ತಮಿಳುನಾಡು ಚುನಾವಣೆ ಅಂತಿಮ ಫಲಿತಾಂಶ; ಟಿವಿಕೆ ಪಡೆದ ಮತಗಳು ಎಷ್ಟು? ಎಂಜಿಆರ್ ದಾಖಲೆ ಹಿಂದಿಕ್ಕಿದ ವಿಜಯ್

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರ ಗೊತ್ತಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚು ಕ್ಷೇತ್ರಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಬಹಳ ವರ್ಷಗಳ ಬಳಿಕ ಸಿನಿಮಾ ನಟ ಸ್ವಂತ ಪಕ್ಷ ಕಟ್ಟಿ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಪಟ್ಟಕ್ಕೆ ಏರುತ್ತಿದ್ದಾರೆ. ದಳಪತಿ ವಿಜಯ್ ತನ್ನ ಸಿನಿಮಾ ಜನಪ್ರಿಯತೆಯನ್ನು ಬಳಸಿಕೊಂಡು ರಾಜಕೀಯರಂಗ ಪ್ರವೇಶಿಸಿ ಸಕ್ಸಸ್ ಕಂಡಿದ್ದಾರೆ. ಡಿಎಂಕೆ, ಎಡಿಎಂಕೆ ಪಕ್ಷಗಳ ಆರ್ಭಟಕ್ಕೆ ಬ್ರೇಕ್ ಹಾಕಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಜಯ್ ಸ್ಪರ್ಧೆ ಕಾರಣಕ್ಕೆ ಈ ಬಾರಿ ತಮಿಳುನಾಡಿನಲ್ಲಿ ಹೆಚ್ಚು ಮತದಾನವಾಗಿತ್ತು. ಇದೀಗ ಫಲಿತಾಂಶದಲ್ಲಿ ಕೂಡ ಅದು ಎದ್ದು ಕಾಣುತ್ತಿದೆ.

Vijay s TVK Creates History in Tamil Nadu 2026 Polls Emerges Largest Party with 108 Seats

ಸ್ವತಃ ವಿಜಯ್ ತಿರುಚಿರಪ್ಪಲ್ಲಿ (ಈಸ್ಟ್) ಹಾಗೂ ಪೆರಂಬೂರ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಎರಡೂ ಕಡೆ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವಿಜಯ್ ಜನಪ್ರಿಯತೆ ಜೊತೆಗೆ ಡಿಎಂಕೆ ಆಡಳಿತ ವಿರೋಧಿ ಅಲೆ ಈ ಬಾರಿ ಟಿವಿಕೆ ಕೈ ಹಿಡಿದಿದೆ. ಅದೇ ಕಾರಣಕ್ಕೆ ಪಕ್ಷ ಕಟ್ಟಿ ಅಖಾಡಕ್ಕೆ ಇಳಿದ ಮೊದಲ ಪ್ರಯತ್ನದಲ್ಲೇ ವಿಜಯಮಾಲೆ ಸಿಕ್ಕಿದೆ. ಯುವ ಜನತೆ ಹಾಗೂ ಮಹಿಳೆಯರು ವಿಜಯ್ ಬೆಂಬಲಕ್ಕೆ ನಿಂತರು. ಹಾಗಾಗಿ ದಶಕಗಳ ಇತಿಹಾಸ ಇರುವ ತಮಿಳುನಾಡಿನ ಎರಡು ಪ್ರಾದೇಶಿಕ ಪಕ್ಷಗಳಿಗೆ ಹಿನ್ನಡೆಯಾಗಿದೆ.

ಸದ್ಯ 2026ರ ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶದ ಅಂತಿಮ ಅಂಕಿಅಂಶಗಳು ಲಭ್ಯವಾಗಿದೆ. ಟಿವಿಕೆ ಪಕ್ಷ 34.92%ರಷ್ಟು ಮತಗಳನ್ನು ಪಡೆದಿದೆ. ಒಟ್ಟು 108 ಕ್ಷೇತ್ರಗಳಲ್ಲಿ ವಿಜಯ್ ಸ್ಥಾಪಿಸಿರುವ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಆಟೋ ಡ್ರೈವರ್ ವಿಜಯ್ ಧಾಮು ಹಾಗೂ ವಿಜಯ್ ಕಾರ್ ಡ್ರೈವರ್ ಮಗ ಶಬರಿನಾಥನ್ ಕೂಡ ಗೆಲುವಿನ ನಗೆ ಬೀರಿದ್ದಾರೆ. ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ತಮ್ಮದೇ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿದ್ದಾರೆ.

Vijay s TVK Creates History in Tamil Nadu 2026 Polls Emerges Largest Party with 108 Seats

ಟಿವಿಕೆ ಪಕ್ಷ ಒಟ್ಟು 17226209 ಮತಗಳನ್ನು ಧಕ್ಕಿಸಿಕೊಂಡಿದೆ. ಎರಡನೇ ಸ್ಥಾನ ಪಡೆದ ಡಿಎಂಕೆ ಪಕ್ಷ 11929144 ಹಾಗೂ ಮೂರನೇ ಸ್ಥಾನದಲ್ಲಿರುವ ಎಡಿಎಂಕೆ 10462146 ಮತಗಳನ್ನು ಪಡೆದಿದೆ. ಈ ಹಿಂದೆ ಚಿತ್ರರಂಗದಿಂದ ರಾಜಕೀಯರಂಗಕ್ಕೆ ಬಂದು ಎಂಜಿಆರ್ ಹಾಗೂ ಜಯಲಲಿತಾ ಕೂಡ ಗೆದ್ದು ಸಿಎಂ ಪಟ್ಟ ಅಲಂಕರಿಸಿದ್ದರು. ಡಿಎಂಕೆಯಿಂದ ಹೊರ ಬಂದು ಎಂಜಿಆರ್ ಸ್ವಂತ ಪಕ್ಷ ಕಟ್ಟಿದ್ದರು. 1977ರಲ್ಲಿ ಎಡಿಎಂಕೆ ಪಕ್ಷ ಸ್ಪಷ್ಟ ಬಹುಮತ ಸಾಧಿಸಿ ತಮಿಳುನಾಡಿನಲ್ಲಿ ಅಧಿಕಾರ ಹಿಡಿದಿತ್ತು. ಶೇಕಡಾವಾರು ಮತಗಳ ವಿಚಾರದಲ್ಲಿ ಎಂಜಿಆರ್ ನೇತೃತ್ವದ ಪಕ್ಷ ಮೊದಲ ಬಾರಿ ಗಳಿಸಿದ ಮತಗಳಿಗಿಂತ ಟಿವಿಕೆ ಹೆಚ್ಚು ಮತಗಳನ್ನು ಪಡೆದಿದೆ.

ಆಂಧ್ರದಲ್ಲಿ ನಟ ಎನ್‌ಟಿಆರ್ ಕೂಡ ಹೊಸ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಸಿಎಂ ಪಟ್ಟ ಅಲಂಕರಿಸಿದ್ದರು. 1983ರಲ್ಲಿ ನಡೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಪಕ್ಷ 46.30%ರಷ್ಟು ಮತಗಳನ್ನು ಪಡೆದಿತ್ತು. ಎನ್‌ಟಿಆರ್ ಹಾಗೂ ಎಂಜಿಆರ್ ಇಬ್ಬರು ಕಟ್ಟಿದ ಪಕ್ಷಗಳು ಸ್ಪಷ್ಟ ಬಹಮತ ಪಡೆದು ಸರ್ಕಾರ ರಚಿಸಿದ್ದವು. ಟಿವಿಕೆ 108 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ. ಸರ್ಕಾರ ರಚನೆಗೆ ಇನ್ನು 10 ಸೀಟ್‌ ಅವಶ್ಯಕತೆಯಿದೆ. ಈ ವಿಚಾರದಲ್ಲಿ ವಿಜಯ್ ಕೊಂಚ ಹಿನ್ನಡೆ ಅನುಭವಿಸಿದಂತೆ ಆಗಿದೆ. ಎಂಜಿಆರ್ ಹಾಗೂ ಎನ್‌ಟಿಆರ್ ಜನಪ್ರಿಯತೆಗೆ ಹೋಲಿಸಿದರೆ ವಿಜಯ್ ಜನಪ್ರಿಯತೆ ಕಮ್ಮಿ ಎನಿಸಬಹುದು. ಆದರೂ ಟಿವಿಕೆ ಪಕ್ಷದ ಸಾಧನೆ ಮೆಚ್ಚುವಂಥದ್ದು.

ಪೆರಂಬೂರ್ ಕ್ಷೇತ್ರದಲ್ಲಿ ನಟ ವಿಜಯ್ 1,20,365 ಮತಗಳನ್ನು ಪಡೆದು ದಾಖಲೆ ಬರೆದಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಡಿಎಂಕೆ ಪಕ್ಷದ ಅಭ್ಯರ್ಥಿ ಆರ್‌. ಡಿ ಶೇಖರ್ 66,650 ಮತ ಗಳಿಸಿದ್ದಾರೆ. ಅದೇ ರೀತಿ ತಿರುಚಿರಪ್ಪಲ್ಲಿ (ಈಸ್ಟ್) ಕ್ಷೇತ್ರದಲ್ಲಿ ವಿಜಯ್ 90,431 ಮತ ಗಳಿಸಿದ್ದು ಡಿಎಂಕೆ ಪಕ್ಷದ ಇರುದಯರಾಜ್ 63,965 ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

Read more about: vijay politics kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X