For Quick Alerts
  ALLOW NOTIFICATIONS  
  For Daily Alerts

  Beast: 'ಬೀಸ್ಟ್' ಚೆನ್ನಾಗಿಲ್ಲವೆಂದು ಸಿನಿಮಾ ಪರದೆಗೆ ಬೆಂಕಿ ಹಚ್ಚಿದ ಅಭಿಮಾನಿಗಳು!

  |

  ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಿನಿಮಾ ನೋಡಿದ ಹಲವರು ಸಿನಿಮಾ ಸಾಧಾರಣ ಮಟ್ಟಕ್ಕೂ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ವಿಜಯ್ ಒಬ್ಬರು. ತಮ್ಮ ನಟನ ಸಿನಿಮಾ ಚೆನ್ನಾಗಿಲ್ಲದಿರುವುದನ್ನು ಸಹಿಸಿಕೊಳ್ಳಲಾಗದೆ ಅಭಿಮಾನಿಗಳು 'ಬೀಸ್ಟ್' ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರದ ಪರದೆಗೆ ಬೆಂಕಿ ಹಚ್ಚಿರುವ ಘಟನೆ ಇಂದು ನಡೆದಿದೆ.

  ಮಧುರೈನ ಮೇಲೂರು ಗಣೇಶ್ ಚಿತ್ರಮಂದಿರದಲ್ಲಿ 'ಬೀಸ್ಟ್' ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು, ಆ ಸಮಯದಲ್ಲಿ ಸಿನಿಮಾ ಚೆನ್ನಾಗಿಲ್ಲವೆಂದು, ಬಹಳ ಬೋರ್ ಹೊಡೆಸುತ್ತಿದೆ ಎಂದು ವಿಜಯ್ ಅಭಿಮಾನಿಗಳೇ ಸಿನಿಮಾದ ಪರದೆಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಇದೇ ಮಾದರಿಯ ಕ್ಯಾಪ್ಷನ್ನೊಂದಿಗೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚಿರುವ ವಿಡಿಯೋ ಹರಿದಾಡುತ್ತಿದೆ.

  KGF 2 Multiplex Audience Review | Yash | PUBLIC Reaction | KGF 2 Public Talk | KGF 2 Review Kannada

  ಮತ್ತೊಂದು ವರದಿಯ ಪ್ರಕಾರ, ಅಭಿಮಾನಿಗಳು ಪರದೆಗೆ ಬೆಂಕಿ ಇಟ್ಟಿಲ್ಲ ಬದಲಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಪರದೆಗೆ ತಾನೇ ಬೆಂಕಿ ತಗುಲಿದೆ ಎನ್ನಲಾಗುತ್ತಿದೆ. ಆರಂಭದಲ್ಲಿ ನಿಧಾನಕ್ಕೆ ಆರಂಭವಾದ ಬೆಂಕಿ ಬಳಿಕ ಪರದೆಯನ್ನು ಆವರಿಸಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

  ವಿಜಯ್‌ರ 'ಬೀಸ್ಟ್' ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇತ್ತು, ಆದರೆ ಸಿನಿಮಾದ ಬಗ್ಗೆ ಋಣಾತ್ಮಕ ವಿಮರ್ಶೆಗಳು ಬಂದಿರುವುದು ವಿಜಯ್ ಅಭಿಮಾನಿಗಳು ಬೇಸರಗೊಳ್ಳುವಂತೆ ಮಾಡಿದೆ.

  ಸಾಮಾಜಿಕ ಜಾಲತಾಣದಲ್ಲಿ 'ಡಿಸಾಸ್ಟರ್ ಬೀಸ್ಟ್' ಹ್ಯಾಷ್‌ಟ್ಯಾಗ್ ಚಾಲ್ತಿಯಲ್ಲಿದ್ದು, ವಿಜಯ್‌ರ ಎದುರಾಳಿ ನಟ ಎಂದೇ ಗುರುತಿಸಲಾಗುವ ನಟ ಅಜಿತ್ ಅಭಿಮಾನಿಗಳಂತೂ ವಿಜಯ್‌ರ 'ಬೀಸ್ಟ್' ಸಿನಿಮಾದ ಬಗ್ಗೆ ಬಹಳ ಟ್ರೋಲ್ ಮಾಡುತ್ತಿದ್ದಾರೆ.

  'ಬೀಸ್ಟ್' ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ನಟಿಸಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದು, ಸಿನಿಮಾವು ಆಕ್ಷನ್ ಕಾಮಿಡಿ ಕತೆಯನ್ನು ಹೊಂದಿದೆ. ಮಾಜಿ ಸೈನಿಕನ ಪಾತ್ರದಲ್ಲಿ ನಟಿಸಿರುವ ವಿಜಯ್, ಭಯೊತ್ಪಾದಕರಿಂದ ಒತ್ತೆಯಾಗಿಸಿಕೊಳ್ಳಲಾಗಿರುವ ಮಾಲ್‌ ಅನ್ನು ಅದರಲ್ಲಿನ ಜನರನ್ನು ಹೇಗೆ ಕಾಪಾಡುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾದಲ್ಲಿ ನಟ ಯೋಗಿ ಬಾಬು ಸಹ ಇದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸನ್ ನೆಟ್‌ವರ್ಕ್ಸ್‌ನ ಕಲಾನಿಧಿ ಮಾರನ್.

  English summary
  Actor Vijay's fan upset with his new movie Beast. They set fire on movie screen which is showing beast movie in Madhurai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X