ನನ್ನಿಂದ ಸಾಧ್ಯವಿಲ್ಲ: ನಟಿ ತ್ರಿಶಾಗೆ ಲಿಪ್ ಲಾಕ್ ಮಾಡಲು ಒಪ್ಪದ ನಟ ವಿಜಯ್ ಸೇತುಪತಿ

By ಫಿಲ್ಮಿಬೀಟ್ ಡೆಸ್ಕ್

ಲಿಪ್ ಲಾಕ್ , ಕಿಸ್ಸಿಂಗ್ ದೃಶ್ಯಗಳು ಸಿನಿಮಾದಲ್ಲಿ ಕಾಮನ್ ಎನ್ನುವಂತೆ ಆಗಿವೆ. ಬಾಲಿವುಡ್‌ನಲ್ಲಿದ್ದ ಈ 'ಮಾಮೂಲಿ ಸರಕು' ದಕ್ಷಿಣ ಭಾರತದ ಸಿನಿಮಾಗಳಿಗೂ ಬಂದು ತುಂಬ ವರ್ಷಗಳಾಗಿವೆ. ಸಿನಿಮಾದಲ್ಲಿ ಇಂತಹ ದೃಶ್ಯವೊಂದಿದ್ದರೇ ಸಿನಿಮಾ ಹಿಟ್ ಆಗುತ್ತದೆ ಎಂಬ ನಂಬಿಕೆಯು ಇದಕ್ಕೆ ಕಾರಣ.

ಆದರೆ, ದಕ್ಷಿಣ ಭಾರತದ ಅನೇಕ ಸೂಪರ್ ಸ್ಟಾರ್ ನಟರು ನಟಿಯರ ಜೊತೆಗೆ ಲಿಪ್ ಲಾಕ್ ಮಾಡುವ ದೃಶ್ಯಗಳಿಂದ ಹಿಂದೆ ಸರಿಯುತ್ತಾರೆ. ತಮ್ಮ ಸಿನಿಮಾಗಳಲ್ಲಿ ಅಥವಾ ತಾವು ನಟಿಸುವ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್‌ಗಳಿದ್ದರೆ ಅದಕ್ಕೆ ಮೊದಲೆ ತಿಳಿಸಿ ನಾನು ಇದನ್ನು ಮಾಡುವುದಿಲ್ಲ ಎಂದು ತಿಳಿಸುತ್ತಾರೆ. ಹೀಗೆಯೇ ಸ್ಟಾರ್ ನಟರೊಬ್ಬರು ನಟಿಯ ಜೊತೆಗೆ ಲಿಪ್ ಲಾಕ್ ಮಾಡಲು ಒಪ್ಪದಿದ್ದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ನೆನಪಿರಲಿ..ಇಂತಹ ದೃಶ್ಯಗಳಿಲ್ಲದಿದ್ದರೂ ಆ ಸಿನಿಮಾ ಸೂಪರ್ ಹಿಟ್ ಆಗಿದೆ.

Vijay Sethupathi Refused to do Lip Lock Scene With Actress Trisha In 96 movie

ತ್ರಿಶಾ ಜೊತೆಗೆ ಲಿಪ್ ಲಾಕ್ ಮಾಡಲ್ಲ!

ತಮಿಳಿನ ಸೂಪರ್ ಹಿಟ್ ಸಿನಿಮಾ 96 ಕಾಡುವ ಚಿತ್ರಗಳಲ್ಲಿ ಒಂದು. ಎವರ್‌ಗ್ರೀನ್ ಬ್ಯೂಟಿ ತ್ರಿಶಾ ಮತ್ತು ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಅಭಿನಯ ಈ ಸಿನಿಮಾಕ್ಕೆ ಮತ್ತಷ್ಉಟ ಮೆರಗು ತಂದಿತ್ತು. ಒಂದೊಂದು ದೃಶ್ಯಗಳು ಮನಸ್ಸಿನಾಳಕ್ಕೆ ಇಳಿಯುತ್ತವೆ. ಇಬ್ಬರ ಕಣ್ಣ ಭಾಷೆಗಳೆ ಸಾಕು ಸಿನಿಮಾ ಗೆಲ್ಲಿಸಲು ಎನ್ನಿಸುತ್ತದೆ. ಅದರಲ್ಲೂ ಕೊನೆಯ ಏರ್‌ಪೋರ್ಟ್ ದೃಶ್ಯ ಸಿನಿಮಾದ ಪ್ಲಸ್ ಪಾಯಿಂಟ್. ಆದರೆ, ಅಲ್ಲೊಂದು ಲಿಪ್ ಲಾಕ್ ದೃಶ್ಯವಿತ್ತಂತೆ!

ಹೌದು....ಸಿನಿಮಾದ ಜೀವನಾಳವಾಗಿರುವ ವಿದಾಯದ ದೃಶ್ಯದಲ್ಲಿ ಒಂದು ಕಿಸ್ಸಿಂಗ್ ಸೀನ್ ಇತ್ತಂತೆ. ನಿರ್ದೇಶಕ ಪ್ರೇಮ್‌ಕುಮಾರ್ ಅದನ್ನು ಬರೆದಿದ್ದರಂತೆ. ಆದರೆ ಆ ಸೀನ್ ನಾವ್ಯಾರೂ ನೋಡಿಲ್ಲ. ಯಾಕೆ ಗೊತ್ತಾ....ಅದು ಶೂಟ್ ಆಗಿಯೇ ಇಲ್ಲ. ಅದಕ್ಕೆ ಕಾರಣ ನಟ ವಿಜಯ್ ಸೇತುಪತಿ.

Vijay Sethupathi Refused to do Lip Lock Scene With Actress Trisha In 96 movie

ಹೌದು... ಸಿನಿಮಾದ ನಾಯಕ ನಟ ವಿಜಯ್ ಸೇತುಪತಿ ನೋ ಲಿಪ್‌ ಲಾಕ್ ಎಂದಿದ್ದರಂತೆ. ತ್ರಿಶಾ ಜೊತೆಗೆ ಇಂತಹ ಸೀನ್ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ನಿರ್ದೇಶಕ ಪ್ರೇಮ್‌ಕುಮಾರ್ ಗೆ ತಿಳಿಸಿದ್ದರಂತೆ. ಆದರೆ ನೀವು ಲಿಪ್ ಲಾಕ್ ಸೀನ್ ಇದೆ ಎಂದಿದ್ದರೇ ನಾನು ಬರುತ್ತಿರಲಿಲ್ಲ ಎಂದು ವಿಜಯ್ ಅಲ್ಲಿಂದ ಓಡಿ ಹೋಗಿದ್ದರಂತೆ!. ಎಷ್ಟೇ ಪ್ರಯತ್ನಿಸಿದರೂ ಲಿಪ್ ಲಾಕ್ ಸೀನ್‌ಗೆ ಒಪ್ಪದ ಕಾರಣ ಆ ದೃಶ್ಯವನ್ನು ಶೂಟ್ ಮಾಡಿಲ್ಲ ಎಂಬ ರಸವತ್ತಾದ ಮಾಹಿತಿ ಸಿಕ್ಕಿದೆ.

96 ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ವಿಮಾನ ನಿಲ್ದಾಣದಲ್ಲಿ ತ್ರಿಶಾ ಮತ್ತು ವಿಜಯ್ ಸೇತುಪತಿ ಪರಸ್ಪರ ವಿದಾಯ ಹೇಳುವ ಕ್ಷಣಗಳಿವೆ. ಇಬ್ಬರು ಕಣ್ಣು ತುಂಬಿಕೊಂಡ ಜಾನು ಮತ್ತು ರಾಮ್ ಭಾವುಕರಾಗುವ ಸನ್ನಿವೇಶವಿದೆ. ಈ ದೃಶ್ಯದಲ್ಲೇ ಲಿಪ್‌ ಲಾಕ್ ಸೀನ್ ಇಟ್ಟಿದ್ದರಂತೆ.

ನಟಿ ತ್ರಿಶಾ

ಸುಮಾರು 24 ವರ್ಷಗಳ ಹಿಂದೆ ತ್ರಿಶಾ ಅವರು ಸೂಪರ್ ಸ್ಟಾರ್‌ಗಳಾದ ಪ್ರಶಾಂತ್ ಮತ್ತು ಸಿಮ್ರಾನ್ ಅಭಿನಯದ 'ಜೋಡಿ' ಚಿತ್ರದಲ್ಲಿ ಸಣ್ಣ ಪಾತ್ರ ಮಾಡುತ್ತಾ ತಮಿಳು ಸಿನಿಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ನಟಿ ತ್ರಿಶಾ ಅತ್ಯುತ್ತಮ ನಟಿಯರಲ್ಲಿ ಒಬ್ಬರು.

ನಸೆಲ್ಲಂ, ಮೌನಂ ಪಸಿತೆ, ಸಾಮಿ, ಲೇಸ ಲೇಸ, ವಿನ್ನೈತಾಂಡಿ ವರುವಾಯಾ ಸೇರಿ ಹಲವು ಸಿನಿಮಾಗಳು ಸೂಪರ್ ಹಿಟ್ಟ ಆಗಿವೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ದಳಪತಿ ವಿಜಯ್, ಅಜಿತ್, ವಿಕ್ರಮ್, ಧನುಷ್, ಸಿದ್ಧಾರ್ಥ್, ಪ್ರಭಾಸ್ ಮತ್ತು ಸೂರ್ಯ ಸೇರಿದಂತೆ ಎಲ್ಲಾ ನಾಯಕ ನಟರ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. 24 ವರ್ಷಗಳಿಂದ ಟಾಪ್ ನಟಿಯಾಗಿ ಒಂದು ವರ್ಷವೂ ಗ್ಯಾಪ್ ಬಿಡದೆ ಪಯಣ ಬೆಳೆಸಿದ್ದಾರೆ.

ನಟ ವಿಜಯ್ ಸೇತುಪತಿ ತಮಿಳು ನಾಯಕ ನಟನಾಗಿಯಲ್ಲದೇ, ಖಳನಾಯಕರಾಗಿಯೂ ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿ ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಎದುರು ಖಳನಟ 'ಕಾಳಿ'ಯಾಗಿ ಮಿಂಚಿದ್ದಾರೆ.

More from Filmibeat

English summary
Vijay Sethupathi refused to do lip lock scene with Trisha In 96 movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X