ಮೂರು ದಿನಕ್ಕೆ ವಿಜಯ್ ನಟನೆಯ 'ಮಾಸ್ಟರ್' ಗಳಿಸಿದ್ದೆಷ್ಟು?

ತಮಿಳು ನಟ ವಿಜಯ್ ಮತ್ತು ವಿಜಯ್ ಸೇತುಪತಿ ನಟನೆಯ ಮಾಸ್ಟರ್ ಸಿನಿಮಾ ಮೂರನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಬಿಸಿನೆಸ್ ಮಾಡಿದೆ. ಆದರೆ, ನಿರೀಕ್ಷೆಯಂತೆ ಕಲೆಕ್ಷನ್ ಏರಿಕೆಯಾಗಿಲ್ಲ. ಇಳಿಮುಖವಾಗಿ ಸಾಗಿದೆ ಎನ್ನುವುದು ನಿರಾಸೆ ಮೂಡಿಸಿದೆ.

Recommended Video

Australia ದಲ್ಲೂ ಶುರುವಾಯ್ತು Master ಹವಾ | Filmibeat Kannada

ವರದಿಗಳ ಪ್ರಕಾರ, ಮಾಸ್ಟರ್ ಸಿನಿಮಾ ಮೂರನೇ ದಿನಕ್ಕೆ 19 ಕೋಟಿ ಗಳಿಕೆ ಕಂಡಿದೆಯಂತೆ. ಈ ಮೂಲಕ ಮೊದಲ ಮೂರು ದಿನಗಳಲ್ಲಿ ಮಾಸ್ಟರ್ ಸಿನಿಮಾ ಒಟ್ಟು 84 ಕೋಟಿ ಕಲೆಕ್ಷನ್ ಮಾಡಿದೆ. ಅದರಲ್ಲಿ ನೆಟ್ ಗಳಿಕೆ 70 ಕೋಟಿ ಎಂದು ಅಂದಾಜು ಹಾಕಲಾಗಿದೆ.

ಮೊದಲ ದಿನದ ಲೆಕ್ಕಾಚಾರದ ಬಳಿಕ ಮಾಸ್ಟರ್ ಸಿನಿಮಾ ಮೊದಲ ವಾರಾಂತ್ಯಕ್ಕೆ ನೂರು ಕೋಟಿ ಕ್ಲಬ್ ಸೇರಲಿದೆ ಎಂದು ಚರ್ಚೆಯಾಗಿತ್ತು. ಆದ್ರೀಗ, ಲೆಕ್ಕಾಚಾರದಲ್ಲಿ ಸ್ವಲ್ಪ ಹಿನ್ನಡೆ ಆಗುವ ಲಕ್ಷಣ ಎದುರಾಗಿದೆ.

Vijay Master Movie Day 3 Collection in India

ಮೂರನೇ ದಿನ ತಮಿಳುನಾಡಿನಲ್ಲಿ 12.5 ಕೋಟಿ, ಆಂಧ್ರ-ತೆಲಂಗಾಣದಲ್ಲಿ ತಲಾ 2.5 ಕೋಟಿ, ಕರ್ನಾಟಕದಲ್ಲಿ 1.7 ಕೋಟಿ, ಕೇರಳದಲ್ಲಿ 75 ಲಕ್ಷ ಹಾಗೂ ಇತರೆ ರಾಜ್ಯಗಳಿಂದ 1.25 ಕೋಟಿ ಗಳಿಕೆ ಕಂಡಿದೆಯಂತೆ.

ಒಟ್ಟಾರೆ ಕಲೆಕ್ಷನ್‌ನಲ್ಲಿ ತಮಿಳುನಾಡಿನಿಂದಲೇ 51.50 ಕೋಟಿ ಬಂದಿದೆ. ಕೊರೊನಾ ಭೀತಿಯ ನಡುವೆಯೂ ಮಾಸ್ಟರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಮಟ್ಟದಲ್ಲಿ ಲಾಭ ಮಾಡಿರುವುದು ನಿರ್ಮಾಪಕರು ನಿಟ್ಟುಸಿರು ಬಿಡುವಂತಾಗಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್, ವಿಜಯ್ ಸೇತುಪತಿ ಹಾಗೂ ಮಾಳವಿಕಾ ಮೋಹನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Tamil superstar Vijay starrer Master movie collect 84 crore in first weekend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X