twitter
    For Quick Alerts
    ALLOW NOTIFICATIONS  
    For Daily Alerts

    ಹಿಂದೊಮ್ಮೆ ಜ್ಯೂನಿಯರ್ ಆರ್ಟಿಸ್ಟ್ ಆಗೂ ಆಯ್ಕೆ ಆಗದವ ಇಂದು ದೊಡ್ಡ ಸ್ಟಾರ್

    |

    ದಕ್ಷಿಣ ಭಾರತದಲ್ಲಿ ಬ್ಯುಸಿಯೆಸ್ಟ್ ನಟ ಯಾರು ಎಂಬ ಪ್ರಶ್ನೆಗೆ ಉತ್ತರ ಸುಲಭ, ಅದೇ ವಿಜಯ್ ಸೇತುಪತಿ.

    Recommended Video

    ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು TVT ರೇಟಿಂಗ್ ಪಡೆದ ಟಾಪ್ 10 ಚಿತ್ರಗಳು | FILMIBEAT KANNADA

    ಹೌದು, ವಿಜಯ್ ಸೇತುಪತಿ ದಕ್ಷಿಣ ಭಾರತ ಚಿತ್ರರಂಗಲ್ಲಿಯೇ ಬಹಳ ಬ್ಯುಸಿಯಾದ ನಟ. ಹಲವು ಭಾಷೆಯ, ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ದಿನವೊಂದಕ್ಕೆ ಮೂರು-ನಾಲ್ಕು ಸಿನಿಮಾದಲ್ಲೂ ವಿಜಯ್ ನಟಿಸಿರುವುದುಂಟು.

    ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ: ನಟ ವಿಜಯ್ ಸೇತುಪತಿ ವಿರುದ್ಧ ದೂರು ದಾಖಲುಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ: ನಟ ವಿಜಯ್ ಸೇತುಪತಿ ವಿರುದ್ಧ ದೂರು ದಾಖಲು

    ಇಷ್ಟೇಲ್ಲಾ ಬೇಡಿಕೆಯಲ್ಲಿರುವ ನಟ ವಿಜಯ್ ಸೇತುಪತಿ ಹಿಂದೊಮ್ಮೆ ಜ್ಯೂನಿಯರ್ ಆರ್ಟಿಸ್ಟ್ ಪಾತ್ರಕ್ಕೂ ಆಯ್ಕೆ ಆಗಿರಲಿಲ್ಲ ಎಂದರೆ ನೀವು ನಂಬಲೇ ಬೇಕು. ವಿಜಯ್ ಸೇತುಪತಿ ಬದುಕು ಸಹ ಸಿನಿಮಾದ ರೀತಿಯಲ್ಲಿಯೇ ಹಲವು ಏರಿಳಿತಗಳಿಂದ ಕೂಡಿದ್ದು.

    'ಪುಷ್ಪ' ಸಿನಿಮಾಗೆ ವಿಲನ್ ಆಗಲು ಇಷ್ಟೊಂದು ಸಂಭಾವನೆ ಕೇಳಿದ್ರಾ ವಿಜಯ್ ಸೇತುಪತಿ?'ಪುಷ್ಪ' ಸಿನಿಮಾಗೆ ವಿಲನ್ ಆಗಲು ಇಷ್ಟೊಂದು ಸಂಭಾವನೆ ಕೇಳಿದ್ರಾ ವಿಜಯ್ ಸೇತುಪತಿ?

    ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸುವ ಆಸೆಯಿಂದ ಕಮಲ್ ಹಾಸನ್ ನಟನೆಯ 'ನಮ್ಮವರ್' ಸಿನಿಮಾದ ಚಿತ್ರದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಪಾತ್ರದ ಆಡಿಶನ್ ಗೆ ಹೋಗಿದ್ದರು. ಆದರೆ ಅಲ್ಲಿ ಅವರು ಆಯ್ಕೆ ಆಗಿರಲಿಲ್ಲ, ಅಂದವಿಲ್ಲ, ಕುಳ್ಳಗಿದ್ದೀಯೆಂದು ಹೇಳಿ ವಿಜಯ್ ಅನ್ನು ಹೊರದಬ್ಬಿದ್ದರು. ಆಗಿನ್ನೂ ಅವರಿಗೆ 16 ವರ್ಷ ವಯಸ್ಸು.

    ಸಿಮೆಂಟ್ ಅಂಗಡಿಯಲ್ಲಿ ಕೆಲಸ

    ಸಿಮೆಂಟ್ ಅಂಗಡಿಯಲ್ಲಿ ಕೆಲಸ

    ಸಿಮೆಂಟ್ ಅಂಗಡಿಯಲ್ಲಿ ಕೆಲಸ, ನಂತರ ಜವಳಿ ಅಂಗಡಿಯಲ್ಲಿ ಲೆಕ್ಕಿಗ, ಟೆಲಿಫೋನ್ ಬೂತ್ ನೋಡಿಕೊಳ್ಳುವವ ಹೀಗೆ ಬದುಕು ದೂಡಲು ಏನೇನೋ ಕೆಲಸ ಮಾಡಿದರು. ಕೊನೆಗೆ 12,000 ಸಂಬಳಕ್ಕೆ ದುಬೈಗೂ ಹೋದರು. ಆದರೆ ನಟನಾಗುವ ಆಸೆ ಅವರನ್ನು ಬಿಟ್ಟಿರಲಿಲ್ಲ.

    ದುಬೈನಿಂದ ಚೆನ್ನೈಗೆ ಆಗಮಿಸಿದ ವಿಜಯ್

    ದುಬೈನಿಂದ ಚೆನ್ನೈಗೆ ಆಗಮಿಸಿದ ವಿಜಯ್

    ದುಬೈನಿಂದ ಚೆನ್ನೈಗೆ ಬಂದು ನಟನಾ ತಂಡದಲ್ಲಿ ಅವಕಾಶ ಕೇಳಿದರು ಆದರೆ ಸಿಗಲಿಲ್ಲ, ಆದರೆ ಅದೇ ತಂಡದ ಲೆಕ್ಕಿಗನಾಗಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಯೇ ಕೆಲವು ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿದರು. ಈಗಿನ ಸ್ಟಾರ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ ಕೆಲವು ಕಿರು ಚಿತ್ರಗಳಲ್ಲಿ ನಟಿಸಿದರು.

    ನಟ ವಿಜಯ್ ಮಗ ಸಿನಿಮಾ ಪ್ರವೇಶಿಸಲು ಸಜ್ಜು, ಮೊದಲ ಸಿನಿಮಾ ರೀಮೇಕ್ನಟ ವಿಜಯ್ ಮಗ ಸಿನಿಮಾ ಪ್ರವೇಶಿಸಲು ಸಜ್ಜು, ಮೊದಲ ಸಿನಿಮಾ ರೀಮೇಕ್

    ಪಿಜ್ಜಾ ಸಿನಿಮಾ ಹಿಟ್ ಆಯಿತು

    ಪಿಜ್ಜಾ ಸಿನಿಮಾ ಹಿಟ್ ಆಯಿತು

    ವಿಜಯ್ ನಟನೆಯ ಬಗ್ಗೆ ಅಪಾರ ನಂಬಿಕೆಯಿದ್ದ ಕಾರ್ತಿಕ್ ಸುಬ್ಬರಾಜ್ ವಿಜಯ್ ಸೇತುಪತಿಯನ್ನು ತಮ್ಮ ಮೊದಲ ಸಿನಿಮಾ 'ಪಿಜ್ಜಾ' ಗೆ ನಾಯಕನನ್ನಾಗಿ ಮಾಡಿದರು. ಅದು ಬಿಡುಗಡೆ ಆಗಲು ಎರಡು ವರ್ಷವಾಯಿತು. ಆಗ ವಿಜಯ್ ವಯಸ್ಸು 34.

    ಹಲವು ಸಣ್ಣ-ಪುಟ್ಟ ಪಾತ್ರಗಳು ನಿರ್ವಹಿಸಿದ್ದರು

    ಹಲವು ಸಣ್ಣ-ಪುಟ್ಟ ಪಾತ್ರಗಳು ನಿರ್ವಹಿಸಿದ್ದರು

    ಅದಕ್ಕೂ ಮುನ್ನಾ ಹಲವು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ವಿಜಯ್ ಸೇತುಪತಿ ಮಾಡಿದ್ದರು. ಪಿಜ್ಜಾ ಹಿಟ್ ಆದ ಬಳಿಕ ಬಂದ 'ನಡುವುಲ ಕೊಂಜಂ ಪಕ್ಕತ ಕಾಣುಂ' ಸಿನಿಮಾ ಸಹ ಹಿಟ್ ಆಯಿತು ಇದು ಕನ್ನಡದಲ್ಲಿ ಕ್ವಾಟ್ಲೆ ಸತೀಶ ಹೆಸರಲ್ಲಿ ರೀಮೇಕ್ ಆಯಿತು. ನಂತರ ಬಂದ ಸುದು ಕುವಂ ವಿಜಯ್ ಸೇತುಪತಿ ಗೆ ಇನ್ನಷ್ಟು ಅವಕಾಶಗಳನ್ನು ತಂದುಕೊಟ್ಟಿತು.

    ಹಿಟ್ ಆದ ಸದುಕುವಂ ಸಿನಿಮಾ

    ಹಿಟ್ ಆದ ಸದುಕುವಂ ಸಿನಿಮಾ

    'ಸದುಕುವಂ' ಗೆಲುವಿನ ನಂತರ ಸಾಕಷ್ಟು ಅವಕಾಶಗಳು ವಿಜಯ್ ಪಾಲಿಗೆ ಒದಗಿದವು. ಆದರೆ 2017 ರಲ್ಲಿ ಬಂದ 'ವಿಕ್ರಂ ವೇದ' ವಿಜಯ್ ವೃತ್ತಿ ಜೀವನದ ಅತಿ ದೊಡ್ಡ ಹಿಟ್ ಎನಿಸಿಕೊಂಡಿತು. ಆ ವರೆಗೂ ಕೇವಲ ತಮಿಳಿಗಷ್ಟೆ ಸೀಮಿತವಾಗಿದ್ದ ವಿಜಯ್ ಗೆ ಬೇರೆ ಭಾಷೆಗಳಿಂದಲೂ ಅವಕಾಶ ಒದಗಿಬರಲು ಪ್ರಾರಂಭವಾಯಿತು. ಅಲ್ಲಿಂದ ವಿಜಯ್ ಸೇತುಪತಿ ಹಿಂತುರಿಗಿ ನೋಡಿದ್ದೇ ಇಲ್ಲ.

    English summary
    Famous south Indian actor Vijay Sethupathi rejected for junior artist role once.
    Wednesday, May 27, 2020, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X