ವಿಜಯ್ ನಟನೆಯ ಹೊಸ ಸಿನಿಮಾದ ಹೆಸರು ಘೋಷಣೆ
ತಮಿಳು ನಟ ವಿಜಯ್ ನಟಿಸುತ್ತಿರುವ ಹೊಸ ಸಿನಿಮಾವನ್ನು ಇಷ್ಟು ದಿನ 'ದಳಪತಿ 65' ಎಂದು ಕರೆಯಲಾಗುತ್ತಿತ್ತು ಅದರ ಹೆಸರನ್ನು ಈಗ ಘೋಷಿಸಲಾಗಿದೆ. ಜೊತೆಗೆ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.
ವಿಜಯ್ ನಟಿಸುತ್ತಿರುವ ಹೊಸ ಸಿನಿಮಾಕ್ಕೆ 'ಬೀಸ್ಟ್' ಎಂದು ಹೆಸರಿಡಲಾಗಿದೆ. ಇದರರ್ಥ ರಾಕ್ಷಸ ಎಂದು. ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದ್ದು ಪೋಸ್ಟರ್‌ನಲ್ಲಿ ವಿಜಯ್ ದೊಡ್ಡ ಬಂದೂಕೊಂದನ್ನು ಹಿಡಿದುಕೊಂಡು ಸ್ಟೈಲ್ ಆಗಿ ಫೋಸ್ ನೀಡಿದ್ದಾರೆ.
ನಟ ವಿಜಯ್‌ರ ಹುಟ್ಟುಹಬ್ಬ ನಾಳೆ ಇದ್ದು ಹುಟ್ಟುಹಬ್ಬದ ಪ್ರಯುಕ್ತವಾಗಿ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

ಈ ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡುತ್ತಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾದಲ್ಲಿ ಯೋಗಿ ಬಾಬು ಹಾಗೂ ಇತರ ಪ್ರತಿಭಾವಂತ ನಟರು ಸಹ ಇದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸನ್ ಪಿಕ್ಚರ್ಸ್.
ವಿಜಯ್ ನಟಿಸಿದ್ದ 'ಮಾಸ್ಟರ್' ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆ ಆಗಿ ಭಾರಿ ದಾಖಲೆ ನಿರ್ಮಿಸಿತು. ಸಿನಿಮಾವು ಲಾಕ್‌ಡೌನ್ ನಡುವೆಯೂ ಕೋಟ್ಯಂತರ ಹಣವನ್ನು ಬಾಚಿಕೊಂಡಿತ್ತು. ಇದೀಗ 'ಬೀಸ್ಟ್' ಸಿನಿಮಾ ಸಹ ಅದೇ ರೀತಿ ದಾಖಲೆಯ ಕಲೆಕ್ಷನ್ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
Recommended Video
'ಬೀಸ್ಟ್' ಸಿನಿಮಾದ ಪೋಸ್ಟರ್ ಅನ್ನು ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.


Click it and Unblock the Notifications











