ನಟ ವಿಜಯ್ ಸೇತುಪತಿ 'ತುಘಲಕ್ ದರ್ಬಾರ್' ಹೇಗಿದೆ ನೋಡಿ

ಕಾಲಿವುಡ್ ನ ಖ್ಯಾತ ನಟ ವಿಜಯ್ ಸೇತುಪತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ವಿಜಯ್ ಸೇತುಪತಿ ಈಗ ತುಘಲಕ್ ದರ್ಬಾರ್ ಪ್ರಾರಂಭಿಸಿದ್ದಾರೆ. ಸೇತುಪತಿ ತುಘಲಕ್ ದರ್ಬಾರ್ ಮಾಡ್ತಾರಾ ಅಂತ ಅಚ್ಚರಿ ಪಡಬೇಡಿ. ಸೇತುಪತಿ ತುಘಲಕ್ ದರ್ಬಾರ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇತ್ತೀಚಿಗೆ ತುಘಲಕ್ ದರ್ಬಾರ್ ಸಿನಿಮಾದ ಫಸ್ಟ್ ಲುಕ್ ಆಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿಂಹಾಸನದ ಮೇಲೆ ಶಾಂತರೀತಿಯಲ್ಲಿ ಕುಳಿತಿರುವ ವಿಜಯ್ ಸೇತುಪತಿ ಮತ್ತು ಮುಂಬಾಗದಲ್ಲಿರುವ ಅವರ ಪ್ರತಿಬಿಂಬ ಕುತಂತ್ರದ ವ್ಯಕ್ತಿತ್ವವನ್ನು ತೋರುತ್ತದೆ.

ತುಘಲಕ್ ದರ್ಬಾರ್ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾವಾಗಿದೆ. ವಿಜಯ್ ಸೇತುಪತಿ ಪಾತ್ರ ಇಲ್ಲಿ ಗಮನ ಸೆಳೆಯುತ್ತಿದೆ. ಎರಡು ಶೇಡ್ ನಲ್ಲಿ ಸೇತುಪತಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಫಸ್ಟ್ ಲುಕ್ ಸೇತುಪತಿ ಪಾತ್ರದ ಬಗ್ಗೆ ಸುಳಿವು ನೀಡುತ್ತಿದೆ.

Vijay Sethupathi Starrer Tughlaq Durbar First Look Release

ಈಗಾಗಲೆ 50ರಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯ ಫಸ್ಟ್ ಲುಕ್ ರಿಲೀಸ್ ಮಾಡಿ ಕುತೂಹ ಹೆಚ್ಚಿಸಿದ್ದಾರೆ. ನಿರ್ದೇಶಕ ದೆಲಿಪ್ರಸಾದ್ ದೀನದಯಾಲ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಪೋಸ್ಟರ್ ಶೇರ್ ಮಾಡಿ "ವರ್ಷಗಳ ಕನಸು ಮತ್ತು ಕೆಲಸ. ಅಂತಿಮವಾಗಿ ಹೇಳುತ್ತೇನೆ ನನ್ನ ಮೊದಲ ನಿರ್ದೇಶನದ ಮೊದಲ ಲಕ್ ಅನ್ನು ಬಿಡುಗಡೆಮಾಡಿದ್ದೇನೆ. ಫಸ್ಟ್ ಲುಕ್ ಅನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ತುಂಬಾ ರೋಮಾಂಚನವಾಗುತ್ತಿದೆ. ಎಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕಿಯಾಗಿ ಅದಿತಿ ರಾವ್ ಹೈದರಿ, ಮಂಜಿಮಾ ಮೋಹನ್ ನಟಿಸುತ್ತಿದ್ದಾರೆ. ಜೊತೆಗೆ ಚಿತ್ರದಲ್ಲಿ ಪಾರ್ಥಿಬನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ತುಘಲಕ್ ದರ್ಬಾರ್ ಕೂಡ ಒಂದು. ವಿಜಯ್ ಸೇತುಪತಿ ಬಳಿ ಒಂದು ಡಜನ್ ಗೂ ಹೆಚ್ಚು ಸಿನಿಮಾಗಳಿವೆ. ಸದ್ಯ ವಿಜಯ್ ಮಾಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

More from Filmibeat

English summary
Tamil Actor Vijay Sethupathi starrer Tughlaq Durbar first look release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X