twitter
    For Quick Alerts
    ALLOW NOTIFICATIONS  
    For Daily Alerts

    ಐಷಾರಾಮಿ ಕಾರು ವಿವಾದ: ನ್ಯಾಯಮೂರ್ತಿಗಳ ಟೀಕೆ ವಿರುದ್ಧ ವಿಜಯ್‌ ಅರ್ಜಿ!

    |

    ತಮಿಳಿನ ಸ್ಟಾರ್ ನಟ ವಿಜಯ್ ತಮ್ಮ ಐಷಾರಾಮಿ ಕಾರಿನ ವಿಷಯಕ್ಕೆ ಕೆಲವು ದಿನಗಳ ಹಿಂದೆ ಸುದ್ದಿಯಲ್ಲಿದ್ದರು.

    ವಿಜಯ್ 2012ರಲ್ಲಿ ಐಷಾರಾಮಿ ರಾಲ್ಸ್ ರಾಯ್ಸ್ ಗೋಸ್ಟ್ ಕಾರನ್ನು ಇಂಗ್ಲೆಂಡ್‌ನಿಂದ ಖರೀದಿಸಿ ಭಾರತಕ್ಕೆ ತರಿಸಿದ್ದರು. ಇದಕ್ಕೆ ಆಮದು ತೆರಿಗೆಯಿಂದ ವಿನಾಯಿತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ವಿಜಯ್‌ರ ಮನವಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಲ್ಲದೆ ನಟರ ಸಮುದಾಯವನ್ನು ದೂಷಿಸುವ ರೀತಿಯಲ್ಲಿ ನ್ಯಾಯಾಧೀಶರು ಮಾತನಾಡಿದ್ದರು. ಇದು ವಿಜಯ್‌ಗೆ ಅಸಮಾಧಾನ ಉಂಟು ಮಾಡಿತ್ತು.

    ಆ ನಂತರ ತಮ್ಮ ರಾಲ್ಸ್ ರಾಯ್ಸ್ ಗೋಸ್ಟ್ ಕಾರಿನ ಎಂಟ್ರಿ ಟ್ಯಾಕ್ಸ್ (ಆಮದು ತೆರಿಗೆ) 32 ಲಕ್ಷ ಹಣ ಪೂರ್ತಿಯಾಗಿ ಪಾವತಿಸಿರುವ ನಟ ವಿಜಯ್, ಈ ಹಿಂದೆ ನ್ಯಾಯಾಧೀಶರು ತಮ್ಮ ಮೇಲೆ ಮಾಡಿದ್ದ ಟೀಕೆಯನ್ನು ಹಿಂಪಡೆಯಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

    ವಿಜಯ್‌ ನಡೆಯನ್ನು ಕಠುವಾಗಿ ಟೀಕಿಸಿದ್ದ ನ್ಯಾಯಮೂರ್ತಿ

    ವಿಜಯ್‌ ನಡೆಯನ್ನು ಕಠುವಾಗಿ ಟೀಕಿಸಿದ್ದ ನ್ಯಾಯಮೂರ್ತಿ

    ಐಷಾರಾಮಿ ಕಾರಿನ ಆಮದು ತೆರಿಗೆ ವಿನಾಯಿತಿಗೆ ವಿಜಯ್ ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆಯನ್ನು ಇದೇ ಜುಲೈ 13 ರಂದು ನಡೆಸಿದ್ದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ಎಂ ಸುಬ್ರಹ್ಮಣಿಯಂ, ''ತಮಿಳುನಾಡಿನಲ್ಲಿ ಸಿನಿಮಾ ನಟರು ರಾಜ್ಯ ಆಳುವ ನಾಯಕರಾಗಿ ಹೊರಹೊಮ್ಮಿದ್ದಾರೆ, ಅವರನ್ನು ಜನರು ಅನುಸರಿಸುತ್ತಾರೆ. ಹಾಗಾಗಿ ನಾಯಕ ನಟರು ರೀಲ್ ಹೀರೋಗಳಾಗಿ ಮಾತ್ರವೇ ಉಳಿಯದೇ ನಿಜ ಜೀವನದ ಹೀರೋಗಳಾಗಿ ವರ್ತಿಸಬೇಕು'' ಎಂದಿದ್ದರು. ವಿಜಯ್ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅವರ ಉದ್ಯೋಗದ ಮಾಹಿತಿ ಹಾಕದೇ ಇರುವ ಬಗ್ಗೆಯೂ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತೆರಿಗೆ ಜೊತೆಗೆ ಒಂದು ಲಕ್ಷ ರು. ದಂಡ ಕಟ್ಟುವಂತೆಯೂ ಆದೇಶ ನೀಡಿದ್ದರು. ಅಲ್ಲದೆ, ''ರೀಲ್ ಹೀರೋಗಳು ರಿಯಲ್ ಹೀರೋಗಳಂತೆ ವರ್ತಿಸಲಿ '' ಎಂದು ಕಟುವಾಗಿಯೇ ಟೀಕಿಸಿದ್ದರು. ಇದು ವಿಜಯ್‌ ಅಸಮಾಧಾನಕ್ಕೆ ಕಾರಣವಾಗಿತ್ತು.

    ಆಮದು ತೆರಿಗೆ ವಿನಾಯಿತಿ ಕೇಳಿರಲಿಲ್ಲ ವಿಜಯ್ ಪರ ವಕೀಲ

    ಆಮದು ತೆರಿಗೆ ವಿನಾಯಿತಿ ಕೇಳಿರಲಿಲ್ಲ ವಿಜಯ್ ಪರ ವಕೀಲ

    ಇದೀಗ ವಿಜಯ್ ಪರ ಅರ್ಜಿ ಸಲ್ಲಿಸಿರುವ ವಕೀಲರು, ''ವಿಜಯ್, ಕಾರಿನ ಆಮದು ತೆರಿಗೆ ವಿನಾಯಿತಿಗೆಂದು ಅರ್ಜಿ ಸಲ್ಲಿಸಿರಲಿಲ್ಲ, ಬದಲಿಗೆ ಆಮದು ತೆರಿಗೆಯನ್ನು ಪ್ರಶ್ನೆ ಮಾಡಿದ್ದರು. ಭಾರತೀಯ ನಾಗರೀಕನಾಗಿ ಅವರು ತಮ್ಮ ಹಕ್ಕನ್ನು ಚಲಾಯಿಸಿದ್ದರು'' ಎಂದಿದ್ದಾರೆ. ನ್ಯಾಯಮೂರ್ತಿಗಳು ಮಾಡಿದ ಟೀಕೆಯಿಂದ ವಿಜಯ್‌ ಕುರಿತ ತಪ್ಪು ಅಭಿಪ್ರಾಯ ಮೂಡಿದ್ದು, ನ್ಯಾಯಮೂರ್ತಿಗಳು ವಿಜಯ್ ವಿರುದ್ಧ ಮಾಡಿದ ಟೀಕೆಯನ್ನು ಕಡತದಿಂದ ತೆಗೆದು ಹಾಕಬೇಕು ಎಂದು ವಿಜಯ್ ಪರ ವಕೀಲರು ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆಯನ್ನು ನಡೆಸಿರುವ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ.

    ಧನುಶ್ ಸಹ ಅರ್ಜಿ ಸಲ್ಲಿಸಿದ್ದರು

    ಧನುಶ್ ಸಹ ಅರ್ಜಿ ಸಲ್ಲಿಸಿದ್ದರು

    ವಿಜಯ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ನಟರು ವಿದೇಶಗಳಿಂದ ದುಬಾರಿ ಕಾರುಗಳನ್ನು ಆಮದು ಮಾಡಿಕೊಂಡಿದ್ದಾರೆ ಮತ್ತು ಆಮದು ತೆರಿಗೆ ವಿನಾಯಿತಿಗೆ ನ್ಯಾಯಾಲಯಗಳಲ್ಲಿ ಮನವಿ ಸಲ್ಲಿಸಿದ್ದಾರೆ. ನಟ ಧನುಶ್ ಸಹ ರಾಲ್ಸ್ ರಾಯ್ಸ್ ಗೋಸ್ಟ್ ಕಾರನ್ನು ವಿದೇಶದಿಂದ ತರಿಸಿಕೊಂಡಿದ್ದರು. ಅದರ ತೆರಿಗೆ ವಿನಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಜಯ್‌ಗೆ ನ್ಯಾಯಾಲಯ ಛೀಮಾರಿ ಹಾಕಿದ ನಂತರ ತಮ್ಮ ಅರ್ಜಿಯನ್ನು ಅವರು ಹಿಂಪಡೆದರು.

    ವಿಜಯ್ ಬಳಿ ಇರುವ ಕಾರುಗಳ ಸಂಗ್ರಹ

    ವಿಜಯ್ ಬಳಿ ಇರುವ ಕಾರುಗಳ ಸಂಗ್ರಹ

    ವಿಜಯ್ ಬಳಿ ರಾಲ್ಸ್ ರಾಯ್ಸ್ ಗೋಸ್ಟ್ ಮಾತ್ರವೇ ಅಲ್ಲದೆ ಹಲವು ಐಷಾರಾಮಿ ಕಾರುಗಳಿವೆ. 58 ಲಕ್ಷ ರು ಬೆಲೆಯ ಬಿಎಂಡಬ್ಲು 520 ಡಿ, 80 ಲಕ್ಷ ಬೆಲೆಯ ಫೋರ್ಡ್ ಮಸ್ಟ್ಯಾಂಗ್, 1.87 ಕೋಟಿ ರು ಬೆಲೆಯ ಆಡಿ ಕ್ಯು 8, 45 ಲಕ್ಷ ರು ಬೆಲೆಯ ಮಿನಿ ಕೂಪರ್, ಬಿಎಂಡಬ್ಲು 320 ಡಿ, 92 ಲಕ್ಷ ಬೆಲೆಯ ಬಿಎಂಡಬ್ಲು ಎಕ್ಸ್‌ 6, ಇವುಗಳ ಹೊರತಾಗಿ, ಇನ್ನೋವಾ ಕ್ರಿಸ್ಟಾ, ಫಾರ್ಚುನರ್, ಮಾರುತಿಯ ಕೆಲ ಕಾರುಗಳು ಸಹ ವಿಜಯ್ ಸಂಗ್ರಹದಲ್ಲಿವೆ. ನಟ ವಿಜಯ್ ಪ್ರಸ್ತುತ 'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    English summary
    Actor Vijay request court to expunge remarks made against him in his car entry tax matter. Vijay paid 36 lakh rs entry tax for his rolls royce ghost car.
    Wednesday, October 27, 2021, 9:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X