ವಿಜಯ್ ಸೇತುಪತಿ-ನಿತ್ಯಾ ಮೆನನ್ ಚಿತ್ರದ ಹೆಸರು '19 (1) (a)'

ತಮಿಳು ನಟ ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ಮಲಯಾಳಂ ಭಾಷೆಯಲ್ಲಿ ಹೊಸ ಸಿನಿಮಾ ಮಾಡಲಿದ್ದಾರೆ. ಈ ಚಿತ್ರವನ್ನು ಇಂದು ವಿಎಸ್ ನಿರ್ದೇಶಿಸಲಿದ್ದಾರೆ. ಇವರಿಬ್ಬರು ಒಟ್ಟಿಗೆ ನಟಿಸಲಿರುವ ಚಿತ್ರಕ್ಕೆ ಚಿತ್ರಕ್ಕೆ '19 (1) (a)' ಎಂದು ಹೆಸರಿಡಲಾಗಿದೆ.

ನಿತ್ಯಾ ಮೆನನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದು, ಚಿತ್ರೀಕರಣ ಶುರು ಮಾಡಲಿದ್ದೇವೆ ಎಂದು ತಿಳಿಸಿದ್ದರು. ವಿಜಯ್ ಸೇತುಪತಿ ಸಹ ಈ ಪೋಸ್ಟರ್‌ನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

ಅಂದ್ಹಾಗೆ, ಈ ಚಿತ್ರದ ಟೈಟಲ್ ಗಮನಿಸಿದರೆ ಭಾರತೀಯ ಸಂವಿಧಾನದ 19 (1) (ಎ) ವಿಧಿಯ (ಎಲ್ಲಾ ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ) ಸುತ್ತ ಕಥೆ ಮಾಡಲಾಗಿದೆಯೇ ಎಂಬ ಕುತೂಹಲ ಕಾಡುತ್ತಿದೆ. ಸದ್ಯಕ್ಕೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

Vijay sethupathi and nithya menon Pairing up in Malayalam Movie

ಪ್ರಸ್ತುತ ನಿತ್ಯಾ ಮೆನನ್ 'ಕೋಲಾಂಬಿ' ಮತ್ತು 'ಆರಾಮ್ ತಿರುಕಲ್ಪನ' ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ವಿಜಯ್ ಸೇತುಪತಿ ತಮಿಳು, ವಿಜಯ್ ಜೊತೆ 'ಮಾಸ್ಟರ್', ಹಾಗೂ ಹಿಂದಿ ಸಿನಿಮಾವೊಂದು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಅಂದ್ಹಾಗೆ, ಮಲಯಾಳಂ ನಟ ಜಯರಾಂ ನಟಿಸಿದ್ದ 'ಮಾರ್ಕೋನಿ ಮಥಾಯ್' ಚಿತ್ರದಲ್ಲಿ ವಿಜಯ್ ಸೇತುಪತಿ ಮಾಲಿವುಡ್ ಪ್ರವೇಶಿಸಿದ್ದರು. ಈ ಸಿನಿಮಾ 2019ರಲ್ಲಿ ತೆರೆಕಂಡಿತ್ತು.

Recommended Video

ನನ್ನ ವಯಕ್ತಿಕ ಜೀವನದಲ್ಲಿ ನಡೆದ ಕಥೆ ಇದು | NodidavaruEnantare? | Filmibeat Kannada

More from Filmibeat

English summary
Tamil Actor Vijay sethupathi and actress nithya menon pairing up in Director Indu's Next project in malayalam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X