For Quick Alerts
  ALLOW NOTIFICATIONS  
  For Daily Alerts

  ಆಸ್ಟ್ರೇಲಿಯಾದಲ್ಲಿ 'ಮಾಸ್ಟರ್' ಆರ್ಭಟ: ಏರುತ್ತಲೇ ಇದೆ ಗಳಿಕೆ

  |

  ನಟ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ ಬಿಡುಗಡೆ ಆಗಿ ಮೂರು ದಿನಗಳಾಗಿವೆ. ಸಿನಿಮಾ ಸೂಪರ್ ಹಿಟ್ ಆಗಿದೆ. ಕೊರೊನಾ ನಡುವೆಯೂ ಮೊದಲ ದಿನ ದಾಖಲೆಯ ಗಳಿಕೆ ಮಾಡಿದೆ.

  ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶದಲ್ಲಿಯೂ ಮಾಸ್ಟರ್ ಪ್ರೇಕ್ಷಕರನ್ನು ಸೆಳೆದಿದೆ. ಆಸ್ಟ್ರೇಲಿಯಾದಲ್ಲಿ 'ಮಾಸ್ಟರ್' ಸಿನಿಮಾ ಮೂರು ದಿನಕ್ಕೆ ದಾಖಲೆ ಮೊತ್ತದ ಕಲೆಕ್ಷನ್ ಪಡೆದಿದೆ.

  ಮೂರು ದಿನದಲ್ಲಿ ಆಸ್ಟ್ರೇಲಿಯಾದಲ್ಲಿ ಬರೋಬ್ಬರಿ 3.60 ಕೋಟಿಗೂ ಹೆಚ್ಚು ಹಣ ಗಳಿಸಿದೆ ವಿಜಯ್ ನಟನೆಯ ಮಾಸ್ಟರ್ ಸಿನಿಮಾ. ವೀಕೆಂಡ್‌ನಲ್ಲಿ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

  ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಇನ್ನೂ ಹಲವು ದೇಶಗಳಲ್ಲಿ ಮಾಸ್ಟರ್ ಬಿಡುಗಡೆ ಆಗಿದೆ. ನ್ಯೂಜಿಲೆಂಡ್‌ನಲ್ಲಿ ಮೊದಲ ದಿನ 27 ಲಕ್ಷಕ್ಕೂ ಹೆಚ್ಚು ಹಣ ಗಳಿಸಿತ್ತು ಮಾಸ್ಟರ್. ಅಮೆರಿಕದಲ್ಲಿ ಮಾಸ್ಟರ್‌ಗೆ ಹೆಚ್ಚು ಚಿತ್ರಮಂದಿರಗಳು ದೊರೆತಿಲ್ಲ ಎನ್ನಲಾಗಿದೆ.

  ಮೊದಲ ದಿನ 40 ಕೋಟಿ ಗಳಿಕೆ

  ಮೊದಲ ದಿನ 40 ಕೋಟಿ ಗಳಿಕೆ

  ಬಿಡುಗಡೆ ಆದ ಮೊದಲ ದಿನವೂ ಭಾರತದಲ್ಲಿ ಒಳ್ಳೆಯ ಕಲೆಕ್ಷನ್ ಪಡೆದಿದೆ ಮಾಸ್ಟರ್. ಕೊರೊನಾ ನಿಯಮಾವಳಿಗಳ ನಡುವೆಯೇ ಬಿಡುಗಡೆ ಆಗಿಯೂ 40 ಕೋಟಿಗೂ ಹೆಚ್ಚು ಹಣ ಗಳಿಸಿದೆ. ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರ-ತೆಲಂಗಾಣಗಳಲ್ಲಿ ಹೆಚ್ಚು ಗಳಿಸಿದ ಮಾಸ್ಟರ್.

  ಒಂದೇ ದಿನ 23-27 ಕೋಟಿ ಗಳಿಕೆ

  ಒಂದೇ ದಿನ 23-27 ಕೋಟಿ ಗಳಿಕೆ

  ತಮಿಳುನಾಡಿನಲ್ಲಿ ಒಂದೇ 'ಮಾಸ್ಟರ್' ಸಿನಿಮಾ 23 ರಿಂದ 27 ಕೋಟಿ ಗಳಿಕೆ ಕಂಡಿದೆ. ಇದಕ್ಕೂ ಮುಂಚೆ ವಿಜಯ್ ನಟಿಸಿದ್ದ 'ಸರ್ಕಾರ್' ಸಿನಿಮಾ (ಮೊದಲ ದಿನ) 32 ಕೋಟಿ, 'ಬಿಗಿಲ್' 26.5 ಕೋಟಿ ಹಾಗೂ 'ಮೆರ್ಸಲ್' ಸಿನಿಮಾ 23.5 ಕೋಟಿ ಗಳಿಸಿತ್ತು.

  ಚಿತ್ರಮಂದಿರಗಳು 100% ಕಾರ್ಯನಿರ್ವಹಿಸಿದ್ದರೆ ಗಳಿಕೆ ಹೆಚ್ಚಾಗುತ್ತಿತ್ತು

  ಚಿತ್ರಮಂದಿರಗಳು 100% ಕಾರ್ಯನಿರ್ವಹಿಸಿದ್ದರೆ ಗಳಿಕೆ ಹೆಚ್ಚಾಗುತ್ತಿತ್ತು

  ಕೊರೊನಾ ನಿಯಂತ್ರಣ ನಿಯಮದ ಕಾರಣ ದೇಶದಾದ್ಯಂತ ಚಿತ್ರಮಂದಿರಗಳು 50% ಪ್ರೇಕ್ಷಕರಿಗಷ್ಟೆ ಸಿನಿಮಾ ಪ್ರದರ್ಶಿಸುತ್ತಿವೆ. ಹಾಗಿದ್ದರೂ ಸಹ ಮಾಸ್ಟರ್ ಸಿನಿಮಾ ಭಾರಿ ಮೊತ್ತದ ಕಲೆಕ್ಷನ್ ಗಳಿಸಿದೆ. ಒಂದೊಮ್ಮೆ ಚಿತ್ರಮಂದಿರಗಳು 100% ಕಾರ್ಯನಿರ್ವಹಿಸಿದ್ದಿದ್ದರೆ ಗಳಿಕೆ ದುಪ್ಪಟ್ಟಾಗಿರುತ್ತಿತ್ತು ಎಂಬ ಅಂದಾಜಿದೆ.

  ವಿಜಯ್ ಸೇತುಪತಿ ವಿಲನ್

  ವಿಜಯ್ ಸೇತುಪತಿ ವಿಲನ್

  ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಜೊತೆಗೆ ವಿಜಯ್ ಸೇತುಪತಿ ವಿಲನ್ ಆಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಮಾಳವಿಕ ಮೋಹನನ್ ನಾಯಕಿಯಾಗಿದ್ದಾರೆ. ಅರ್ಜುನ್ ದಾಸ್, ಗೌರಿ ಕೃಷ್ಣ ಇನ್ನೂ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಲೋಕೇಶ್ ಕನಕರಾಜನ್ ನಿರ್ದೇಶಿಸಿದ್ದಾರೆ.

  English summary
  Vijay's Master movie performing well in Australia and other countries. Master collects more that 3 crore in Australia in 3 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X