For Quick Alerts
  ALLOW NOTIFICATIONS  
  For Daily Alerts

  ನಟನಾಗುವ ಮೊದಲು ವಿಜಯ್ ಸೇತುಪತಿ ಈ ಕಾರಣಕ್ಕಾಗಿ ದುಬೈಗೆ ಹಾರಿದ್ದರು

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟರಲ್ಲಿ ವಿಜಯ್ ಸೇತುಪತಿ ಕೂಡ ಒಬ್ಬರು. ಪೋಷಕ ನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ವಿಜಯ್ ಸೇತುಪತಿ ಇಂದು ಗಡಿಗೂ ಮೀರಿ ಅಭಿಮಾನಿ ಬಳಗ ಸಂಪಾದಿಸಿರುವುದಲ್ಲದೇ, ಗಡಿಗೂ ಮೀರಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

  ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ವಿಜಯ್ ಸೇತುಪತಿ ಅತ್ಯಂತ ಪ್ರತಿಭಾವಂತ ನಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಸಾಧಾರಣ ಮತ್ತು ಅದ್ಭುತ ಅಭಿನಯಕ್ಕೆ ಮನಸೋಲದ ಅಭಿಮಾನಿಗಳಿಲ್ಲ. ಇಂದು ಮಕ್ಕಳ್ ಸೆಲ್ವನ್ ಆಗಿ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತಿರುವ ವಿಜಯ್ ಸೇತುಪತಿ ನಟನಾಗುವ ಮೊದಲು ತುಂಬಾ ಕಷ್ಟದ ಜೀವನ ನಡೆಸುತ್ತಿದ್ದರು. ಮುಂದೆ ಓದಿ..

  ದುಬೈಗೆ ಹಾರಿದ್ದ ವಿಜಯ್

  ದುಬೈಗೆ ಹಾರಿದ್ದ ವಿಜಯ್

  ಇಂದು ಸ್ಟಾರ್ ಡಮ್, ಹಣ ಎಲ್ಲವನ್ನು ಸಂಪಾದಿಸಿರುವ ವಿಜಯ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಮೊದಲು ತುಂಬಾ ಕಷ್ಟದಲ್ಲಿದ್ದರು. ಹಣ ಸಂಪಾದನೆ ಮಾಡಲು ಅನೇಕ ಕೆಲಸಗಳನ್ನು ಮಾಡಿದ್ದರು. ಸೇಲ್ಸ್ ಮ್ಯಾನ್ ಆಗಿಯೂ ಕೆಲಸ ಮಾಡಿದ್ದರು. ಹೆಚ್ಚು ಹಣ ಸಂಪಾದನೆಗಾಗಿ ವಿಜಯ್ ದುಬೈಗೂ ಹೋಗಿದ್ದರು.

  ಹೆಚ್ಚು ಹಣ ಸಂಪಾದಿಸಬೇಕೆಂದು ವಿದೇಶಕ್ಕೆ ಹೋಗಿದ್ದ ನಟ

  ಹೆಚ್ಚು ಹಣ ಸಂಪಾದಿಸಬೇಕೆಂದು ವಿದೇಶಕ್ಕೆ ಹೋಗಿದ್ದ ನಟ

  ತಂದೆ, ತಾಯಿ ಹಾಗೂ ತನ್ನ ಮೂವರು ಸಹೋದರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ವಿಜಯ್ ಹೆಗಲಮೇಲಿತ್ತು. ಕುಟುಂಬ ನಿರ್ವಹಣೆಗಾಗಿ ವಿಜಯ್ ದುಬೈಗೆ ತೆರಳಿದ್ದರು. ಏಕೆಂದರೆ ಭಾರತದಲ್ಲಿ ಸಂಪಾದನೆ ಮಾಡಿದಕ್ಕಿಂತ ಹೆಚ್ಚು ಪಟ್ಟು ಹಣವನ್ನು ಅಲ್ಲಿ ಗಳಿಸಬಹುದೆಂದು ವಿಜಯ್ ದುಬೈ ಕಡೆ ಮುಖ ಮಾಡಿದ್ದರು.

  ಜೆಸ್ಸಿ ಜೊತೆ ಮದುವೆ

  ಜೆಸ್ಸಿ ಜೊತೆ ಮದುವೆ

  ದುಬೈನಲ್ಲಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದ ಸಮಯದಲ್ಲೇ ವಿಜಯ್ ಸೇತುಪತಿ ಜೆಸ್ಸಿ ಎನ್ನುವ ಯುವತಿ ಜೊತೆ ಪ್ರೀತಿಯಲ್ಲಿ ಬಿದ್ದರು. ಬಳಿಕ ಇಬ್ಬರು 2003ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

  ನಟನಾಗಬೇಕೆಂದು ಭಾರತಕ್ಕೆ ವಾಪಸ್ ಆದ ವಿಜಯ್

  ನಟನಾಗಬೇಕೆಂದು ಭಾರತಕ್ಕೆ ವಾಪಸ್ ಆದ ವಿಜಯ್

  ನಟನಾಗಬೇಕೆನ್ನುವ ಕನಸು ವಿಜಯ್ ಅನ್ನು ದುಬೈಯಿಂದ ಮತ್ತೆ ಭಾರತಕ್ಕೆ ವಾಪಸ್ ಆಗುವಂತೆ ಮಾಡಿತು. ಪ್ರಾರಂಭದಲ್ಲಿ ವಿಜಯ್ ಪೋಷಕ ಪಾತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಕಿರುತರೆಯಲ್ಲೂ ಮಿಂಚಿದ್ದರು. 2010ರಲ್ಲಿ ವಿಜಯ್ ನಾಯಕನಾಗಿ ಎಂಟ್ರಿಕೊಟ್ಟರು. ಬಳಿಕ ವಿಲನ್ ಪಾತ್ರಗಳಲ್ಲಿ ಗುರುತಿಸಿಕೊಂಡರು.

  ವಿಜಯ್‌ಗೆ ಸ್ಟಾರ್ ಡಮ್ ತಂದು ಕೊಟ್ಟ ಸಿನಿಮಾ

  ವಿಜಯ್‌ಗೆ ಸ್ಟಾರ್ ಡಮ್ ತಂದು ಕೊಟ್ಟ ಸಿನಿಮಾ

  ತಮಿಳಿನ ಪಿಜ್ಜಾ ಸಿನಿಮಾ ವಿಜಯ್ ಸೇತುಪತಿ ವೃತ್ತಿ ಜೀವನವನ್ನೇ ಬದಲಾಯಿಸಿತು. ಈ ಸಿನಿಮಾದ ಬಳಿಕ ವಿಜಯ್ ಸ್ಟಾರ್ ಆಗಿ ಹೊರಹೊಮ್ಮಿದರು. ನಂತರ ಬಂದ ಸಿನಿಮಾಗಳು ವಿಜಯ್ ನಟನೆಯ ಸಾಮರ್ಥ್ಯವನ್ನು ತೋರಿಸಿದ ಚಿತ್ರಗಳಾಗಿವೆ. 'ವಿಕ್ರಮ್ ವೇದ' ಸಿನಿಮಾ ವಿಜಯ್ ಸೇತುಪತಿಯನ್ನು 'ಗಾಡ್ ಆಫ್ ಆಕ್ಟಿಂಗ್' ಎಂದು ಕರೆಯುವಂತೆ ಮಾಡಿತು. 'ಸೂಪರ್ ಡಿಲೆಕ್ಸ್' ಸಿನಿಮಾ ವಿಜಯ್ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಕೊರೆದೊಯ್ತು.

  ಇಂದ್ರಜಿತ್ ಮೀಟರ್ ನ ಮೆಚ್ಚಲೇ ಬೇಕು
  ವಿಜಯ್ ಬಳಿ ಇವೆ ಸಾಲು ಸಾಲು ಸಿನಿಮಾಗಳು

  ವಿಜಯ್ ಬಳಿ ಇವೆ ಸಾಲು ಸಾಲು ಸಿನಿಮಾಗಳು

  ತಮಿಳು ಸಿನಿಮಾರಂಗದಲ್ಲಿ ಮಾತ್ರ ಖ್ಯಾತಿಗಳಿಸಿದ್ದ ವಿಜಯ್ ಈ ಸಿನಿಮಾಗಳ ಬಳಿಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದರು. ವಿಜಯ್ ಬಳಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ವಿಕ್ರಮ್, ಲಾಬಮ್, ಗಾಂಧಿ ಟಾಕ್, ತುಘಲಕ್ ದರ್ಬಾರ್ ಸಿನಿಮಾಗಳು ವಿಜಯ್ ಬಳಿ ಇವೆ. ಜೊತೆಗೆ ಹಿಂದಿ, ಮಲಯಾಳಂ ಸಿನಿಮಾಗಳು ವಿಜಯ್ ಕೈಯಲ್ಲಿವೆ.

  English summary
  Actor Vijay Sethupathi once moved to Dubai to earn money and take care of his three sisters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X