For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಪಕ್ಷ ಸ್ಥಾಪಿಸಿದ ವಿಜಯ್ ತಂದೆ: 'ನನಗೂ ಅದಕ್ಕೂ ಸಂಬಂಧವಿಲ್ಲ' ಎಂದ ನಟ

  |

  ತಮಿಳಿನ ಖ್ಯಾತ ನಟ ವಿಜಯ್ ತಂದೆ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಆದರೆ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ ನಟ ವಿಜಯ್.

  (ನವೆಂಬರ್ 05) ರಂದು ನಟ ವಿಜಯ್ ತಂದೆ, ನಿರ್ದೇಶಕ ಎಸ್‌ಎ ಚಂದ್ರಶೇಖರ್ ರಾಜಕೀಯ ಪಕ್ಷವೊಂದನ್ನು ಕೇಂದ್ರ ಚುನಾವಣಾ ಆಯೋಗದಲ್ಲಿ ನೊಂದಣಿ ಮಾಡಿಸಿದ್ದರು. ಪಕ್ಷಕ್ಕೆ 'ಆಲ್‌ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ತಮಿಳುನಾಡು ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗಳು ನಡೆದವು.

  ವಿಜಯ್ 65: ಎಆರ್ ಮುರುಗದಾಸ್ ಜಾಗಕ್ಕೆ ಮೂವರು ನಿರ್ದೇಶಕರ ಹೆಸರು!

  ಆದರೆ ಸಂಜೆ ವೇಳೆಗೆ ರಾಜಕೀಯ ಪಕ್ಷದ ಬಗ್ಗೆ ಸ್ಪಷ್ಟನೆ ನೀಡಿರುವ ವಿಜಯ್, 'ನನಗೂ ತಮ್ಮ ತಂದೆ ಸ್ಥಾಪಿಸಿರುವ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಕಠಿಣ ಪದಗಳಲ್ಲಿಯೇ ಹೇಳಿದ್ದಾರೆ.

  ತಂದೆಗೆ ಎಚ್ಚರಿಕೆ ನೀಡಿದ ನಟ ವಿಜಯ್

  ತಂದೆಗೆ ಎಚ್ಚರಿಕೆ ನೀಡಿದ ನಟ ವಿಜಯ್

  ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ವಿಜಯ್, ನನ್ನ ಚಿತ್ರವನ್ನಾಗಲಿ, ಹೆಸರನ್ನಾಗಲಿ ಅಥವಾ 'ವಿಜಯ್ ಮಕ್ಕಳ್ ಇಯಕ್ಕಂ' ಹೆಸರನ್ನಾಗಲಿ ಅವರು ಬಳಸಿದ್ದೇ ಆದಲ್ಲಿ ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.

  ಬಿಜೆಪಿ ಸೇರ್ಪಡೆ ವದಂತಿ ಬಗ್ಗೆ 'ತಳಪತಿ' ವಿಜಯ್ ತಂದೆ ಚಂದ್ರಶೇಖರ್ ಪ್ರತಿಕ್ರಿಯೆ

  'ತಂದೆ ಸ್ಥಾಪಿಸಿರುವ ಪಕ್ಷದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ'

  'ತಂದೆ ಸ್ಥಾಪಿಸಿರುವ ಪಕ್ಷದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ'

  'ನಮ್ಮ ತಂದೆ ಚಂದ್ರಶೇಖರನ್ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ನಾನು ನನ್ನ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕ್ಷಮೆ ಕೋರುತ್ತೇನೆ. ಅವರು ರಾಜಕೀಯ ಪಕ್ಷ ಸ್ಥಾಪಿಸಿರುವ ಹಿಂದೆ ನನ್ನ ನೇರ ಅಥವಾ ಪರೋಕ್ಷ ಭಾಗವಹಿಸುವಿಕೆ ಇಲ್ಲ' ಎಂದಿದ್ದಾರೆ ವಿಜಯ್.

  'ಅಭಿಮಾನಿಗಳು, ಅದು ನನ್ನ ಪಕ್ಷವೆಂದು ಅದರ ಸೇವೆ ಮಾಡುವುದು ಬೇಡ'

  'ಅಭಿಮಾನಿಗಳು, ಅದು ನನ್ನ ಪಕ್ಷವೆಂದು ಅದರ ಸೇವೆ ಮಾಡುವುದು ಬೇಡ'

  'ಅವರ ರಾಜಕೀಯ ನಿರ್ಧಾರಗಳ ಹಿಂದೆ ನನ್ನ ಹಸ್ತಕ್ಷೇಪ ಇರುವುದಿಲ್ಲ. ಅಷ್ಟೇ ಅಲ್ಲದೆ, ಅವರು ಸ್ಥಾಪಿಸಿರುವುದು ನನ್ನ ಪಕ್ಷ ಅಥವಾ ವಿಜಯ್ ತಂದೆ ಸ್ಥಾಪಿಸಿದ ಪಕ್ಷ ಎಂಬ ಕಾರಣಕ್ಕೆ ಆ ಪಕ್ಷಕ್ಕೆ ನನ್ನ ಅಭಿಮಾನಿಗಳು ಸೇವೆ ಮಾಡುವುದಾಗಲಿ, ಸೇರ್ಪಡೆಗೊಳ್ಳುವುದಾಗಲಿ ಮಾಡಬೇಡಿ' ಎಂದು ಹೇಳಿದ್ದಾರೆ ವಿಜಯ್.

  ದೀಪಾವಳಿಗೆ ವಿಜಯ್ 'ಮಾಸ್ಟರ್' ಚಿತ್ರತಂಡದಿಂದ ಉಡುಗೊರೆ!

  'Nodidavaru Enantare' ಹೊಸದೆಲ್ಲ ಆಚೆ ಬರ್ಬೇಕು | SriMurali | Filmibeat Kannada
  ನಮ್ಮ ಸೇವಾ ಸಂಸ್ಥೆಗೂ ಆ ಪಕ್ಷಕ್ಕೂ ಸಂಬಂಧವಿಲ್ಲ: ವಿಜಯ್

  ನಮ್ಮ ಸೇವಾ ಸಂಸ್ಥೆಗೂ ಆ ಪಕ್ಷಕ್ಕೂ ಸಂಬಂಧವಿಲ್ಲ: ವಿಜಯ್

  ಆ ರಾಜಕೀಯ ಪಕ್ಷಕ್ಕೂ ನಮ್ಮ 'ವಿಜಯ್ ಮಕ್ಕಳ್ ಇಯಕ್ಕುಂ' ಸೇವಾ ಸಂಸ್ಥೆಗೂ ನಾವು ಮಾಡುತ್ತಿರುವ ಕೆಲಸ ಕಾರ್ಯಗಳಿಗೂ ಯಾವುದೇ ನೇರ ಅಥವಾ ಪರೋಕ್ಷ ಸಂಬಂಧ ಇಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ. ವಿಜಯ್ ಅವರು 'ವಿಜಯ್ ಮಕ್ಕಳ್ ಇಯಕ್ಕುಂ' ಸಂಸ್ಥೆ ಪ್ರಾರಂಭಿಸಿದ್ದರು. ವಿಜಯ್ ತಂದೆ ಅದೇ ಹೆಸರನ್ನು ತುಸುವೇ ಬದಲಿಸಿ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ.

  English summary
  Actor Vijay's father SA Chandrashekhar started a political party. But Vijay said i do not have direct and indirect connection with that party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X