Breaking: ಮುರಳೀಧರನ್ ಬಯೋಪಿಕ್‌ಗೆ ಗುಡ್ ಬೈ ಹೇಳಿದ ವಿಜಯ್ ಸೇತುಪತಿ

ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ಘೋಷಣೆ ಆದ ಸಂದರ್ಭದಿಂದಲೂ ಅದರ ಸುತ್ತ ವಿವಾದ ಅಂಟಿಕೊಂಡಿದೆ. ತಮಿಳುನಾಡಿನಲ್ಲಿ ಹಲವು ಸಂಘಟನೆಗಳು ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿಜಯ್ ಸೇತುಪತಿ ಈ ಸಿನಿಮಾ ಮಾಡಬಾರದು ಎಂದು ಒತ್ತಾಯ ಹಾಕುತ್ತಿದ್ದರು.

ವಿಜಯ್ ಸೇತುಪತಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದೀಗ, ಸ್ವತಃ ಮುತ್ತಯ್ಯ ಮುರಳೀಧರನ್ '800' ಚಿತ್ರದ ಕುರಿತು ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದ್ದು, ವಿಜಯ್ ಸೇತುಪತಿ ಅವರಿಗೆ ಈ ಸಿನಿಮಾ ಮಾಡದಂತೆ ಮನವಿ ಮಾಡಿದ್ದಾರೆ. ಮುರಳೀಧರನ್ ಹೇಳಿಕೆ ಬೆನ್ನಲ್ಲೆ ಸೇತುಪತಿ ಸಹ ಈ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿ....

ನಟಿಸಬೇಡಿ ಎಂದು ಮನವಿ ಮಾಡಿದ ಮುತ್ತಯ್ಯ

ನಟಿಸಬೇಡಿ ಎಂದು ಮನವಿ ಮಾಡಿದ ಮುತ್ತಯ್ಯ

''800'' ಹೆಸರಿನಲ್ಲಿ ತಯಾರಾಗಬೇಕಿದ್ದ ಶ್ರೀಲಂಕಾದ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಯೋಪಿಕ್‌ನಿಂದ ಚಿತ್ರದಿಂದ ನಟ ವಿಜಯ್ ಸೇತುಪತಿ ಹಿಂದೆ ಸರಿಯಬೇಕೆಂದು ಮನವಿ ಮಾಡಿದ್ದಾರೆ. ಬಯೋಪಿಕ್ ಸಿನಿಮಾ ಎದುರಿಸುತ್ತಿರುವ ವಿವಾದ ಕುರಿತು ಅಧಿಕೃತ ಹೇಳಿಕೆ ನೀಡಿರುವ ಮುರಳೀಧರನ್ ''ವಿಜಯ್ ಸೇತುಪತಿ ಅವರಿಗೆ ತೊಂದರೆ ಆಗುವುದು ನನಗೆ ಇಷ್ಟ ಇಲ್ಲ, ಈ ಸಿನಿಮಾದಿಂದ ಹಿಂದೆ ಸರಿಯಿರಿ'' ಎಂದು ಕೇಳಿದ್ದಾರೆ.

ವಿಜಯ್ ಸೇತುಪತಿ ಸಮ್ಮತಿ

ವಿಜಯ್ ಸೇತುಪತಿ ಸಮ್ಮತಿ

ಮುತ್ತಯ್ಯ ಮುರಳೀಧರನ್ ಅವರ ಅಧಿಕೃತ ಹೇಳಿಕೆ ಬಿಡುಗಡೆಯಾದ ಬಳಿಕ ಅದನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಟ ವಿಜಯ್ ಸೇತುಪತಿ ''ಥ್ಯಾಂಕ್ಸ....ಗುಡ್ ಬೈ'' ಎಂದು ಹೇಳಿದ್ದಾರೆ. ಹಾಗಾಗಿ, 800 ಚಿತ್ರದಿಂದ ಸೇತುಪತಿ ಹಿಂದೆ ಸರಿದಿರುವುದನ್ನು ಖಚಿತಪಡಿಸಿದ್ದಾರೆ ಎಂದು ಅಭಿಮಾನಿಗಳು ನಂಬಿದ್ದಾರೆ.

ಮುರಳೀಧರನ್ ಹೇಳಿಕೆಯಲ್ಲಿ ಏನಿದೆ?

ಮುರಳೀಧರನ್ ಹೇಳಿಕೆಯಲ್ಲಿ ಏನಿದೆ?

''ನನ್ನ ಆತ್ಮಚರಿತ್ರೆಯ ಚಿತ್ರ ''800''ರ ಸುತ್ತ ತಮಿಳುನಾಡಿನಲ್ಲಿ ಉಂಟಾದ ವಿವಾದದ ಬಗ್ಗೆ ನನ್ನ ಹೇಳಿಕೆ ಬಿಡುಗಡೆ ಮಾಡುತ್ತಿದ್ದೇನೆ. ''800'' ಚಿತ್ರವನ್ನು ತೊರೆಯುವಂತೆ ನಟ ವಿಜಯ್ ಸೇತುಪತಿ ಅವರಿಗೆ ಅನೇಕರು ಒತ್ತಡ ಹೇರುತ್ತಿರುವುದು ನನಗೆ ತಿಳಿದಿದೆ. ವಿಜಯ್ ಸೇತುಪತಿ ಅವರ ವೃತ್ತಿಜೀವನದಲ್ಲಿ ಅನಗತ್ಯವಾಗಿ ಅಡ್ಡಿಯಾಗಬಾರದು ಎಂದು ಪರಿಗಣಿಸಿ ಚಿತ್ರದಿಂದ ಹಿಂದೆ ಸರಿಯುವಂತೆ ನಾನು ವಿನಂತಿಸುತ್ತೇನೆ'' ಎಂದು ಕೇಳಿಕೊಂಡಿದ್ದಾರೆ.

ಯುವ ಕ್ರಿಕೆಟಿಗರಿಗೆ ಇದು ಸ್ಫೂರ್ತಿ

ಯುವ ಕ್ರಿಕೆಟಿಗರಿಗೆ ಇದು ಸ್ಫೂರ್ತಿ

''ಪ್ರತಿ ಬಾರಿಯೂ ನನಗೆ ಬರುವ ಅಡೆತಡೆಗಳಿಂದ ನಾನು ಎಂದಿಗೂ ಆಯಾಸವಾಗುವುದಿಲ್ಲ. ಅದನ್ನೆಲ್ಲ ಮೀರಿ ನಾನು ಈ ಹಂತವನ್ನು ತಲುಪಲು ಸಾಧ್ಯವಾಯಿತು. ಭವಿಷ್ಯದ ಪೀಳಿಗೆಗೆ ಮತ್ತು ಯುವ ಕ್ರಿಕೆಟಿಗರಿಗೆ ಇದು ಸ್ಫೂರ್ತಿ ನೀಡುತ್ತದೆ ಎಂಬ ಭರವಸೆಯಿಂದ ನನ್ನ ಆತ್ಮಚರಿತ್ರೆಯನ್ನು ಚಿತ್ರೀಕರಿಸಲು ಒಪ್ಪಿಕೊಂಡೆ. ಅದೂ ಈಗ ನಿರ್ಬಂಧಗಳಿಗೆ ಒಳಪಟ್ಟಿದೆ.

Recommended Video

ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada
ಎಲ್ಲರಿಗೂ ಧನ್ಯವಾದಗಳು

ಎಲ್ಲರಿಗೂ ಧನ್ಯವಾದಗಳು

''ಖಂಡಿತವಾಗಿಯೂ ಈ ಎಲ್ಲ ಅಡೆತಡೆಗಳನ್ನು ಅವರು ಬಗೆಹರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಪ್ರಕಟಣೆ ಶೀಘ್ರದಲ್ಲೇ ಬರಲಿದೆ ಎಂದು ನಿರ್ಮಾಣ ಸಂಸ್ಥೆ ನನಗೆ ಭರವಸೆ ನೀಡಿದೆ ಮತ್ತು ಅವರ ಎಲ್ಲ ಪ್ರಯತ್ನಗಳನ್ನು ನಾನು ಬೆಂಬಲಿಸುತ್ತೇನೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಈ ಪರಿಸ್ಥಿತಿಯಲ್ಲಿ ಬೆಂಬಲ ನೀಡಿದ ಎಲ್ಲ ಪತ್ರಿಕಾ ಸ್ನೇಹಿತರು, ರಾಜಕೀಯ ವ್ಯಕ್ತಿಗಳು, ತಮಿಳು ಚಲನಚಿತ್ರ ನಿರ್ಮಾಪಕರು, ವಿಜಯ್ ಸೇತುಪತಿ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ, ವಿಶೇಷವಾಗಿ ತಮಿಳುನಾಡಿನ ಜನರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು'' ಎಂದು ಮುರಳೀಧರನ್ ತಿಳಿಸಿದ್ದಾರೆ.

More from Filmibeat

English summary
Tamil actor Vijay Sethupathi has walked out of Muttiah Muralitharan biopic "800" Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X