For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಂಕಷ್ಟದಲ್ಲಿ ವಿಜಯ್ ಅಭಿಮಾನಿಗಳ ಅನುಕರಣೀಯ ಸೇವೆ

  |

  ಕೊರೊನಾ ಸಂಕಷ್ಟದ ಸಮಯದಲ್ಲಿ ಸಿನಿಮಾ ನಟ-ನಟಿಯರು ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ. ಅದರಲ್ಲಿಯೂ ಬಾಲಿವುಡ್ ನಟ-ನಟಿಯರ ಮೇಲಂತೂ ಆರೋಪ ಹೆಚ್ಚಿಗೇ ಇದೆ.

  ಕೆಲವಾರು ನಟರು ಈ ಸಂಕಷ್ಟದ ಸಮಯಕ್ಕೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ಸೋನು ಸೂದ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಇನ್ನೂ ಕೆಲವು ನಟರು ಆಮ್ಲಜನಕ ಪೂರೈಕೆ, ಬೆಡ್ ಪೂರೈಕೆ, ಉಚಿತ ಆಹಾರ ಪೂರೈಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  ದಕ್ಷಿಣ ಭಾರತದ ನಟರು ಕೊರೊನಾ ಸಂಕಷ್ಟಕ್ಕೆ ಸ್ಪಂದಿಸಿರುವುದು ಹೆಚ್ಚಾಗಿ ಸದ್ದಿಯಾಗಿಲ್ಲ. ತಮಿಳಿನ ಖ್ಯಾತ ನಟ ವಿಜಯ್ ಅವರ ಅಭಿಮಾನಿಗಳು ಮಾತ್ರ ಕೊರೊನಾ ರೋಗಿಗಳ ನೆರವಿಗೆ ನಿಂತಿರುವುದು ಪ್ರಶಂಸೆಗೆ ಗುರಿಯಾಗಿದೆ.

  ತಮಿಳುನಾಡಿನ ವಿರುಧಾಚಲಮ್‌ನ ವಿಜಯ್ ಅಭಿಮಾನಿಗಳು ಕೊರೊನಾದಿಂದ ಸಂಕಷ್ಟದಲ್ಲಿರುವವರಿಗಾಗಿ 10 ಆಮ್ಲಜನಕ ಸಿಲಿಂಡರ್‌ಗಳು, ಹಲವು ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್‌ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ.

  ವಿಜಯ್ ಅಭಿಮಾನಿಗಳು ನೆರವಿನ ಹಸ್ತ ಚಾಚಿರುವುದು ಇದು ಮೊದಲೇನಲ್ಲ. ಚೆನ್ನೈ ಹಾಗೂ ಕೇರಳ ಪ್ರವಾಹದ ಸಂದರ್ಭದಲ್ಲಿ, ಕಳೆದ ವರ್ಷ ಕೊರೊನಾ ಸಮಯದಲ್ಲಿ ದೊಡ್ಡ ಮಟ್ಟದ ಸಹಾಯವನ್ನು ವಿಜಯ್ ಅಭಿಮಾನಿಗಳ ಸಂಘದ ವತಿಯಿಂದ ಮಾಡಲಾಗಿತ್ತು.

  ಅಂಗಲಾಚಿ ಬೇಡಿಕೊಂಡು ಕಣ್ಣೀರು ಹಾಕಿದ ಶಿಲ್ಪಾ ಶೆಟ್ಟಿ | Filmibeat Kannada

  ಸ್ವತಃ ನಟ ವಿಜಯ್ ಸಹ ಹಲವಾರು ಸಂದರ್ಭದಲ್ಲಿ ಪ್ರಕೃತಿ ವಿಕೋಪಗಳಿಗೆ, ಅಭಿಮಾನಿಗಳ ಸಂಕಷ್ಟಕ್ಕೆ, ಕೊರೊನಾ ಸಮಯದಲ್ಲಿ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದರು. ಕಳೆದ ವರ್ಷ ಕೊರೊನಾ ಸಮಯದಲ್ಲಿ 1.30 ಕೋಟಿಯನ್ನು ಸರ್ಕಾರಕ್ಕೆ ದೇಣಿಗೆ ನೀಡಿದ್ದರು.

  English summary
  Vijay fans gesture amid second wave of COVID19 pandemic in Tamilnadu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X