ಚಿತ್ರೀಕರಣ ಮುಗಿಯುವ ಮುನ್ನವೇ ನೆಟ್‌ಫ್ಲಿಕ್ಸ್‌ಗೆ ಸೇಲ್ ಆದ ವಿಜಯ್ ಸೇತುಪತಿ ಸಿನಿಮಾ
ನಟ ವಿಜಯ್ ಸೇತುಪತಿ ಹಾಗೂ ಶ್ರುತಿ ಹಾಸನ್ ನಟಿಸುತ್ತಿರುವ ಲಾಭಂ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಸುದ್ದಿಯಲ್ಲಿತ್ತು.
ಚಿತ್ರೀಕರಣ ಸೆಟ್‌ನಲ್ಲಿ ನಟ ವಿಜಯ್ ಸೇತುಪತಿ ಸೇರಿದಂತೆ ಇತರರು ಕೊರೊನಾ ನಿಯಮವನ್ನು ಪಾಲಿಸಲಾಗುತ್ತಿಲ್ಲ ಎಂಬ ಕಾರಣಕ್ಕೆ ನಟಿ ಶ್ರುತಿ ಹಾಸನ್ ಚಿತ್ರೀಕರಣ ಬಿಟ್ಟು ಹೊರಟುಬಿಟ್ಟಿದ್ದರು. ನಂತರ ಜನರನ್ನು ನಿಯಂತ್ರಿಸಲು ಪೊಲೀಸ್ ಭದ್ರತೆ ಪಡೆದು ಚಿತ್ರೀಕರಣ ಮುಂದುವರೆಸಲಾಯಿತು.
ಇದೀಗ ಲಾಭಂ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್ ಸಿನಿಮಾವನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ.

ನಟ ವಿಜಯ್ ಸೇತುಪತಿ ಟ್ವೀಟ್
ನಟ ವಿಜಯ್ ಸೇತುಪತಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಲಾಭಂ ಸಿನಿಮಾದ ಸ್ಟ್ರೀಮಿಂಗ್ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ ಎಂದಿದ್ದಾರೆ. ಆದರೆ ಯಾವ ಮೊತ್ತಕ್ಕೆ ಹಕ್ಕು ಮಾರಲಾಗಿದೆ ಎಂಬುದರ ಬಗ್ಗೆ ವಿಜಯ್ ಸೇತುಪತಿ ಮಾಹಿತಿ ನೀಡಿಲ್ಲ.

ಕೃಷ್ಣಗಿರಿಯಲ್ಲಿ ಚಿತ್ರೀಕರಣ
ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಕೃಷ್ಣಗಿರಿಯಲ್ಲಿ ನಡೆದಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹಂತ ಬಾಕಿ ಈ ನಡುವೆಯೇ ನೆಟ್‌ಫ್ಲಿಕ್ಸ್ ಲಾಭಂ ಅನ್ನು ಕೊಂಡುಕೊಂಡಿದೆ. ದೊಡ್ಡ ಮೊತ್ತಕ್ಕೇ ಸಿನಿಮಾ ಸೇಲ್ ಆಗಿದೆ ಎನ್ನಲಾಗುತ್ತಿದೆ.

ಸೂರ್ಯಾ ಗೆ ಎದುರಾಗಿತ್ತು ವಿರೋಧ
ತಮಿಳುನಾಡಿನ ಸಿನಿಮಾಗಳು ನೇರವಾಗಿ ಒಟಿಟಿಗೆ ಹೋಗುವುದು ತುಸು ಅಪರೂಪ. ನಟ ಸೂರ್ಯ ತಾವು ನಿರ್ಮಿಸಿದ್ದ 'ಪೊನ್ಮಗಳ್ ವಂದಾಳ್' ಸಿನಿಮಾವನ್ನು ಒಟಿಟಿಗೆ ನೀಡಿದ್ದಕ್ಕೆ ಚಿತ್ರಮಂದಿರ ಮಾಲೀಕರ ಸಂಘದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ನಂತರ ಅವರದ್ದೇ ಸೂರರೈ ಪೊಟ್ರು ಸಿನಿಮಾವನ್ನೂ ಸಹ ಒಟಿಟಿಗೆ ನೀಡಿದ್ದರು ಸೂರ್ಯಾ.
Recommended Video

ಒಟಿಟಿ ಗೆ ನೀಡಿದ್ದಕ್ಕೆ ವಿರೋಧ ಎದುರಾಗಲಿದೆಯೇ?
ಇದೀಗ ವಿಜಯ್ ಸೇತುಪತಿ ಸಹ ಸಿನಿಮಾವನ್ನು ಒಟಿಟಿಗೆ ನೀಡಿದ್ದು, ಚಿತ್ರಮಂದಿರ ಮಾಲೀಕರ ಸಂಘ, ಇದಕ್ಕೆ ಹೇಗೆ ಪ್ರತಿಕ್ರಯಿಸುತ್ತದೆ ನೋಡಬೇಕಿದೆ. ತಮಿಳಿನ ಮತ್ತೊಂದು ಸಿನಿಮಾ 'ಪಾವಂ ಕದೈಗಳ್' ಸಿನಿಮಾ ಸಹ ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











