ಮಗ ಮಾಡಿದ ಕೆಲಸಕ್ಕೆ ಕ್ಷಮೆ ಕೇಳಿದ ವಿಜಯ್ ಸೇತುಪತಿ..!

ಒಂದು ಕಡೆ ಕಮರ್ಷಿಯಲ್‌ ಹೀರೋ ಆಗಿದ್ದುಕೊಂಡೂ ಯಾವುದೇ ಇಮೇಜಿಗೆ ಅಂಟಿಕೊಳ್ಳದ ದಕ್ಷಿಣ ಭಾರತದ ಏಕೈಕ ಹೀರೋ ವಿಜಯ್‌ ಸೇತುಪತಿ. ಒಂದು ಸಿನಿಮಾ ಹಿಟ್‌ ಆಗುತ್ತಿದ್ದಂತೇ ಅದರ ಗೆಲುವನ್ನು ತಲೆಗೇರಿಸಿಕೊಂಡು ಇಂಥದ್ದೇ ಪಾತ್ರ ಮಾಡುತ್ತೀನಿ ಅಂತಾ ಹಠ ಹಿಡಿಯುವವರೇ ಹೆಚ್ಚು. ಇಂಥವರ ನಡುವೆ ಅದ್ಯಾವುದೇ ರೋಲಾದರೂ ಕೊಡಿ. ಕಥೆ ಚೆನ್ನಾಗಿದ್ದರೆ ಮಾಡ್ತೀನಿ ಎನ್ನುವ ವಿಜಯ್‌ ಸೇತುಪತಿ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡಿದವರು. ಪ್ರತಿ ಚಿತ್ರದಲ್ಲಿಯೂ ಪ್ರಯೋಗಾತ್ಮಕವಾಗಿಯೇ ತಮ್ಮನ್ನು ಒಡ್ಡಿಕೊಂಡವರು.

ಇಂಥಾ ವಿಜಯ್ ಸೇತುಪತಿ ಇದೀಗ ತನ್ನ ಮಗ ಮಾಡಿದ ತಪ್ಪಿಗೆ ಕ್ಷಮೆಯನ್ನು ಕೇಳಿದ್ದಾರೆ. ಹೌದು, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ವಿಜಯ್ ಸೇತುಪತಿ ಅವರ ಮಗ ಸೂರ್ಯ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ.

Vijay Sethupathi Apologizes for Son Surya s Viral Video Might Be Unintentional

'ಫೀನಿಕ್ಸ್' ಎಂಬ ಚಿತ್ರವನ್ನು ಮಾಡಿದ್ದಾರೆ. ಮೊನ್ನೆ .. ಮೊನ್ನೆಯಷ್ಟೇ .. ಈ ಚಿತ್ರ ಬಿಡುಗಡೆಯಾಗಿದೆ. ಇದೇ ಸಮಯದಲ್ಲಿ ಸೂರ್ಯ ಮಾಡಿದ ಪ್ರಮಾದ, ವಿಜಯ್ ಸೇತುಪತಿ ಅವರ ತಲೆ ತಗ್ಗಿಸಿದೆ.

ಹೌದು, ಅಸಲಿಗೆ ವಿಜಯ್ ಸೇತುಪತಿ ಅತ್ಯುತ್ತಮ ಕಲಾವಿದ ಮಾತ್ರ ಅಲ್ಲ ಅತ್ಯುತ್ತಮ ವ್ಯಕ್ತಿ ಕೂಡ ಹೌದು ಎನ್ನುವುದು ತಮಿಳು ಚಿತ್ರರಂಗದ ಅಭಿಪ್ರಾಯ. ಅಭಿಮಾನಿಗಳು ಕೂಡ ಸರಳ- ಸಜ್ಜನ ವ್ಯಕ್ತಿ ಎಂದೇ ಇವರನ್ನು ಕರೆಯುತ್ತಾರೆ. ವಿಜಯ್ ಸೇತುಪತಿ ಕೂಡ ಯಾವ ಅಹಂ ಇಲ್ಲದೇ ತಮ್ಮ ಅಭಿಮಾನಿಗಳನ್ನು ತುಂಬಾ ಪ್ರೀತಿಯಿಂದಲೇ ಮಾತನಾಡಿಸುತ್ತಾ ಬಂದಿದ್ದಾರೆ.

ಆದರೆ.. ಸೂರ್ಯ ವ್ಯಕ್ತಿತ್ವ ತಂದೆಯ ವ್ಯಕ್ತಿತ್ವಕ್ಕಿಂತ ಸಂಪೂರ್ಣ ತದ್ವಿರುದ್ದವಾಗಿದೆ ಎನ್ನುವುದು ಸದ್ಯ ಅನೇಕರ ವಾದ. ಯಾಕೆಂದರೆ ಫೀನಿಕ್ಸ್ ಚಿತ್ರದ ಕಾರ್ಯಕ್ರಮದಲ್ಲಿ ಸೂರ್ಯ ತಮ್ಮ ತಂದೆ ಸೇತುಪತಿ ಅವರ ಅಭಿಮಾನಿಗಳನ್ನು ಭೇಟಿಯಾಗಿದ್ದರು. ಮಾತನಾಡುತ್ತಿದ್ದರು.

ಆದರೆ ಈ ಸಮಯದಲ್ಲಿ ಸೂರ್ಯ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರು. ಇದು ಈಗ ಹಲವರ ಕಣ್ಣನ್ನು ಕೆಂಪಾಗಿಸಿದೆ. ಹೀಗಾಗಿಯೇ ಸೂರ್ಯ ಅವರನ್ನು ಅನೇಕರು ಟ್ರೋಲ್ ಮಾಡಲು ಶುರು ಮಾಡಿದ್ದು ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದರು ಎನ್ನುವುದಕ್ಕೆ ಸೂರ್ಯ ಸದ್ಯದ ಉದಾಹರಣೆ ಎನ್ನುತ್ತಿದ್ದಾರೆ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದ ದುರಂಹಕಾರಿ ಮಗ ಎಂದೆಲ್ಲ ಮಾತನಾಡುತ್ತಿದ್ದಾರೆ. ಯಾವ ಕಷ್ಟವನ್ನು ಪಡದೇ ಸಲೀಸಾಗಿ ಚಿತ್ರರಂಗಕ್ಕೆ ಬಂದಿರುವ ಕಾರಣಕ್ಕೆ ಇಷ್ಟೊಂದು ಧಿಮಾಕು ಎಂದು ಕೂಡ ಹಲವರು ಕಿಡಿ ಕಾರುತ್ತಿದ್ದಾರೆ.

Vijay Sethupathi Apologizes for Son Surya s Viral Video Might Be Unintentional

ತಮ್ಮ ಮಗನ ವಿರುದ್ಧ ವ್ಯಕ್ತವಾಗುತ್ತಿರುವ ಈ ಆಕ್ರೋಶ, ಅಸಹನೆ, ಅಸಮಾಧಾನ ವಿಜಯ್ ಸೇತುಪತಿ ಅವರಿಗೆ ಕೂಡ ಗೊತ್ತಾಗಿದ್ದು ಮಾಧ್ಯಮದವರ ಎದುರು ವಿಜಯ್ ಸೇತುಪತಿ ಕ್ಷಮೆ ಕೇಳಿದ್ದಾರೆ. ಗೊತ್ತಿಲ್ಲದೇ ಆಗಿರಬಹುದು ಅವನ ವರ್ತನೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಇನ್ನುಳಿದಂತೆ ವಿಜಯ್ ಸೇತುಪತಿ ಮಗನ ಚೊಚ್ಚಲ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಮರ್ಷಕರು ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಇಳಯ ದಳಪತಿ ವಿಜಯ್ ಕೂಡ ಸೂರ್ಯನ ಚಿತ್ರವನ್ನು ನೋಡಿದ್ದು ಸೂರ್ಯ ಅಭಿನಯ, ಶ್ರದ್ದೆ, ಶ್ರಮವನ್ನು ಬಾಯ್ತುಂಬ ಹೊಗಳಿದ್ದಾರೆ. ವಿಜಯ್ ಸೇತುಪತಿ ವಿಚಾರಕ್ಕೆ ಬಂದರೆ ವಿಜಯ್ ಸೇತುಪತಿ ಅಭಿನಯದ ಕಾಮಿಡಿ ಚಿತ್ರ ಈ ಜುಲೈ 25ರಂದು ತೆರೆಗೆ ಬರಲಿದೆ. ಖ್ಯಾತ ನಿರ್ದೇಶಕ ಮಿಸ್ಕಿನ್ ಅವರ ಜೊತೆ ಕೂಡ ವಿಜಯ್ ಸೇತುಪತಿ ಚಿತ್ರವನ್ನು ಮಾಡಿದ್ದು ಈ ಚಿತ್ರ ಕೂಡ ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

More from Filmibeat

English summary
Vijay Sethupathi apologizes for son Surya's viral video row in Bengaluru. The actor clarifies the incident was "unintentional." Learn more
Read more about: vijay sethupathi kollywood viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X