Beast Movie : 'ಕೆಜಿಎಫ್ 2' ಎದುರಾಳಿ 'ಬೀಸ್ಟ್'ಗೆ ಹಿನ್ನಡೆ, ವಿದೇಶದಲ್ಲಿ ಸಿನಿಮಾಕ್ಕೆ ನಿಷೇಧ

'ಕೆಜಿಎಫ್ 2' ಸಿನಿಮಾಕ್ಕೆ ಎದುರಾಳಿಯಾಗಿ ತಮಿಳಿನ 'ಬೀಸ್ಟ್' ಸಿನಿಮಾ ಬಿಡುಗಡೆ ಆಗುತ್ತಿದೆ. 'ಕೆಜಿಎಫ್ 2' ಸಿನಿಮಾ ಏಪ್ರಿಲ್ 14 ಕ್ಕೆ ಬಿಡುಗಡೆ ಆದರೆ, 'ಬೀಸ್ಟ್' ಸಿನಿಮಾ ಏಪ್ರಿಲ್ 13 ಕ್ಕೆ ಬಿಡುಗಡೆ ಆಗುತ್ತಿದೆ. ಇಬ್ಬರು ಸ್ಟಾರ್ ನಟರ ಬಿಗ್ ಬಜೆಟ್‌ ಸಿನಿಮಾಗಳು ಪರಸ್ಪರ ಎದುರಾಗುತ್ತಿರುವುದು ಕೊರೊನಾ ನಂತರ ಇದೇ ಮೊದಲು ಹಾಗಾಗಿ ಈ ಎರಡು ಸಿನಿಮಾಗಳ ಬಾಕ್ಸ್ ಆಫೀಸ್ ಫೈಟ್ ಕುತೂಹಲ ಕೆರಳಿಸಿದೆ.

'ಬೀಸ್ಟ್' ಹೋಲಿಸಿದರೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಪ್ 2' ಹವಾ ಹೆಚ್ಚಾಗಿಯೇ ಇದೆ. ಬುಕ್ ಮೈ ಶೋ ಸೇರಿದಂತೆ, ಸಾಮಾಜಿಕ ಜಾಲತಾಣದಲ್ಲಿ 'ಕೆಜಿಎಫ್ 2' ಸಿನಿಮಾ ಬಗ್ಗೆಯೇ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿದ್ದಾರೆ.

ಎರಡು ಸಿನಿಮಾಗಳು ಕೆಲವೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಎದುರು ಬದುರಾಗಲಿವೆ. ಈ ನಡುವೆ 'ಬೀಸ್ಟ್' ಸಿನಿಮಾಕ್ಕೆ ದೊಡ್ಡ ಆರಂಭಿಕ ಹಿನ್ನಡೆಯೊಂದು ಎದುರಾಗಿದೆ. 'ಬೀಸ್ಟ್' ಸಿನಿಮಾದ ಪ್ರದರ್ಶನವನ್ನು ವಿದೇಶದಲ್ಲಿ ತಡೆಹಿಡಿಯಲಾಗಿದೆ.

Recommended Video

KGF 2 | Yash | ಸಿನಿಮಾ ಕಾಂಪಿಟೇಷನ್ ಹೇಗಿರಬೇಕು ಎಂದು ಹೇಳಿದ ಯಶ್ | Watch with Kannada Subtitles

ಕುವೈತ್‌ನಲ್ಲಿ ಸಿನಿಮಾಕ್ಕೆ ನಿಷೇಧ

ಕುವೈತ್‌ನಲ್ಲಿ ಸಿನಿಮಾಕ್ಕೆ ನಿಷೇಧ

ಭಾರತೀಯ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆಯಾದ ಅರಬ್ ದೇಶಗಳ ಕುವೈತ್‌ ರಾಷ್ಟ್ರದಲ್ಲಿ 'ಬೀಸ್ಟ್' ಸಿನಿಮಾ ಸೆನ್ಸಾರ್ ಪಾಸ್ ಮಾಡಲು ವಿಫಲವಾಗಿದ್ದು, ಅಲ್ಲಿ ಸಿನಿಮಾದ ಪ್ರದರ್ಶನವನ್ನು ತಡೆ ಹಿಡಿಯಲಾಗಿದೆ. ಈ ಬಗ್ಗೆ ಸಿನಿಮಾ ಬಾಕ್ಸ್ ಆಫೀಸ್ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿದ್ದು, ಸಿನಿಮಾವು ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಇರುವ ಕಾರಣ ಸಿನಿಮಾವನ್ನು ಪ್ರದರ್ಶಿಸಲಾಧ್ಯ ಎಂದು ಕುವೈತ್‌ನ ಮಾಹಿತಿ ಮತ್ತು ಪ್ರಸಾರ ಇಲಾಖೆ ಹೇಳಿದೆ.

ಭಯೋತ್ಪಾಧಕರು, ಪಾಕ್ ವಿರುದ್ಧ ಯುದ್ಧ

ಭಯೋತ್ಪಾಧಕರು, ಪಾಕ್ ವಿರುದ್ಧ ಯುದ್ಧ

ಭಯೋತ್ಪಾದಕರು ಚೆನ್ನೈನ ಮಾಲ್‌ ಒಂದರಲ್ಲಿ ಜನರನ್ನು ಒತ್ತೆಯಾಳಾಗಿರಿಸಿಕೊಂಡಿರುತ್ತಾರೆ. ಅದೇ ಮಾಲ್‌ನಲ್ಲಿ ಸಿಲುಕಿರುವ ವಿಜಯ್ ಭಯೋತ್ಪಾದಕರೊಟ್ಟಿಗೆ ಹೋರಾಡಿ ಅವರನ್ನು ರಕ್ಷಿಸುವ ಕತೆಯನ್ನು ಸಿನಿಮಾ ಹೊಂದಿದೆ. 'ಬೀಸ್ಟ್' ಸಿನಿಮಾದಲ್ಲಿ ಇಸ್ಲಾಂ ಭಯೋತ್ಪಾದನೆ ತೋರಿಸಲಾಗಿದೆ. ಹಾಗೂ ಪಾಕಿಸ್ತಾನ ಸೇರಿದಂತೆ ಅರಬ್ ದೇಶಗಳ ಬಗ್ಗೆ ಋಣಾತ್ಮಕ ಸಂಭಾಷಣೆ, ಸಂದೇಶ ಸಾರುವ ದೃಶ್ಯಗಳಿವೆ ಎಂಬ ಕಾರಣಕ್ಕೆ 'ಬೀಸ್ಟ್' ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಅದೇ ಯುಎಇಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ.

'ಕುರುಪ್', 'ಎಫ್‌ಐಆರ್' ಸಿನಿಮಾಗಳಿಗೂ ನಿಷೇಧ

'ಕುರುಪ್', 'ಎಫ್‌ಐಆರ್' ಸಿನಿಮಾಗಳಿಗೂ ನಿಷೇಧ

ಮಲಯಾಳಂನ 'ಕುರುಪ್' ಹಾಗೂ 'ಎಫ್‌ಐಆರ್' ಸಿನಿಮಾಗಳ ಪ್ರದರ್ಶನಕ್ಕೂ ಕುವೈತ್‌ನಲ್ಲಿ ನಿಷೇಧ ಹೇರಲಾಗಿತ್ತು. ಕೊಲೆಗಾರನೊಬ್ಬ ಅರಬ್ ದೇಶಗಳಲ್ಲಿ ಆಶ್ರಮ ಪಡೆದುಕೊಳ್ಳುವ ಕತೆ 'ಕುರುಪ್' ಸಿನಿಮಾದಲ್ಲಿತ್ತು ಹಾಗಾಗಿ ಆ ಸಿನಿಮಾದ ಪ್ರದರ್ಶನ ತಡೆ ಹಿಡಿಯಲಾಗಿತ್ತು. 'ಎಫ್‌ಐಆರ್' ಸಿನಿಮಾದಲ್ಲಿ ಇಸ್ಲಾಂ ಭಯೋತ್ಪಾದನೆ ಕುರಿತ ಅಂಶಗಳಿದ್ದ ಕಾರಣ ಆ ಸಿನಿಮಾವನ್ನು ಕುವೈತ್‌ನಲ್ಲಿ ತಡೆ ಹಿಡಿಯಲಾಗಿತ್ತು. ಇತರ ದೇಶಗಳಿಗೆ ಹೋಲಿಸಿದರೆ ಕುವೈತ್‌ನಲ್ಲಿ ಸೆನ್ಸಾರ್ ನಿಯಮಗಳು ಬಹಳ ಕಠಿಣವಾಗಿವೆ.

'ಬೀಸ್ಟ್' ಸಿನಿಮಾದ ಕತೆ ಏನು?

'ಬೀಸ್ಟ್' ಸಿನಿಮಾದ ಕತೆ ಏನು?

'ಬೀಸ್ಟ್' ಸಿನಿಮಾದಲ್ಲಿ ವಿಜಯ್ ಮಾಜಿ ಸೈನಿಕನ ಪಾತ್ರದಲ್ಲಿ ನಟಿಸಿದ್ದು, ಮಾಲ್‌ನಲ್ಲಿ ಭಯೋತ್ಪಾದಕರ ವಿರುದ್ಧ ಹೊರಾಡುವ ಕತೆಯ ಜೊತೆಗೆ ಪಾಕ್ ವಿರುದ್ಧ ಯುದ್ಧದ ಕತೆಯೂ ಸಿನಿಮಾದಲ್ಲಿದೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೇಲರ್‌ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 'ಬೀಸ್ಟ್' ಸಿನಿಮಾದಲ್ಲಿ ವಿಜಯ್ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಹಾಸ್ಯನಟ ಯೋಗಿಬಾಬು ಇದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದು, ನಿರ್ಮಾಪಕ ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Vijay starrer new movie Beast is banned in Kuwait. Beast movie is about terrorism and Pakistan and other muslim contries so Kuwaith banned the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X