For Quick Alerts
  ALLOW NOTIFICATIONS  
  For Daily Alerts

  ಒಂದು ಸುಳ್ಳು, ಒಂದು ಸತ್ಯ: ವಿಜಯ್ ಸೇತುಪತಿ ಸ್ಪಷ್ಟನೆ

  |

  ನಟ ವಿಜಯ್ ಸೇತುಪತಿ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರಷ್ಟು ಬ್ಯುಸಿ ನಟರು ಮತ್ತೊಬ್ಬರಿಲ್ಲವೋ ಏನೋ, ವರ್ಷಕ್ಕೆ ಕನಿಷ್ಟ ಹತ್ತು ಸಿನಿಮಾಗಳಲ್ಲಿ ವಿಜಯ್ ನಟಿಸುತ್ತಿದ್ದಾರೆ.

  2022 ರಲ್ಲಿ ವಿಜಯ್ ಸೇತುಪತಿಯವರ 11 ಸಿನಿಮಾಗಳು ಬಿಡುಗಡೆ ಆಗಲಿವೆ. ಅದರಲ್ಲಿ ಈಗಾಗಲೇ ಆರು ಸಿನಿಮಾಗಳು ಬಿಡುಗಡೆ ಆಗಿವೆ ಸಹ. ತಮಿಳಿನ ಈ ನಟನಿಗೆ ಈಗ ದಕ್ಷಿಣ ಭಾರತ ಮಾತ್ರವೇ ಅಲ್ಲದೆ ಬಾಲಿವುಡ್‌ನಲ್ಲೂ ಮಾರುಕಟ್ಟೆ ಸೃಷ್ಟಿಯಾಗಿದೆ.

  ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!

  ದೊಡ್ಡ ಬ್ಯಾನರ್‌ನ, ದೊಡ್ಡ ಸ್ಟಾರ್ ನಟರ ಹೊಸ ಸಿನಿಮಾಗಳು ಸೆಟ್ಟೇರಿದಾಗೆಲ್ಲ ಅದರ ಜೊತೆ ವಿಜಯ್ ಸೇತುಪತಿ ಹೆಸರು ಕೇಳಿಬರುತ್ತದೆ. ಇದೀಗ ವಿಜಯ್ ಸೇತುಪತಿ ಬಗ್ಗೆ ಚಾಲ್ತಿಯಲ್ಲಿರುವ ಎರಡು ಸುದ್ದಿಗಳೆಂದರೆ 'ಪುಷ್ಪ 2' ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ ಎಂಬುದು ಹಾಗೂ ಶಾರುಕ್ ಖಾನ್ ಜೊತೆಗೆ 'ಜವಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು. ಆದರೆ ಇದರಲ್ಲಿ ಒಂದು ಸತ್ಯ ಒಂದು ಸುಳ್ಳು.

  'ಪುಷ್ಪ 2' ನಲ್ಲಿ ವಿಜಯ್ ಇಲ್ಲ

  'ಪುಷ್ಪ 2' ನಲ್ಲಿ ವಿಜಯ್ ಇಲ್ಲ

  ಈಗಾಗಲೇ ಕತ್ರಿನಾ ಕೈಫ್ ಜೊತೆ ಹಿಂದಿ ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್ ಸೇತುಪತಿ ತಮ್ಮ ಬಗ್ಗೆ ಹರಿದಾಡುತ್ತಿರುವ 'ಪುಷ್ಪ 2' ಹಾಗೂ 'ಜವಾನ್' ಸಿನಿಮಾದ ಕುರಿತು ಸ್ಪಷ್ಟನೆ ನೀಡಿದ್ದಾರೆ. ವಿಜಯ್ ಸೇತುಪತಿ ಹೇಳಿರುವಂತೆ, 'ಪುಷ್ಪ 2' ಸಿನಿಮಾ ತಂಡದವರು ಸಿನಿಮಾದಲ್ಲಿ ನಟಿಸುವಂತೆ ಅವರನ್ನು ಸಂಪರ್ಕಿಸಿಲ್ಲವಂತೆ. ಹಾಗಾಗಿ 'ಪುಷ್ಪ 2' ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸುತ್ತಿಲ್ಲ ಎಂಬುದು ಖಾತ್ರಿ.

  ಶಾರುಕ್ ಖಾನ್ ಜೊತೆ ನಟನೆ

  ಶಾರುಕ್ ಖಾನ್ ಜೊತೆ ನಟನೆ

  ಇನ್ನು ಶಾರುಕ್ ಖಾನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಜವಾನ್' ನಲ್ಲಿ ತಾವು ನಟಿಸುತ್ತಿರುವುದಾಗಿ ವಿಜಯ್ ಸೇತುಪತಿ ಖಾತ್ರಿ ಪಡಿಸಿದ್ದಾರೆ. ಈ ಬಗ್ಗೆ ವಿಜಯ್‌ರ ಅಸಿಸ್ಟೆಂಟ್ ಆಗಿರುವ ಯುವರಾಜ್ ಟ್ವೀಟ್ ಮಾಡಿದ್ದಾರೆ. ತಮಿಳಿನ ಜನಿಪ್ರಿಯ ನಿರ್ದೇಶಕ ಅಟ್ಟಿಲಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿದ್ದಾರಂತೆ. ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ.

  ವಿಜಯ್ ಅನ್ನು ಹೊಗಳಿದ್ದ ಶಾರುಕ್ ಖಾನ್

  ವಿಜಯ್ ಅನ್ನು ಹೊಗಳಿದ್ದ ಶಾರುಕ್ ಖಾನ್

  ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ವಿಜಯ್ ಸೇತುಪತಿ ಹಾಗೂ ಶಾರುಕ್ ಖಾನ್ ಒಂದಾಗಿದ್ದರು. ಆ ಸಮಯದಲ್ಲಿ ಶಾರುಕ್ ಖಾನ್, ವಿಜಯ್ ಸೇತುಪತಿಯನ್ನು ಬಹಳ ಹೊಗಳಿದ್ದರು. ಭಾರತದ ಅತ್ಯುತ್ತಮ ನಟ ಎಂದು ವಿಜಯ್ ಸೇತುಪತಿಯನ್ನು ಮೆಚ್ಚಿಕೊಂಡಿದ್ದರು ಕಿಂಗ್ ಖಾನ್. ವಿಜಯ್ ಸಹ ಇದು ನನ್ನ ಪಾಲಿಗೆ ಅವಿಸ್ಮರಣೀಯ ದಿನ ಎಂದಿದ್ದರು. ಇದೀಗ ಶಾರುಕ್ ಖಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಇದು ಅವರ ನಟನೆಯ ಮೂರನೇ ಬಾಲಿವುಡ್ ಸಿನಿಮಾ ಆಗಿರಲಿದೆ.

  ನೆಗೆಟಿವ್ ಪಾತ್ರ ಒಪ್ಪಿಕೊಳ್ಳುತ್ತಿಲ್ಲ ವಿಜಯ್

  ನೆಗೆಟಿವ್ ಪಾತ್ರ ಒಪ್ಪಿಕೊಳ್ಳುತ್ತಿಲ್ಲ ವಿಜಯ್

  ಕತ್ರಿನಾ ಕೈಫ್ ಜೊತೆಗೆ 'ಕ್ರಿಸ್‌ಮಸ್' ಸಿನಿಮಾದಲ್ಲಿ ನಟಿಸಿರುವ ವಿಜಯ್ ಸೇತುಪತಿ, ತಮಿಳಿನ 'ಮಾನಗರಂ' ಸಿನಿಮಾದ ಹಿಂದಿ ರೀಮೇಕ್ 'ಮುಂಬೈಕರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ 'ಜವಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ವಿಜಯ್ ಸೇತುಪತಿ ವಿಲನ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲವಂತೆ, ಶಾರುಕ್ ನಟನೆಯ 'ಜವಾನ್' ಹೊರತುಪಡಿಸಿ ಇನ್ನಾವುದೇ ಸಿನಿಮಾದಲ್ಲಿ ವಿಜಯ್ ಸೇತುಪತಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.

  English summary
  Actor Vijay Sethupathi clarifies on Jawan and Pushpa 2 movie. He said he is acting in Jawan movie and not acting in Pushpa 2 movie.
  Sunday, August 14, 2022, 18:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X