For Quick Alerts
  ALLOW NOTIFICATIONS  
  For Daily Alerts

  ಚೆನ್ನೈಗೆ ಮರಳುತ್ತಿದ್ದಂತೆ ವಿವೇಕ್ ಕುಟುಂಬವನ್ನು ಭೇಟಿ ಮಾಡಿದ ವಿಜಯ್

  |

  ಕೆಲವು ದಿನಗಳ ಹಿಂದಷ್ಟೆ ತಮಿಳಿನ ಖ್ಯಾತ ನಟ ವಿವೇಕ್ ಅಸುನೀಗಿದರು. ತಮಿಳಿನ ಖ್ಯಾತ ನಟ-ನಟಿಯರು, ರಾಜಕಾರಣಿಗಳು ವಿವೇಕ್ ಅಗಲಿಕೆಗೆ ಸಂತಾಪ ಸೂಚಿಸಿದ್ದರು. ಕೋವಿಡ್ ಕಾಲವಾದ್ದರಿಂದ ಹೆಚ್ಚಿನ ಮಂದಿ ವಿವೇಕ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗಿರಲಿಲ್ಲ.

  ತಮಿಳಿನ ಖ್ಯಾತ ನಟ ವಿಜಯ್ ಸಹ ವಿವೇಕ್‌ಗೆ ಆತ್ಮೀಯರಾಗಿದ್ದರು. ಆದರೆ ವಿವೇಕ್ ನಿಧನಹೊಂದಿದಾಗ ವಿಜಯ್ ಯಾವುದೇ ಪ್ರತಿಕ್ರಿಯೆ ಅಥವಾ ಸಂತಾಪ ಸಂದೇಶ ನೀಡಿರಲಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು.

  ವಿವೇಕ್ ತೀರಿಕೊಂಡ ದಿನ ವಿಜಯ್ ಚೆನ್ನೈನಲ್ಲಿರಲಿಲ್ಲ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಿದ್ದರು. ಇದೀಗ ಅವರು ಚೆನ್ನೈಗೆ ಮರಳಿದ್ದು ವಿವೇಕ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

  ಇನ್ನೂ ಹೆಸರಿಡದ ತಮ್ಮ 65ನೇ ಸಿನಿಮಾದ ಚಿತ್ರೀಕರಣಕ್ಕೆಂದು ವಿಜಯ್ ಅವರು ಜಾರ್ಜಿಯಾಕ್ಕೆ ತೆರಳಿದ್ದರು. ಅಲ್ಲಿಂದ ಆಗಮಿಸಿದ ಕೂಡಲೇ ವಿವೇಕ್ ಅವರ ಕುಟುಂಬವನ್ನು ವಿಜಯ್ ಭೇಟಿಯಾಗಿದ್ದಾರೆ.

  ವಿವೇಕ್ ಹಾಗೂ ವಿಜಯ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. 2000 ರಲ್ಲಿ ಬಿಡುಗಡೆ ಆದ 'ಖುಷಿ' ನಲ್ಲಿ ಈ ಇಬ್ಬರೂ ನಟರು ಒಟ್ಟಿಗೆ ನಟಿಸಿದ್ದರು ಆ ನಂತರ 'ಬದ್ರಿ', ತಮಿಳನ್, ಯೂತ್, ಆತಿ, ಕುರುವಿ, ಬಿಗಿಲ್ ಇನ್ನೂ ಕೆಲವು ಸಿನಿಮಾಗಳಲ್ಲಿ ವಿಜಯ್ ಹಾಗೂ ವಿವೇಕ್ ಒಟ್ಟಿಗೆ ನಟಿಸಿದ್ದರು.

  ಮಾಲಾಶ್ರೀಗೆ ಬೆಂಬಲವಾಗಿ ನಿಲ್ತೀವಿ ಎಂದ‌ ದೇವರಾಜ್ | Filmibeat Kannada

  ವಿಜಯ್ ಹಾಗೂ ವಿವೇಕ್ ಒಳ್ಳೆಯ ಗೆಳೆಯರಾಗಿದ್ದರು. ವಿಜಯ್‌ರ ಕಷ್ಟದ ಸಮಯದಲ್ಲಿ ವಿವೇಕ್ ಬಹು ಬೆಂಬಲ ನೀಡಿದ್ದರ ಬಗ್ಗೆ ಹಿಂದೊಮ್ಮೆ ವಿಜಯ್ ಹೇಳಿಕೊಂಡಿದ್ದರು. ಏಪ್ರಿಲ್ 17 ರಂದು ನಟ ವಿವೇಕ್ ಹೃದಯಾಘಾತದಿಂದ ನಿಧನ ಹೊಂದಿದರು.

  English summary
  Actor Vijay met late actor Vivek's family in Chennai. Vijay was in Goergia when Vivek passed away due to heart attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X