For Quick Alerts
  ALLOW NOTIFICATIONS  
  For Daily Alerts

  'ಮಾಸ್ಟರ್ ಶೆಫ್' ನಡೆಸಿಕೊಡಲು ವಿಜಯ್ ಸೇತುಪತಿ ಪಡೆದ ಸಂಭಾವನೆ ಎಷ್ಟು?

  By ಫಿಲ್ಮ್ ಡೆಸ್ಕ್
  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ವಿಜಯ್ ಸೇತುಪತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಯ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿರುವ ಸೇತುಪತಿ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ.

  ತಮಿಳು ಕಿರುತೆರೆಯಲ್ಲಿ ಪ್ರಸಾರವಾಗಲಿರುವ ಜನಪ್ರಿಯ ಶೋ ಮಾಸ್ಟರ್ ಶೆಫ್ ನಿರೂಪಣೆಯ ಹೊಣೆ ಹೊತ್ತಿದ್ದಾರೆ ವಿಜಯ್ ಸೇತುಪತಿ. ಮಾಸ್ಟರ್ ಶೆಫ್ ತಮಿಳು ಮೊದಲ ಸೀಸನ್ ನಡೆಸಿಕೊಡಲು ಮಾಸ್ಟರ್ ನಟ ಉತ್ಸಕರಾಗಿದ್ದಾರೆ. ತಮಿಳಿನ ಸನ್ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

  ಕಿರುತೆರೆಗೆ ಮರಳಿದ ವಿಜಯ್ ಸೇತುಪತಿ; ಜನಪ್ರಿಯ ಶೋ ನಿರೂಪಣೆಕಿರುತೆರೆಗೆ ಮರಳಿದ ವಿಜಯ್ ಸೇತುಪತಿ; ಜನಪ್ರಿಯ ಶೋ ನಿರೂಪಣೆ

  ಈಗಾಗಲೇ ಟಿವಿಯಲ್ಲಿ ಪ್ರೋಮೋ ಪ್ರಸಾರವಾಗುತ್ತಿದ್ದು, ವೀಕ್ಷಕರು ಮಕ್ಕಳ್ ಸೆಲ್ವನ್ ನನ್ನು ನೋಡಲು ಕಾತರರಾಗಿದ್ದಾರೆ. ಅಂದಹಾಗೆ ಮಾಸ್ಟರ್ ಶೆಫ್ ಆಗಲು ಸೇತುಪತಿ ಪಡೆದ ಸಂಭಾವನೆ ಎಷ್ಟು ಎನ್ನುವ ಚರ್ಚೆ ಪ್ರಾರಂಭವಾಗಿದೆ.

  ಈ ಕಾರ್ಯಕ್ರಮ ನಡೆಸಿಕೊಡಲು ವಿಜಯ್ ಸೇತುಪತಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಮುಂದೆ ಓದಿ..

  ದೊಡ್ಡ ಮೊತ್ತದ ಸಂಭಾವನೆ ಪಡೆದ್ರ ವಿಜಯ್ ಸೇತುಪತಿ?

  ದೊಡ್ಡ ಮೊತ್ತದ ಸಂಭಾವನೆ ಪಡೆದ್ರ ವಿಜಯ್ ಸೇತುಪತಿ?

  ಸೇತುಪತಿ ಸಿನಿಮಾಗಳಿಗೆ ಪಡೆಯುತ್ತಿದ್ದ ಸಂಭಾನೆಗಿಂತ ಮಾಸ್ಟರ್ ಶೆಫ್ ಗೆ ಹೆಚ್ಚಿನ ಮೊತ್ತದ ಸಂಭಾವನೆ ಪಡೆದಿದ್ದಾರಂತೆ. ಆದರೆ ಎಷ್ಟು ಎಂದು ಅಧಿಕೃತವಾದ ಸಂಖ್ಯೆ ಬಹಿರಂಗವಾಗಿಲ್ಲ. ದೊಡ್ಡ ಮೊತ್ತದ ಸಂಭಾವನೆ ಇದೆ ಎನ್ನುವ ಕಾರಣಕ್ಕೆ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ವಿಜಯ್ ಸೇತುಪತಿ ಸಿನಿಮಾಗೆ ಸುಮಾರು 50 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ಇದೆ.

  ಕಿರುತೆರೆಗೆ ಬಂದ ಕಾರಾಣವೇನು?

  ಕಿರುತೆರೆಗೆ ಬಂದ ಕಾರಾಣವೇನು?

  ಆದರೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ವಿಜಯ್ ಸೇತುಪತಿ, ಸಿನಿಮಾ ಮತ್ತು ಶೋಗಳನ್ನು ದುಡ್ಡಿಗಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಹಾಗಾಗಿ ಮಾಸ್ಟರ್ ಶೆಫ್ ನಡೆಸಿಕೊಡಲು ಕಾರಣ ಸೇತುಪತಿ ಇನ್ನೂ ಹೆಚ್ಚಿನ ಜನರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಸಾಧಕರನ್ನು ಬೆಳಕಿಗೆ ತರುವ ಉದ್ದೇಶದಿಂದ ಎನ್ನಲಾಗುತ್ತಿದೆ.

  ಆಸ್ಟ್ರೇಲಿಯಾದ ಪ್ರಸಿದ್ಧ ಅಡಿಗೆ ಶೋ

  ಆಸ್ಟ್ರೇಲಿಯಾದ ಪ್ರಸಿದ್ಧ ಅಡಿಗೆ ಶೋ

  ಮಾಸ್ಟರ್ ಶೆಫ್ ಆಸ್ಟ್ರೇಲಿಯಾದ ಪ್ರಸಿದ್ಧ ಶೋ ಆಗಿದ್ದು ಅಲ್ಲಿ 13ನೇ ಸೀಸನ್ ನಡೆಯುತ್ತಿದೆ. ಇಂಥ ಜನಪ್ರಿಯ ಅಡುಗೆ ಶೋಗೆ ಮಕ್ಕಳ್ ಸೆಲ್ವನ್ ಹೋಸ್ಟ್ ಮಾಡುತ್ತಿರುವುದು ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.

  ಈಗಾಗಲೇ ಕಿರುತೆರೆ ಶೋ ನಡೆಸಿಕೊಟ್ಟಿದ್ದರು ಸೇತುಪತಿ

  ಈಗಾಗಲೇ ಕಿರುತೆರೆ ಶೋ ನಡೆಸಿಕೊಟ್ಟಿದ್ದರು ಸೇತುಪತಿ

  ಅಂದಹಾಗೆ ವಿಜಯ್ ಸೇತುಪತಿ ಕಿರುತೆರೆಗೆ ಬಂದಿರುವುದು ಇದೇ ಮೊದಲೇನಲ್ಲ. ಈ ಮೊದಲು ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮ ಊರು ನಮ್ಮ ಹೀರೋ ಶೋ ನಡೆಸಿಕೊಡುತ್ತಿದ್ದರು. ಈ ಶೋ ಕೂಡ ಯಶಸ್ವಿಯಾಗಿತ್ತು. ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಕಮಾಲ್ ಮಾಡಲು ಸಿದ್ಧರಾಗಿದ್ದಾರೆ.

  ಎಲ್ಲರಿಗೂ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ ಎಂದ ಕುರಿ ಪ್ರತಾಪ್
  ವಿಜಯ್ ಸೇತುಪತಿ ಸಿನಿಮಾಗಳು

  ವಿಜಯ್ ಸೇತುಪತಿ ಸಿನಿಮಾಗಳು

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಜಯ್ ಸೇತುಪತಿ ಇತ್ತೀಚಿಗಷ್ಟೆ ಉಪ್ಪೇನಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ಲಾಬಮ್, ತುಘಲಕ್ ದರ್ಬಾರ್, ಯದುಮ್, ವಿದುತಲೈ, ಮುಂಬೈಕರ್ ಸೇರಿದಂತೆ ಕೈತುಂಬ ಸಿನಿಮಾಗಳಿವೆ.

  English summary
  Tamil Actor Vijay Sethupathi charges bigg remuneration to host masterchef.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X