ಈಡೇರಿದ ವಿಜಯ್ ಅಭಿಮಾನಿಗಳ ಆಸೆ: 'ಮಾಸ್ಟರ್' ಅವತಾರ ಅನಾವರಣ
ಕೊರೊನಾ ಇಲ್ಲದೇ ಹೋಗಿದ್ದಿದ್ದರೆ ನಟ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ ಬಿಡುಗಡೆಯಾಗಿ ಏಳು ತಿಂಗಳಾಗಿರುತ್ತಿತ್ತು. ಏಪ್ರಿಲ್ 9 ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಕೊರೊನಾ ಲಾಕ್‌ಡೌನ್ ಕಾರಣದಿಂದ ಇಷ್ಟು ತಡವಾಗಿದೆ.
ಮಾಸ್ಟರ್ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಕೊರೊನಾ ಬಂದ ನಂತರ ಸಿನಿಮಾದ ಬಗ್ಗೆ ಮಾತಿರಲಿಲ್ಲ-ಕತೆಯೂ ಇರಲಿಲ್ಲ. ಇದು ವಿಜಯ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಯಿತು.
ಅಂತೆಯೇ, 'ಮಾಸ್ಟರ್' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಆನ್‌ಲೈನ್ ನಲ್ಲಿ ಅಭಿಯಾನ ನಡೆಸಿದರು. ಕೊನೆಗೂ ಚಿತ್ರತಂಡವು ವಿಜಯ್ ಅಭಿಮಾನಿಗಳ ಒತ್ತಾಯಕ್ಕೆ ಮಣಿದಿದ್ದು, ನಿನ್ನೆ (ನವೆಂಬರ್ 14) ರಂದು ಮಾಸ್ಟರ್ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ವಿಜಯ್ ಅಭಿಮಾನಿಗಳು ಇಷ್ಟು ದಿನ ಕಾದದ್ದು ವ್ಯರ್ಥವಾಗದಂಥಹಾ ಮಾಸ್ ಟ್ರೇಲರ್ ಅನ್ನೇ ಕೊಟ್ಟಿದೆ ಚಿತ್ರತಂಡ.

ಸಖತ್ ಮಾಸ್ ಆಗಿದೆ ಟ್ರೇಲರ್
ಸಖತ್ ಮಾಸ್ ಆಗಿದೆ 'ಮಾಸ್ಟರ್' ಟ್ರೇಲರ್. ನಟ ವಿಜಯ್ ಕಾಲೇಜು ಫ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಲನ್ ಆಗಿ ವಿಜಯ್ ಸಖತ್ ರಗಡ್ ಲುಕ್‌ನಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಾಯಕಿ ಮಾಳವಿಕಾ ಮೋಹನನ್ ಸಹ ಕಾಲೇಜು ಫ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕುಡುಕ ಫ್ರೊಫೆಸರ್ ಪಾತ್ರದಲ್ಲಿ ವಿಜಯ್
ರೌಡಿ ಫ್ರೊಫೆಸರ್ ಆಗಿ ನಟಿಸಿದ್ದಾರೆ ವಿಜಯ್. ಕಾಲೇಜಿನಲ್ಲಿ ಗಲಾಟೆ ಮಾಡುವ, ಸಹೋದ್ಯೋಗಿ ಫ್ರೊಫೆಸರ್‌ಗೆ ಲೈನ್ ಹೊಡೆಯುವ ಕುಡುಕನ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ನಟ ವಿಜಯ್ ಸೇತುಪತಿ ಕ್ರೂರ ವಿಲನ್ ಆಗಿ ನಟಿಸಿದ್ದಾರೆ.

ಸಿನಿಮಾದಲ್ಲಿ ಸಖತ್ ಆಕ್ಷನ್ ದೃಶ್ಯಗಳಿವೆ
ಸಿನಿಮಾದಲ್ಲಿ ಸಖತ್ ಆಕ್ಷನ್ ದೃಶ್ಯಗಳಿರುವುದು ಟ್ರೇಲರ್‌ನಿಂದ ಕಂಡುಬರುತ್ತಿದೆ. ವಿಜಯ್ ಹಾಗೂ ವಿಜಯ್ ಸೇತುಪತಿ ನಡುವಿನ ದೃಶ್ಯಗಳು ಸಹ ಅಭಿಮಾನಿಗಳಿಗೆ ಸಖತ್ ಕಿಕ್ ನೀಡುವುದು ಖಾಯಂ. ವಿಜಯ್ ಅಭಿಮಾನಿಗಳ ಪಾಲಿಗಂತೂ ಈ ಸಿನಿಮಾ ಹಬ್ಬವಾಗಲಿದೆ.
Recommended Video

ಲೋಕೇಶ್ ಕನಕರಾಜನ್ ನಿರ್ದೇಶಿಸಿದ್ದಾರೆ
ಮಾಸ್ಟರ್ ಸಿನಿಮಾವನ್ನು ಲೋಕೇಶ್ ಕನಕರಾಜನ್ ನಿರ್ದೇಶಿಸಿದ್ದಾರೆ. ನಾಯಕಿ ಪಾತ್ರದಲ್ಲಿ ಮಾಳವಿಕಾ ಮೋಹನನ್ ನಟಿಸಿದ್ದಾರೆ. ಅರ್ಜುನ್ ದಾಸ್, ಗೌರಿ ಕೃಷ್ಣ, ರಮ್ಯಾ ಸುಬ್ರಹ್ಮಣ್ಯನ್, ಆಂಡ್ರೆಯಾ ಜರ್ಮಿಯಾ, ನಾಸರ್ ಇನ್ನೂ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.


Click it and Unblock the Notifications