twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯ ಪಕ್ಷಗಳಿಗೆ ನಡುಕ ಹುಟ್ಟಿಸಿದ ವಿಜಯ್: ಚುನಾವಣೆಯಲ್ಲಿ ಗೆದ್ದು ಬೀಗಿದ 115 ಅಭಿಮಾನಿಗಳು

    |

    ನಟ ವಿಜಯ್ ಅಭಿಮಾನಿ ಬಳಗವು ತಮಿಳುನಾಡು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದೆ.

    ಕೆಲವು ದಿನಗಳ ಹಿಂದಷ್ಟೆ ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದ್ದು, ವಿಜಯ್ ಅಭಿಮಾನಿ ಸಂಘದ ಸದಸ್ಯರು ಸುಮಾರು 115 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ವಿಜಯ್ ಅಭಿಮಾನಿ ಸಂಘದ ಸದಸ್ಯರ ಈ ಗೆಲುವು ತಮಿಳುನಾಡು ರಾಜಕೀಯ ವಿಶ್ಲೇಷಕರಿಗೆ ಮಾತ್ರವಲ್ಲ ಇತರೆ ರಾಜಕೀಯ ಪಕ್ಷಗಳಿಗೆ ದೊಡ್ಡ ಆಶ್ಚರ್ಯ ತಂದಿದೆ.

    'ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್' ಹೆಸರಿನ ಫ್ಯಾನ್ಸ್‌ ಕ್ಲಬ್‌ನ ಸದಸ್ಯರು ತಮಿಳುನಾಡಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ವಿಜಯ್ ಸಹ ತಮ್ಮ ಅಭಿಮಾನಿಗಳಿಗೆ ಚುನಾವಣೆಯಲ್ಲಿ ಪಾಲ್ಗೊಳ್ಳಲು, ತಮ್ಮ ಹೆಸರು, ಚಿತ್ರಗಳನ್ನು ಬಳಸಿಕೊಳ್ಳುವಂತೆ ಒಪ್ಪಿಗೆ ಸಹ ನೀಡಿದ್ದರು. 169 ಸ್ಥಾನಗಳಿಗೆ ಸ್ಪರ್ಧಿಸಿದ್ದ ಸದಸ್ಯರು ಅದರಲ್ಲಿ 115 ರಲ್ಲಿ ಗೆದ್ದಿದ್ದು ಇದು ಬಹುದೊಡ್ಡ ಗೆಲುವು ಎಂದೇ ಪರಿಗಣಿತವಾಗುತ್ತಿದೆ.

     Vijays Fan Club Win In Tamil Nadu Local Body Elections

    'ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್' ಸಂಘದ ಮುಖ್ಯ ಕಾರ್ಯದರ್ಶಿ, ಬಸ್ಸಿ ಆನಂದ್ ಮಾತನಾಡಿ, 115 ಸ್ಥಾನಗಳಲ್ಲಿ 13 ಸ್ಥಾನಗಳು ಅವಿರೋಧ ಆಯ್ಕೆ ಎಂದು ಮಾಹಿತಿ ನೀಡಿದ್ದಾರೆ. ಈಗ ಗೆದ್ದಿರುವ 115 ಅಭ್ಯರ್ಥಿಗಳಲ್ಲಿ 45 ಮಂದಿ ಮಹಿಳೆಯರೇ ಇದ್ದಾರೆ. ಗೆದ್ದಿರುವ ಅಭ್ಯರ್ಥಿಗಳಲ್ಲಿ ಎಲ್ಲ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳು ಇದ್ದಾರೆ'' ಎಂದಿದ್ದಾರೆ ಆನಂದ್.

    ''ಚುನಾವಣೆಯಲ್ಲಿ ಸ್ಪರ್ಧಿಸುವುದು ಮೊದಲೇ ನಿಶ್ಚಯವಾಗಿರಲಿಲ್ಲ. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವು ಜಿಲ್ಲೆಗಳಿಂದ ನಮಗೆ ಮನವಿಗಳು ಬರಲು ಆರಂಭವಾದವು. ಸಂಘದ ವತಿಯಿಂದ ಚುನಾವಣೆಗೆ ನಿಲ್ಲುತ್ತೇವೆಂದು. ಹೀಗೆ ಮನವಿ ಮಾಡಿದವರು ತಮ್ಮ-ತಮ್ಮ ಏರಿಯಾಗಳಲ್ಲಿ ಸಾಮಾಜಿಕವಾಗಿ ಸಕ್ರಿಯರಾಗಿದ್ದವರೇ ಆಗಿದ್ದರು'' ಎಂದರು ಬಸ್ಸಿ ಆನಂದ್

    ''ಹಾಗಾಗಿ ನಾವು ದಳಪತಿ ವಿಜಯ್ ಬಳಿ ಮಾತನಾಡಿದೆವು. ಅವರು ಸಹ ಒಪ್ಪಿಗೆ ನೀಡಿದರು. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ವಿಜಯ್ ಫೊಟೊ, ವಿಡಿಯೋಗಳನ್ನು ಬಳಸಿದರು. ನಾನು ಸಹ ಸಾಕಷ್ಟು ಜಿಲ್ಲೆಗಳಿಗೆ ಓಡಾಡಿ ಅಭ್ಯರ್ಥಿಗಳನ್ನು ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿದೆ. ಜನರು ಬಹಳ ಒಳ್ಳೆಯ ಪ್ರತಿಕ್ರಿಯೆ ನೀಡಿದರು. ಅಂತಿಮವಾಗಿ ವಿಜಯ ನಮ್ಮದೇ ಆಯಿತು'' ಎಂದಿದ್ದಾರೆ.

    ವಿಜಯ್ ರಾಜಕೀಯ ಪ್ರವೇಶದ ಬಗ್ಗೆ ಮೌನವಾಗಿದ್ದಾರೆ. ವಿಜಯ್ ತಂದೆ ವಿಜಯ್ ಮಕ್ಕಳ್ ಇಯಕ್ಕಮ್ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಆದರೆ ತಮಗೂ ಆ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿಕೆ ನೀಡಿದ ವಿಜಯ್ ಆ ನಂತರ ಪೋಷಕರ ವಿರುದ್ಧವೇ ದೂರು ಸಹ ದಾಖಲಿಸಿದರು. ವಿಜಯ್‌ರ ಈ ನಡೆಯಿಂದ ಅವರು ರಾಜಕೀಯದಿಂದ ದೂರ ಉಳಿಯುತ್ತಾರೆ ಎನ್ನಲಾಗಿತ್ತು. ಆದರೆ ಈಗ ಅವರೇ ತಮ್ಮ ಅಭಿಮಾನಿ ಸಂಘದ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿದ್ದಾರೆ. ವಿಜಯ್ ಒಂದು ದಿನವೂ ಪ್ರಚಾರದಲ್ಲಿ ಭಾಗವಹಿಸದೆ, ಒಂದು ಟ್ವೀಟ್ ಸಹ ಮಾಡದೇ ಇದ್ದರೂ 169 ಅಭ್ಯರ್ಥಿಗಳಲ್ಲಿ 115 ಅಭ್ಯರ್ಥಿಗಳು ಗೆದ್ದಿರುವುದು ತಮಿಳುನಾಡಿನಲ್ಲಿ ವಿಜಯ್‌ಗಿರುವ ಜನಪ್ರಿಯತೆಯನ್ನು ಸಾರಿ ಹೇಳುತ್ತಿದೆ.

    ಆದರೆ ಈಗ ಸ್ವತಃ ಅವರೇ ತಮ್ಮ ಅಭಿಮಾನಿ ಸಂಘದಿಂದ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ ಹಾಗೂ ಬಹಳ ದೊಡ್ಡ ಜಯವನ್ನೇ ಸಾಧಿಸಿದ್ದಾರೆ. ಹಾಗಾಗಿ ವಿಜಯ್ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರಬಹುದು ಎಂಬ ಸೂಚನೆ ಇದರಿಂದ ಸಿಗುತ್ತಿದೆ. ರಜನೀಕಾಂತ್‌ಗಿಂತಲೂ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ವಿಜಯ್ ಹೊಂದಿದ್ದು, ಅವರು ರಾಜಕೀಯ ಪ್ರವೇಶಿಸಿದರೆ ಈಗಿರುವ ರಾಜಕೀಯ ಪಕ್ಷಗಳಿಗೆ ದೊಡ್ಡ ಆತಂಕ ಎದುರಾಗಲಿದೆ.

    ವಿಜಯ್ ಪ್ರಸ್ತುತ 'ಬೀಸ್ಟ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಿರ್ಮಾಣವನ್ನು ಪ್ರವೀಣ್ ಮೋಹನ್ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸೆಲ್ವರಾಘವನ್, ಯೋಗಿಬಾಬು, ಶೈನ್ ಟಾಮ್ ಚಾಕ್ಕೊ, ಜಾನ್ ವಿಜಯ್, ಶಾಜಿ ಚೆನ್ ಇನ್ನೂ ಹಲವರು ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ 'ಬೀಸ್ಟ್' ಸಹ ಒಂದಾಗಿದೆ.

    English summary
    Vijay's fan club won in Tamil Nadu local body elections. 169 people contested in elections from Vijay's fan club and 115 people won.
    Sunday, October 17, 2021, 16:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X