For Quick Alerts
  ALLOW NOTIFICATIONS  
  For Daily Alerts

  ಸೈಕಲ್ ನಲ್ಲಿ ಬಂದು ಮತಚಲಾಯಿಸಿ ಸಂಚಲನ ಮೂಡಿಸಿದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ನಟ ವಿಜಯ್

  |

  ತಮಿಳು ಸಿನಿಮಾರಂಗದ ಖ್ಯಾತ ನಟ ವಿಜಯ್ ವಿದೇಶಕ್ಕೆ ಪಯಣ ಬೆಳೆಸಿದ್ದಾರೆ. ನಿನ್ನೆ (ಏಪ್ರಿಲ್ 6) ರಾತ್ರಿ ದಳಪತಿ ಏರ್ ಪೋರ್ಟ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ನಿನ್ನೆ (ಏಪ್ರಿಲ್ 6) ತಮಿಳುನಾಡು ವಿಧಾನಸಭೆ ಚುನಾವಣೆ ನಡೆದಿದ್ದು, ನಟ ವಿಜಯ್ ಸೈಕಲ್ ನಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವ ಮೂಲಕ ಸಂಚಲನ ಮೂಡಿಸಿದ್ದರು. ಕೇಂದ್ರ ಸರ್ಕಾರದ ವಿರುದ್ಧ ವಿಜಯ್ ಅಸಮಾಧಾನ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ದಳಪತಿಯ ಪ್ರತಿಭಟನೆ ಎನ್ನುವ ಚರ್ಚೆ ಜೋರಾಗಿ ನಡೆದಿತ್ತು.

  ಮತಚಲಾಯಿಸಲು ಸೈಕಲ್ ಏರಿ ಬಂದ ವಿಜಯ್; ಸ್ಪಷ್ಟನೆ ನೀಡಿದ ದಳಪತಿ ಟೀಂಮತಚಲಾಯಿಸಲು ಸೈಕಲ್ ಏರಿ ಬಂದ ವಿಜಯ್; ಸ್ಪಷ್ಟನೆ ನೀಡಿದ ದಳಪತಿ ಟೀಂ

  ಇದರ ಬೆನ್ನಲ್ಲೇ ವಿಜಯ್ ವಿದೇಶಕ್ಕೆ ಹಾರಿದ್ದಾರೆ. ಅಂದಹಾಗೆ ವಿಜಯ್ ವಿದೇಶಕ್ಕೆ ವಿಮಾನ ಹತ್ತಿರುವುದು ಸಿನಿಮಾ ಚಿತ್ರೀಕರಣಕ್ಕಾಗಿ. ಇತ್ತೀಚಿಗಷ್ಟೆ ದಳಪತಿ 65 ಸಿನಿಮಾ ಅನೌನ್ಸ್ ಆಗಿದ್ದು, ಮುಹೂರ್ತ ಕೂಡ ನಡೆದಿತ್ತು. ಇದೀಗ ಮೊದಲ ಹಂತದ ಚಿತ್ರೀಕರಣವನ್ನು ಜಾರ್ಜಿಯಾದಲ್ಲಿ ಮಾಡಲು ಸಿನಿಮಾತಂಡ ನಿರ್ಧರಿಸಿದೆ.

  ಹಾಗಾಗಿ ರಾತ್ರಿ ವಿಜಯ್ ಮತ್ತು ತಂಡ ಜಾರ್ಜಿಯಾಗೆ ಹಾರಿದ್ದಾರೆ. ವಿಜಯ್ ಏರ್ ಪೋರ್ಟ್ ನಲ್ಲಿರುವ ಫೋಟೋವನ್ನು ಅಭಿಮಾನಿಗಳು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಈಗ ಫ್ಯಾನ್ಸ್ ಪೇಜ್ ಗಳಲ್ಲಿ ಹರಿದಾಡುತ್ತಿದೆ.

  ದಳಪತಿ 65 ಚಿತ್ರಕ್ಕೆ ನೆಲ್ಸನ್ ದಿಲೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಪೂಜಾ ವಿಜಯ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಖತ್ ಎಕ್ಸಾಯಿಟ್ ಆಗಿರುವ ಪೂಜಾ ಚಿತ್ರೀಕರಣದಲ್ಲಿ ಭಾಗಿಯಾಗುವುದನ್ನು ಎದುರು ನೋಡುತ್ತಿದ್ದೀನಿ ಎಂದು ಟ್ವೀಟ್ ಮಾಡಿದ್ದರು.

  ಸೈಕಲ್ ನಲ್ಲಿ ಬಂದು ವೋಟ್ ಹಾಕಿ ಮೋದಿಗೆ ಟಾಂಗ್ ಕೊಟ್ಟ ವಿಜಯ್ | Filmibeat Kannada

  16 ದಿನಗಳ ಕಾಲ ವಿಜಯ್ ಮತ್ತು ತಂಡ ಜಾರ್ಜಿಯಾದಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿದೆ. ಬಳಿಕ ಮತ್ತೆ ಚೆನ್ನೈಗೆ ವಾಪಸ್ ಆಗಲಿದೆ. ಮೇ ತಿಂಗಳಿಂದ ಚೆನ್ನೈನಲ್ಲಿ 2ನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ವಿಜಯ್ ಕೊನೆಯದಾಗಿ ಮಾಸ್ಟರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Tamil Actor Vijay heads to georgia for Thalapathy 65 movie shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X