ವಿಜಯ್ 'ಮಾಸ್ಟರ್' ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್
ದಳಪತಿ ವಿಜಯ್ ಅಭಿಮಾನಿಗಳು ವರ್ಷದಿಂದ ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ಮಾಸ್ಟರ್ ಸಿನಿಮಾಗಾಗಿ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಇತ್ತೀಚಿಗಷ್ಟೆ ಮಾಸ್ಟರ್ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದರು.
ಮಾಸ್ಟರ್ ನಿರೀಕ್ಷೆಯಂತೆ ಈ ತಿಂಗಳು ಜನವರಿಯಲ್ಲೇ ರಿಲೀಸ್ ಆಗುತ್ತಿದೆ. ಜನವರಿ 13 ಪೊಂಗಲ್ ಹಬ್ಬದ ವಿಶೇಷವಾಗಿ ಮಾಸ್ಟರ್ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡುತ್ತಿದೆ. ಸುದ್ದಿ ಬ್ರೇಕ್ ಆಗುತ್ತಿದ್ದಂತೆ ವಿಜಯ್ ಅಭಿಮಾನಿಗಳು ಕುಣಿದುಕಪ್ಪಳಿಸಿದ್ದು, ಟಿಕೆಟ್ ಬುಕ್ಕಿಂಗ್ ಯಾವಾಗ ಓಪನ್ ಆಗುತ್ತೆ ಎಂದು ಕಾಯುತ್ತಿದ್ದರು.

ಹೈದರಾಬಾದ್ ನಲ್ಲಿ ಟಿಕೆಟ್ ಬುಕ್ಕಿಂಗ್ ಓಪನ್
ಇದೀಗ ಕೆಲವು ಕಡೆ ಮಾಸ್ಟರ್ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಆದರೆ ಚೆನ್ನೈನಲ್ಲಿ ಹೈದರಾಬಾದ್ ನ ನಲ್ಲಿ ಮಾಸ್ಟರ್ ಸಿನಿಮಾಗೆ ಈಗಾಗಲೇ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ. ಬುಕ್ ಮೈ ಶೋನಲ್ಲಿ ಮಾಸ್ಟರ್ ಸಿನಿಮಾದ ಬುಕ್ಕಿಂಗ್ ಶೋ ಆಗುತ್ತಿದೆ. RTC Xರಸ್ತೆಯಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ ಬುಕ್ಕಿಂಗ್ ಓಪನ್ ಆಗಿದೆ.

ಕೊರೊನಾ ನಿಯಮದ ಪ್ರಕಾರ 50% ಅವಕಾಶ
ಕೊರೊನಾ ನಿಯಮದ ಪ್ರಕಾರ ಕೇವಲ 50% ಮಾತ್ರ ಅವಕಾಶ ನೀಡಲಾಗಿದೆ. ಕೇವಲ ಹೈದರಾಬಾದ್ ನಲ್ಲಿ ಮಾತ್ರ ಬುಕ್ಕಿಂಗ್ ಓಪನ್ ಆಗಿದೆ. ಮೂಲಗಳ ಪ್ರಕಾರ ಚೆನ್ನೈ ಮತ್ತು ಇತರ ಭಾಗಗಳಲ್ಲಿ ಜನವರಿ 7ರಿಂದ ಬುಕ್ಕಿಂಗ್ ಓಪನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಮಾಸ್ಟರ್ ರಿಲೀಸ್
ಇನ್ನೂ ಮಾಸ್ಟರ್ ಸಿನಿಮಾ ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಕೊರೊನಾ ಲಾಕ್ ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ನಟನ ಸಿನಿಮಾ ಇದಾಗಿದೆ. ಜನ ಹೇಗೆ ಸ್ವೀಕರಿಸುತ್ತಾರೆ, ಚಿತ್ರಮಂದಿರಕ್ಕೆ ಜನ ಬರ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

ಸಿಎಂ ಭೇಟಿಯಾಗಿದ್ದ ವಿಜಯ್
ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೊದಲು ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಒಂದು ಕಡೆ ಕೊರೊನಾ ವೈರಸ್, ಈಗ ಬ್ರಿಟನ್‌ನಿಂದ ಹೊಸ ರೀತಿ ಸೋಂಕು ಹಬ್ಬುತ್ತಿದೆ ಎಂಬ ಆತಂಕ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಜಯ್ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಿರುವುದು ನಿಜಕ್ಕೂ ಸವಾಲಾಗಿದೆ.


Click it and Unblock the Notifications











