ಹಿಂದಿ ಚಿತ್ರರಂಗಕ್ಕೆ ಹೋಗಲು ವಿಜಯ್ ಸೇತುಪತಿಗೆ ಅಂಜಿಕೆ, ಕಾರಣ ಇಲ್ಲಿದೆ

ತಮಿಳು ನಟ ವಿಜಯ್ ಸೇತುಪತಿ ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಹವಾ ಸೃಷ್ಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಅಷ್ಟೆ ಯಾಕೆ ಕರ್ನಾಟಕದಲ್ಲೂ ಸೇತುಪತಿ ಕ್ರೇಜ್ ಇದೆ.

ಸೌತ್ನಲ್ಲಿ ಸದ್ದು ಮಾಡುವ ನಟರಿಗೆ ಬಾಲಿವುಡ್ ಆಫರ್ ಬರುವುದು ಸಹಜ. ವಿಜಯ್ ಸೇತುಪತಿಗೂ ಹಿಂದಿ ಇಂಡಸ್ಟ್ರಿಯಿಂದ ಹಲವು ಸಿನಿಮಾ ಆಫರ್ ಬಂದಿದೆ. ಆದರೆ, ಯಾವ ಚಿತ್ರಕ್ಕೂ ಸಹಿ ಹಾಕಿರಲಿಲ್ಲ.

ಈ ನಡುವೆ ಬಾಲಿವುಡ್ ಸಿನಿಮಾವೊಂದರಲ್ಲಿ ನಟಿಸಲು ಮುಂದಾಗಿದ್ದಾರೆ. ಆದರೂ, ಹಿಂದಿ ಸಿನಿಮಾ ಮಾಡಲು ವಿಜಯ್ ಸೇತುಪತಿಗೆ ಈ ಒಂದು ವಿಚಾರದಲ್ಲಿ ಆತಂಕವಿದೆಯಂತೆ. ಏನದು? ಮುಂದೆ ಓದಿ....

ಭಾಷೆ ಸಮಸ್ಯೆಯಂತೆ

ಭಾಷೆ ಸಮಸ್ಯೆಯಂತೆ

ಮೂಲತಃ ತಮಿಳು ನಟನಾಗಿರುವ ವಿಜಯ್ ಸೇತುಪತಿ ಅವರಿಗೆ, ಬಾಲಿವುಡ್ ಗೆ ಹೋದರೆ, ಅಲ್ಲಿ ಹಿಂದಿ ಭಾಷೆ ಮಾತನಾಡಬೇಕು. ಹಿಂದಿ ಬಗ್ಗೆ ಜ್ಞಾನ ಹೊಂದಿರಬೇಕು. ನಟನೆಗೆ ಹಿಂದಿ ಗೊತ್ತಿದ್ದರೇ ಸಹಕಾರಿಯಾಗುತ್ತೆ. ಭಾಷೆಯ ಅರಿವು ಇಲ್ಲ ಅಂದ್ರೆ ಅದು ಸಮಸ್ಯೆಯಾಗುತ್ತೆ. ಇದು ಪ್ರಮುಖವಾದದು ಎಂದು ಸೇತುಪತಿ ಹೇಳಿದ್ದಾರೆ. ಬಳಿಕ, ಮನಸ್ಸು ಮಾಡಿದ್ರೆ ಭಾಷೆಯನ್ನು ಕಲಿಯಬಹುದು ಆದರೆ ಅದನ್ನೂ ಮೀರಿ ಮತ್ತಷ್ಟು ಅಂಶಗಳಿಗೆ ಎಂದು ತಮಗಿರುವ ಆತಂಕ ಬಗ್ಗೆ ಮಾತನಾಡಿದ್ದಾರೆ.

ಸಂಸ್ಕೃತಿ ಬೇರೆ ಬೇರೆ

ಸಂಸ್ಕೃತಿ ಬೇರೆ ಬೇರೆ

''ತಮಿಳು, ತೆಲುಗು ಹಾಗೂ ಮಲಯಾಳಂ ಸಂಸ್ಕೃತಿ ಬಹುತೇಕ ಒಂದೇ ಆಗಿರುತ್ತೆ. ಒಂದಕ್ಕೊಂದು ಹೋಲಿಕೆ ಕೂಡ ಇರುತ್ತೆ. ಆದರೆ, ಹಿಂದಿ ಇಂಡಸ್ಟ್ರಿಗೆ ಬಂದರೆ ಸಂಸ್ಕೃತಿಯಲ್ಲಿ ಬಹುದೊಡ್ಡ ವ್ಯತ್ಯಾಸ ಕಾಣುತ್ತೆ. ಅಲ್ಲಿನ ಸಂಸ್ಕೃತಿಗೆ ತಕ್ಕ ಹಾಗೆ ಬದಲಾಗಬೇಕು. ಭಾಷೆ, ಬಟ್ಟೆ, ಅಭಿನಯ ಎಲ್ಲವೂ ಬೇಕು. ಅದು ನಮ್ಮಲ್ಲಿ ಇಲ್ಲ'' ಎಂದು ಹೇಳಿಕೊಂಡಿದ್ದಾರೆ.

ಭಾಷೆಗಿಂತ ಸಂಸ್ಕೃತಿ ಮುಖ್ಯ

ಭಾಷೆಗಿಂತ ಸಂಸ್ಕೃತಿ ಮುಖ್ಯ

''ಹಿಂದಿ ಪ್ರೇಕ್ಷಕರಿಗೆ ಹತ್ತಿರವಾಗಲು ಭಾಷೆ ಕಲಿಯಬಹುದು. ಭಾಷೆಗಿಂತ ಸಂಸ್ಕೃತಿ ಅವರನ್ನು ತಲುಪಲು ಸಂಸ್ಕೃತಿ ಮುಖ್ಯವಾಗುತ್ತೆ. ನಮ್ಮ ವ್ಯಕ್ತಿತ್ವ, ಪ್ರೀತಿ, ನಡವಳಿಕೆ ಅವರಿಗೆ ನಿಜ ಎನಿಸಬೇಕು. ಆಗ ಮಾತ್ರ ಅವರು ನಮ್ಮನ್ನು ನಂಬುತ್ತಾರೆ. ನಮ್ಮ ವ್ಯಕ್ತಿತ್ವದಲ್ಲಿ ಪ್ರಮಾಣಿಕತೆ ಇಲ್ಲದೇ ಹೋದರೆ ಅದು ಸುಳ್ಳಾಗುತ್ತೆ. ಹಾಗಾಗಿ, ಸಂಸ್ಕೃತಿ ಬಗ್ಗೆ ಕಾಳಜಿ ಹೊಂದಿರಬೇಕು'' ಎಂದು ವಿಜಯ್ ಸೇತುಪತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೇತುಪತಿಗೆ ಬೆಂಬಲ ನೀಡಿದ ದೇವರಕೊಂಡ

ಸೇತುಪತಿಗೆ ಬೆಂಬಲ ನೀಡಿದ ದೇವರಕೊಂಡ

ಈ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ ಕೂಡ ಸೇತುಪತಿ ಮಾತನಾಡಿದ್ದಕ್ಕೆ ಬೆಂಬಲ ನೀಡಿದರು. ಸೇತುಪತಿ ಅವರು ಹೇಳಿದಂತೆ ಭಾಷೆ ಮತ್ತು ಸಂಸ್ಕೃತಿ ಎರಡೂ ಮುಖ್ಯ. ವಿಜಯ್ ದೇವರಕೊಂಡ ಅವರಿಗೂ ಕೂಡ ಹಿಂದಿ ಸಿನಿಮಾ ಆಫರ್ ಬಂದಿದೆ. ಆದರೆ, ಯಾವುದಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

ಅಮೀರ್ ಚಿತ್ರದಲ್ಲಿ ವಿಜಯ್!

ಅಮೀರ್ ಚಿತ್ರದಲ್ಲಿ ವಿಜಯ್!

ಅಂತಿಮವಾಗಿ ವಿಜಯ್ ಸೇತುಪತಿ ಬಾಲಿವುಡ್ ಪ್ರವೇಶ ಮಾಡಿದ್ದಾರೆ. ಅಮೀರ್ ಖಾನ್ ನಟಿಸುತ್ತಿರುವ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ವಿಜಯ್ ಸೇತುಪತಿ ಸ್ನೇಹಿತನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Tamil Actor Vijay Sethupathi spoke about bollywood industry. He revealed what they have fear about hindi industry?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X