Bigg Boss 8 ; ಕಾಲಿವುಡ್‌ನ 'ಬಿಗ್ ಬಾಸ್‌' ಆದ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ..!

ಒಂದು ಚಿತ್ರ ಗೆಲ್ಲುತ್ತಿದ್ದಂತೆಯೇ ಆ ಗೆಲುವನ್ನು ತಲೆಗೇರಿಸಿಕೊಂಡು ಈ ತರಹದ್ದೇ ಪಾತ್ರ ಮಾಡುತ್ತೇನೆ ಎಂದು ಹಠ ಹಿಡಿದು ಕುಳಿತುಕೊಳ್ಳುವವರೇ ಹೆಚ್ಚು. ಇಂಥವರ ನಡುವೆ ಯಾವ ಪಾತ್ರವಾದರೂ ಕೊಡಿ ಕಥೆ ಚೆನ್ನಾಗಿದ್ದರೆ ಮಾಡ್ತೀನಿ ಎನ್ನುವ ವಿಜಯ್ ಸೇತುಪಡಿ ಇಲ್ಲಿಯವರೆಗೆ ಹಲವು ವೈವಿಧ್ಯಮಯ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದಾರೆ. ಪ್ರತಿಯೊಂದು ಚಿತ್ರದಲ್ಲಿಯೂ ಪ್ರಯೋಗಾತ್ಮಕವಾಗಿ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಇಂಥಾ ವಿಜಯ್ ಸೇತುಪತಿ ಇದೀಗ ಕಿರುತೆರೆಯತ್ತ ಬಂದಿದ್ದಾರೆ. ಕಮಲ್ ಹಾಸನ್ ಬದಲು ಬಿಗ್ ಬಾಸ್ ಜವಾಬ್ಧಾರಿಯನ್ನು ವಹಿಸಿಕೊಂಡಿದ್ಧಾರೆ.

ಹೌದು, ಅಸಲಿಗೆ ಕಮಲ್ ಹಾಸನ್ ನನ್ನಿಂದ ಬಿಗ್ ಬಾಸ್ ನಿರೂಪಣೆ ಇನ್ಮುಂದೆ ಸಾಧ್ಯವಾಗಲ್ಲ ಎನ್ನುವ ಮಾತುಗಳನ್ನು ಹೇಳಿದ್ದರು. ಕೆಲಸದ ಒತ್ತಡ ಮತ್ತು ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಲೇಬೇಕಾದ ಕಾರಣದಿಂದ ಈ ಬಾರಿ ನನ್ನಿಂದ ನಿರೂಪಣೆ ಸಾಧ್ಯ ಇಲ್ಲ ಎಂದು ಬಿಗ್ ಬಾಸ್ ಮನೆಗೆ ಧೀರ್ಘ ದಂಡ ನಮಸ್ಕಾರ ಹಾಕಿ ಹೊರಬಂದಿದ್ದರು. ಈ ಹಿನ್ನೆಲೆ ಕಾಲಿವುಡ್‌ನಲ್ಲಿ ಬಿಗ್ ಬಾಸ್ ಯಾರು ಎನ್ನುವ ಪ್ರಶ್ನೆ ಎದ್ದಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಕಾಲಿವುಡ್‌ ಕಿರುತೆರೆ ಮಕ್ಕಳ್ ಸ್ವಾಮಿ ವಿಜಯ್ ಸೇತುಪತಿ ಅವರಿಗೆ ಬಿಗ್ ಬಾಸ್ ಪಟ್ಟ ಕಟ್ಟಿದೆ.

Vijay Sethupathi is set to host the eighth season of Bigg Boss Tamil

ಸದ್ಯ ವಿಜಯ್ ಸೇತುಪತಿ ಬಿಗ್ ಬಾಸ್ ಜವಾಬ್ದಾರಿಯನ್ನೂ ವಹಿಸಿಕೊಂಡ ಸುದ್ದಿಯನ್ನು ಕೇಳಿ ತಮಿಳು ಕಲಾರಸಿಕರು ಪುಳಕಿತರಾಗಿದ್ದಾರೆ. ಹೊರ ಬಂದಿರುವ ಪ್ರೋಮೋವನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್‌ನ ಕಳೆ ವಿಜಯ್ ಸೇತುಪತಿ ಅವರಿಂದ ಇನ್ನೂ ಹೆಚ್ಚಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಅನೇಕರು, ಬಿಗ್ ಬಾಸ್‌ನ ಇನ್ಮುಂದೆ ತಪ್ಪದೇ ನೋಡುವುದಾಗಿ ಕೂಡ ಪ್ರಾಮೀಸ್ ಮಾಡಿದ್ದಾರೆ. ಬಿಗ್ ಬಾಸ್‌ಗೋಸ್ಕರ ಕಾತುರದಿಂದ ಕಾಯುತ್ತಿರುವುದಾಗಿ ಕೂಡ ಕಾಮೆಂಟ್ ಮಾಡಿದ್ದಾರೆ.

ಅಂದ್ಹಾಗೇ ವಿಜಯ್ ಸೇತುಪತಿ ಈ ಹಿಂದೆ ಮಾಸ್ಟರ್ ಶೆಫ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಮೂವತ್ತು ಸಂಚಿಕೆಯನ್ನೊಳಗೊಂಡ ಈ ಕಾರ್ಯಕ್ರಮ ಕೂಡ ವಿಜಯ್ ಸೇತುಪತಿ ಅವರಿಂದ ಪ್ರಸಿದ್ಧಿಯನ್ನೂ ಪಡೆದಿತ್ತು. ತಾನು ಕೇವಲ ಅತ್ಯುತ್ತಮ ನಟ ಮಾತ್ರ ಅಲ್ಲ ಅತ್ಯುತ್ತಮ ನಿರೂಪಕ ಕೂಡ ಹೌದು ಎನ್ನುವುದನ್ನು ಕೂಡ ವಿಜಯ್ ಸೇತುಪತಿ ಈ ಕಾರ್ಯಕ್ರಮದ ಮೂಲಕ ಸಾಬೀತು ಮಾಡಿದ್ದರು. ಈಗ ಬಿಗ್ ಬಾಸ್ ಸವಾಲನ್ನು ಸ್ವೀಕರಿಸಿ, ದೊಡ್ಮನೆಯ ದೊಡ್ಡಾಟದ ಕಥೆ-ವ್ಯಥೆಯನ್ನು ಹೇಳಲು ವಿಜಯ್ ಸೇತುಪತಿ ಮುಂದಾಗಿದ್ದಾರೆ.

ಉಳಿದಂತೆ ವಿಜಯ್ ಸೇತುಪತಿ ಸದ್ಯಕ್ಕೆ ಬಿಡುವಿರದ ನಟ. ಮಹಾರಾಜ ಚಿತ್ರದ ನಂತರ ವಿಜಯ್ ಸೇತುಪತಿ ಬೇಡಿಕೆ ಇನ್ನೂ ಹೆಚ್ಚಾಗಿದೆ. ವೆಟ್ರಿಮಾರನ್ ನಿರ್ದೇಶನದಲ್ಲಿ ಸಿದ್ಧವಾದ ವಿಡುದಲೈ ಭಾಗ 2 ಬಿಡುಗಡೆಗೆ ಸಿದ್ಧವಾಗಿದೆ. ಬಿಗ್ ಬಾಸ್ ಮತ್ತು ಸಿನಿಮಾ ಇವೆರಡನ್ನು ವಿಜಯ್ ಸೇತುಪತಿ ಹೇಗೆ ನಿಭಾಯಿಸುತ್ತಾರೆ ಎನ್ನುವ ಪ್ರಶ್ನೆ ಕೂಡ ಇವರ ಅಭಿಮಾನಿಗಳನ್ನು ಈಗ ಕಾಡುತ್ತಿದೆ. ಇನ್ನೂ ಸದ್ಯಕ್ಕೆ ಬಿಗ್ ಬಾಸ್ ತಮಿಳಿನ 08ನೇ ಆವೃತ್ತಿಯ ಪ್ರೋಮೋ ಹೊರ ಬಂದಿದ್ದು, ಪ್ರಸಾರದ ದಿನಾಂಕ ವಾಹಿನಿ ಸದ್ಯದಲ್ಲಿಯೇ ಅಧಿಕೃತವಾಗಿ ಘೋಷಿಸಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X