ವಿಜಯ್-ಲೋಕೇಶ್ ಸಿನಿಮಾ ಶೂಟಿಂಗ್ ಪ್ರಾರಂಭ! ಕತೆಯದ್ದೇ ಕುತೂಹಲ

By ಫಿಲ್ಮಿಬೀಟ್ ಡೆಸ್ಕ್

ತಮಿಳು ಸ್ಟಾರ್ ನಟ ವಿಜಯ್, ಸ್ಟಾರ್ ನಿರ್ದೇಶಕ ಲೋಕೇಶ್ ಕನಕರಾಜ್‌ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ಖಾತ್ರಿಯಾಗಿದ್ದು, ಒಟ್ಟಿಗೆ ಸಿನಿಮಾ ಮಾಡುತ್ತಿರುವುದನ್ನು ಖಚಿತಪಡಿಸಲೆಂದೇ ಚಿತ್ರವೊಂದನ್ನು ಈ ನಟ-ನಿರ್ದೇಶಕ ಜೋಡಿ ಬಿಡುಗಡೆ ಮಾಡಿದೆ.

ವಿಜಯ್ ಹಾಗೂ ಕನಕರಾಜ್ ಕೈಯಲ್ಲಿ ವಿಷ್ಣುವರ್ಧನ್ ಧರಿಸುತ್ತಿದ್ದ ಮಾದರಿಯ ಬಳೆಯೊಂದನ್ನು ಹಿಡಿದುಕೊಂಡು ಜಗಳಕ್ಕೆ ನಿಂತಂತೆ ಫೋಸು ಕೊಟ್ಟಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬ ಸಂದೇಶವನ್ನು ಅಭಿಮಾನಿಗಳಿಗೆ ರವಾನಿಸಿದ್ದಾರೆ.

ಈ ಹಿಂದೆ ವಿಜಯ್‌ಗೆ ಮಾಸ್ಟರ್‌ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್‌ಗೆ ಇದು ವಿಜಯ್‌ ಜತೆ ಎರಡನೇ ಪ್ರಾಜೆಕ್ಟ್‌. ಈ ಮೂಲಕ ಮಾಸ್ಟರ್‌ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಸಿದ್ಧವಾಗಿದೆ. ಈಗಾಗಲೇ ಜನವರಿ 2ರಿಂದ ಶೂಟಿಂಗ್‌ ಸಹ ಶುರುವಾಗಿದೆ.

Vijay-Lokesh Kanagraj Movie Shooting Started, Anirudh Ravichandran Will Give Music

ಮಾಸ್ಟರ್‌ ಮತ್ತು ವರಿಸು ಸಿನಿಮಾದ ಬಳಿಕ ಮೂರನೇ ಸಲ ದಳಪತಿ ವಿಜಯ್‌ ಜತೆ ಕೈ ಜೋಡಿಸುತ್ತಿದೆ 7 ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌. ಸದ್ಯಕ್ಕೆ ದಳಪತಿ 67 ಎಂದು ತಾತ್ಕಾಲಿಕ ಶೀರ್ಷಿಕೆಯಡಿ ಘೋಷಣೆ ಆಗಿರುವ ಈ ಚಿತ್ರವನ್ನು ಲೋಕೇಶ್‌ ಕನಗರಾಜ್‌ ನಿರ್ದೇಶನ ಮಾಡಲಿದ್ದಾರೆ.

ವಿಜಯ್ ನಟನೆಯ ಖೈದಿ, ಮಾಸ್ಟರ್‌ ಮತ್ತು ಬೀಸ್ಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಕ್‌ಸ್ಟಾರ್‌ ಅನಿರುದ್ಧ ರವಿಚಂದ್ರನ್‌ ದಳಪತಿ 67ಕ್ಕೂ ಸಂಗೀತ ನೀಡಲಿದ್ದು, ನಾಲ್ಕನೇ ಬಾರಿ ವಿಜಯ್‌ ಜತೆ ಕೈ ಜೋಡಿಸಿದ್ದಾರೆ.

ಇನ್ನುಳಿದಂತೆ ಮನೋಜ್‌ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್‌ ರಾಜ್‌ ಸಂಕಲನ, ಸತೀಸ್‌ ಕುಮಾರ್‌ ಕಲೆ, ದಿನೇಶ್‌ ನೃತ್ಯ ನಿರ್ದೇಶನ, ಸಂಭಾಷಣೆ ಲೋಕೇಶ್‌ ಕನಗರಾಜ್‌, ರತ್ನ ಕುಮಾರ್‌, ಧೀರಜ್‌ ವೈದ್ಯ, ರಾಮಕುಮಾರ್‌ ಬಾಲಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಮಾಸ್ಟರ್‌ ಮತ್ತು ವರಿಸು ಸಿನಿಮಾದ ಬಳಿಕ ಮೂರನೇ ಸಲ ದಳಪತಿ ವಿಜಯ್‌ ಜತೆ ಕೈ ಜೋಡಿಸುತ್ತಿದೆ 7 ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌. ಸದ್ಯಕ್ಕೆ ವಿಜಯ್-ದಳಪತಿ ಸಿನಿಮಾಕ್ಕೆ 'ದಳಪತಿ 67' ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದ್ದು, ಶೀಘ್ರವೇ ಸಿನಿಮಾದ ಹೆಸರು ಬಹಿರಂಗಗೊಳ್ಳಲಿದೆ.

More from Filmibeat

English summary
Vijay and Lokesh Kanagraj's new movie shooting starts. Anirudh Ravichandran will give music.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X