ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕನೊಟ್ಟಿಗೆ ದಳಪತಿ ವಿಜಯ್ ಮುಂದಿನ ಸಿನಿಮಾ ಘೋಷಣೆ

ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಮುಂಚೂಣಿ ನಟರಲ್ಲಿ ಒಬ್ಬರು ತಮಿಳಿನ ವಿಜಯ್. ಈ ನಟನ ಸಿನಿಮಾಗಳು ಗಳಿಕೆಯಲ್ಲಿ ತಮ್ಮದೇ ದಾಖಲೆಗಳನ್ನು ಅಳಿಸಿ ಹೊಸ ದಾಖಲೆಗಳನ್ನು ಬರೆಯುತ್ತಿವೆ.

'ಮಾಸ್ಟರ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳನ್ನು ಬರೆದ ಬಳಿಕ ವಿಜಯ್ ಯಾರೊಟ್ಟಿಗೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಇತ್ತು. ಅವರು ಸನ್ ನೆಟ್‌ವರ್ಕ್ಸ್‌ನ ಕಲಾನಿಧಿ ಮಾರನ್ ನಿರ್ಮಿಸುತ್ತಿರುವ 'ಬೀಸ್ಟ್' ಸಿನಿಮಾ ಆಯ್ಕೆ ಮಾಡಿಕೊಂಡರು.

'ಬೀಸ್ಟ್' ಸಿನಿಮಾದ ಚಿತ್ರೀಕರಣ ಮುಗಿಯುವ ಮೊದಲೇ ವಿಜಯ್ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಿನಿಮಾವನ್ನು ತೆಲುಗಿನ ನಿರ್ದೇಶಕ ನಿರ್ದೇಶಿಸುತ್ತಿದ್ದು, ನಿರ್ಮಾಪಕರೂ ತೆಲುಗಿನವರೇ ಆಗಿದ್ದಾರೆ.

Vijays Next Movie Will Be Directed By Vamshi Paidipalli Produced By Dil Raju

ವಿಜಯ್ ನಟನೆಯ 66ನೇ ಸಿನಿಮಾವನ್ನು ತೆಲುಗಿನ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿದ್ದಾರೆ. ವಂಶಿ ನಿರ್ದೇಶಿಸಿ ಮಹೇಶ್ ಬಾಬು ನಟಿಸಿದ್ದ 'ಮಹರ್ಷಿ' ಸಿನಿಮಾಕ್ಕೆ ಮನೊರಂಜನಾತ್ಮಕ ಸಿನಿಮಾ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಧಕ್ಕಿತ್ತು.

ವಿಜಯ್ ನಟಿಸಿ, ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿರುವ ಸಿನಿಮಾವನ್ನು ತೆಲುಗು ಸಿನಿಮಾ ರಂಗದ ಜನಪ್ರಿಯ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಬಹುಕೋಟಿ ನಿರ್ಮಾಪಕರಾದ ದಿಲ್ ರಾಜು, ವಿಜಯ್ ಸಿನಿಮಾವನ್ನು ಈ ಹಿಂದೆಯೇ ನಿರ್ಮಾಣ ಮಾಡುತ್ತಾರೆ ಎನ್ನಲಾಗಿತ್ತು, ಆದರೆ ಆ ಸುದ್ದಿ ಈಗ ನಿಜವಾಗಿದೆ.

ವಂಶಿ ಪೈಡಿಪಲ್ಲಿ, ಸಾಮಾಜಿಕ ಸಂದೇಶವುಳ್ಳ ಕಮರ್ಷಿಯಲ್ ಸಿನಿಮಾಗಳನ್ನು ನಿರ್ದೇಶಿಸುವುದರಲ್ಲಿ ಪರಿಚಿತರು. ವಿಜಯ್‌ ಇಮೇಜಿಗೆ ಅಂಥಹಾ ಸಿನಿಮಾಗಳು ಚೆನ್ನಾಗಿ ಹೊಂದಿಕೆ ಆಗುತ್ತವೆ ಹಾಗಾಗಿ ವಿಜಯ್‌ರ ಮುಂದಿನ ಸಿನಿಮಾ ಕುತೂಹಲ ಹುಟ್ಟಿಸಿದೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ಸದ್ಯಕ್ಕೆ 'ದಳಪತಿ 66' ಎಂದು ಈ ಸಿನಿಮವನ್ನು ಕರೆಯಲಾಗುತ್ತಿದೆ.

ವಿಜಯ್ ಪ್ರಸ್ತುತ 'ಬೀಸ್ಟ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ವಿಜಯ್ ಎದುರು ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಸಿನಿಮಾವನ್ನು ಕಲಾನಿಧಿ ಮಾರನ್ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ನೀಡುತ್ತಿರುವುದು ಅನಿರುದ್ಧ ರವಿಚಂದ್ರನ್. ಈ ಸಿನಿಮಾದ ಚಿತ್ರೀಕರಣದ ಬಳಿಕ ವಂಶಿ ಪೈಡಿಪಲ್ಲಿ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ. ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

More from Filmibeat

English summary
Vijay's next movie will be directed by Vamshi Paidipalli and produced by Dil Raju. Vijay now acting in Beast movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X