BJP ಜೊತೆ ಕೈ ಜೋಡಿಸುತ್ತಾರಾ ವಿಜಯ್? ಪಕ್ಷದ ಹೆಸರಿನಿಂದಲೇ ಶುರು ಹೊಸ ವಿವಾದ
ತಮಿಳು ನಟ ದಳಪತಿ ವಿಜಯ್ ಸ್ವಂತ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಈಗಾಗಲೇ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ. ಮಾಜಿ ಸಿಎಂಗಳಾದ ಜಯಲಲಿತಾ ಹಾಗೂ ಕರುಣಾನಿಧಿ ನಿಧನದ ಬಳಿಕ ತಮಿಳುನಾಡಿದ ಮಾಸ್ ರಾಜಕೀಯ ನಾಯಕನ ಕೊರತೆ ಇದೆ. ಈ ಅವಕಾಶವನ್ನು ಕೈವಶ ಮಾಡಿಕೊಳ್ಳಲು ವಿಜಯ್ ಮುಂದಾಗಿರುವಂತೆ ಕಾಣುತ್ತಿದೆ.
60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ಕಾಲಿವುಡ್ ಸ್ಟಾರ್ ನಟನಾಗಿ ಬೆಳೆದಿದ್ದಾರೆ. ರಜನಿಕಾಂತ್ ಬಳಿಕ ಆ ಮಟ್ಟಿಗಿನ ಕ್ರೇಜ್ ಇರುವ ಮತ್ತೊಬ್ಬ ನಟ ಎನಿಸಿಕೊಂಡಿದ್ದಾರೆ. ಇನ್ನು ಪರೋಕ್ಷವಾಗಿ ತಮ್ಮ ಸಿನಿಮಾಗಳಲ್ಲೂ ಭ್ರಷ್ಟ ರಾಜಕಾರಣದ ವಿರುದ್ಧ ಮಾತನಾಡುತ್ತಾ ಬಂದಿದ್ದರು. ಹಾಗಾಗಿ ವಿಜಯ್ ರಾಜಕೀಯರಂಗಕ್ಎ ಬರುತ್ತಾರೆ ಎನ್ನುವ ಅನುಮಾನ ಕೆಲವರಲ್ಲಿ ಇತ್ತು. ಈಗ ಅದು ನಿಜವಾಗುತ್ತಿದೆ.

ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ದಳಪತಿ ವಿಜಯ್ ವಿರುದ್ಧ ಟೀಕೆಗಳು ಶುರುವಾಗಿದೆ. ವಿಜಯ್ ಪಕ್ಷದ ಹೆಸರಿನ ಬಗ್ಗೆಯೇ ಬೇರೆ ಪಕ್ಷದ ನಾಯಕರು ಚಕಾರ ಎತ್ತಿದ್ದಾರೆ. ತಮಿಳಗಂ ಎಂದು ಪಕ್ಷವನ್ನು ಹೆಸರಿಸುವ ಮೂಲಕ ನಟ ವಿಜಯ್ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಡಿಎಂಕೆ ಬೆಂಬಲಿಗರು ಆರೋಪಿಸಿದ್ದಾರೆ.
ವಿಜಯ್ ತಮ್ಮ ಪಕ್ಷಕ್ಕೆ 'ತಮಿಳಗ ವೆಟ್ರಿ ಕಳಗಂ' ಎಂದು ಹೆಸರಿಟ್ಟಿದ್ದಾರೆ. ತಾವೇ ಇನ್ನು ಅಧಿಕೃತವಾಗಿ ಸ್ಥಾಪನೆಯಾಗದ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅಭಿಮಾನಿಗಳು ವಿಜಯ್ ರಾಜಕೀಯ ನಡೆಯನ್ನು ಸ್ವಾಗತಿಸಿದ್ದಾರೆ. ದೊಡ್ಡ ಅಭಿಮಾನಿ ಬಳಗ ಇದೆ ಎಂದ ಮಾತ್ರಕ್ಕೆ ರಾಜಕಾರಣದಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ವಿಜಯ್‌ಗೆ ಸಿನಿಮಾ ಸಾಕಾಗಿತ್ತು ಎನ್ನುವವರು ಇದ್ದಾರೆ. ಮತ್ತೆ ಕೆಲವರು ರಾಜಕೀಯಕ್ಕೆ ಬಂದರೂ ವಿಜಯ್ ಸಿನಿಮಾ ಮಾಡುವುದನ್ನು ನಿಲ್ಲಿಸಬಾರದು ಎಂದು ಮನವಿ ಮಾಡುತ್ತಿದ್ದಾರೆ.

ದ್ರಾವಿಡ ನಾಯಕರ ಸುದೀರ್ಘ ಹೋರಾಟದ ಫಲವಾಗಿ ರಾಜ್ಯವು ತಮಿಳುನಾಡು ಎನ್ನುವ ಹೆಸರು ಪಡೆದಿದೆ. ದ್ರಾವಿಡ ರಾಜಕೀಯ ಪರಂಪರೆ ಇದೆ. ಆದರೆ ವಿಜಯ್ ಅದನ್ನು ಬಿಟ್ಟು 'ತಮಿಳಗಂ' ಎನ್ನುವ ಪದವನ್ನು ಪಕ್ಷ ಹೆಸರಿನಲ್ಲಿ ಸೇರಿಸಿರುವುದು ಸರಿಯಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಕೈ ಜೋಡಿಸಿರುವುದೇ ಇದಕ್ಕೆ ಕಾರಣ ಎಂದು ಡಿಎಂಕೆ ಐಟಿ ವಿಭಾಗದ ಸದಸ್ಯರು ಹಾಗೂ ಹಿಂಬಾಲಕರು ಹೇಳುತ್ತಿದ್ದಾರೆ.
'ತಮಿಳುನಾಡು' ಎಂದರೆ ತಮಿಳು ರಾಷ್ಟ್ರ ಎನ್ನುವ ಅರ್ಥ. ಆದರೆ 'ತಮಿಳಗಂ' ತಮಿಳು ಜನರ ಮನೆ ಎನ್ನುವ ಅರ್ಥವಿದೆ. ದ್ರಾವಿಡ ನಾಯಕರು ತಮ್ಮದು ತಮಿಳು ರಾಷ್ಟ್ರ ಎಂದು ಹೋರಾಟ ಮಾಡುತ್ತಾ ಬಂದರು. ಅದೇ ಹೆಸರನ್ನು ರಾಜ್ಯಕ್ಕೆ ಇಟ್ಟರು. ತಮಿಳುನಾಡು ಎಂದೇ ಕರೆಯುತ್ತಾ ಬಂದರು. ಆದರೆ ಪ್ರಸ್ತುತ ರಾಜಕೀಯ ವಾತಾವರಣಕ್ಕೆ ತಕ್ಕಂತೆ ವಿಜಯ್ 'ಕಳಗಂ' ಎನ್ನುವ ಪದ ಬಳಸಿದ್ದಾರೆ ಎನ್ನುವ ಚರ್ಚೆ ನಡೀತಿದೆ.
ಡಿಎಂಕೆ ಹಾಗೂ ಎಐಎಡಿಎಂಕೆ ರೀತಿಯ ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ ಬಿಜೆಪಿ ತಮಿಳುನಾಡಿನಲ್ಲಿ ನೆಲೆಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಅದೇ ಕಾರಣಕ್ಕೆ ಕಳಗಂ ಬದಲಿಗೆ ತಮಿಳಗಂ ಎನ್ನುವ ಪದವನ್ನು ಬಿಜೆಪಿ ಹೆಚ್ಚು ಬಳುಸುತ್ತಿದೆ. ಆದರೆ ವಿಜಯ್ ಈಗ ಕಳಗಂ ಬಿಟ್ಟು ತಮಿಳಗಂ ಎನ್ನುವ ಪದ ಬಳಸಿದ್ದು ಯಾಕೆ? ಎನ್ನುವುದು ಕೆಲವರ ವಾದ.
ವಿಜಯ್ ತಮಿಳಗಂ ಎನ್ನುವ ಪದ ಬಳಸಿ ಬಿಜೆಪಿಗೆ ವಿರುದ್ಧವಾಗಿ ಇರುವುದಾಗಿ ಹೇಳುತ್ತಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯ. ಮತ್ತೊಂದು ಕಡೆ ತಮಿಳಗಂ ಎಂದು ಬಳಸಿ ನಮ್ಮದು ದ್ರಾವಿಡ ಪಕ್ಷ ಅಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎನ್ನುವು ಕೆಲವರ ಲೆಕ್ಕಾಚರ. ಒಟ್ಟಾರೆ ವಿಜಯ್ ರಾಜಕೀಯ ಪಕ್ಷದ ಹೆಸರಿನೊಂದಿಗೆ ಟೀಕೆ, ಆರೋಪಗಳು ಶುರುವಾಗಿದೆ. ಈ ಆರೋಪಗಳಿಗೆಲ್ಲಾ ನಟ ದಳಪತಿ ವಿಜಯ್ ಹೇಗೆ ಉತ್ತರ ನೀಡುತ್ತಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಸದ್ಯ ಪಕ್ಷ ಘೋಷಿಸಿರುವ ನಟ ವಿಜಯ್ ಲೋಕಸಭೆ ಚುನಾವಣೆಯಿಂದ ದೂರ ಇರಲು ನಿರ್ಧರಿಸಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ವಿಜಯ್ ಡಿಎಂಕೆಗೆ ವಿರುದ್ಧ, ಹಾಗಾಗಿ ಆ ಚುನಾವಣೆಗೆ ಗಮನ ಹರಿಸಿದ್ದಾರೆ. ಪಕ್ಷದ ಹೆಸರು ಹೀಗೆ ಇಟ್ಟಿರುವುದಕ್ಕೂ ಇದೇ ಕಾರಣ ಎನ್ನಲಾಗ್ತಿದೆ.


Click it and Unblock the Notifications











