಳಿಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

  ಕನ್ನಡದ ಮುಖ್ಯ ಚಿತ್ರಮಂದಿರದಲ್ಲಿ ದರ್ಬಾರ್: ಒಡೆಯ ಜಾಗಕ್ಕೆ ತಲೈವಾ ಎಂಟ್ರಿ!ಕನ್ನಡದ ಮುಖ್ಯ ಚಿತ್ರಮಂದಿರದಲ್ಲಿ ದರ್ಬಾರ್: ಒಡೆಯ ಜಾಗಕ್ಕೆ ತಲೈವಾ ಎಂಟ್ರಿ!

  300 ಕೋಟಿ ಕಲೆಕ್ಷನ್ ಮಾಡಿದೆ ಬಿಗಿಲ್

  300 ಕೋಟಿ ಕಲೆಕ್ಷನ್ ಮಾಡಿದೆ ಬಿಗಿಲ್

  ವಿಜಯ್ ಅಭಿನಯದ ಬಿಗಿಲ್ ಸಿನಿಮಾ 300 ಕೋಟಿ ಬಾಚಿಕೊಂಡಿತ್ತು. ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಮಿಂಚಿದ್ದರು. ತಂದೆ ಮತ್ತು ಮಗನಾಗಿ ಕಾಣಿಸಿಕೊಂಡಿದ್ದರು. ನಿರ್ದೇಶಕ ಆಟ್ಲೀ ಸಾರಥ್ಯದಲ್ಲಿ ಬಂದ ಬಿಗಿಲ್ 300 ಕೋಟಿ ಕಲೆಕ್ಷನ್ ಮಾಡುವ ಮೂಲಕ 2019ರ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ.

  English summary
  Vijay beats actor Rajinikanth to become the highest paid Tamil Actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X