For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾದ ಬಗ್ಗೆ ವಿಜಯ್ ಸೇತುಪತಿ ಪ್ರತಿಕ್ರಿಯಿಸಿದ್ದು ಹೀಗೆ

  |

  ನಟ ವಿಜಯ್ ಸೇತುಪತಿಗೆ ಮತ್ತೊಂದು ಪ್ರಶಸ್ತಿ ಅರಸಿ ಬಂದಿದೆ. 'ಅತ್ಯುತ್ತಮ ಪೋಷಕ ನಟ' ರಾಷ್ಟ್ರಪ್ರಶಸ್ತಿಗೆ ವಿಜಯ್ ಸೇತುಪತಿ ಭಾಜನರಾಗಿದ್ದಾರೆ.

  'ಸೂಪರ್ ಡಿಲಕ್ಸ್' ತಮಿಳು ಸಿನಿಮಾದ ನಟನೆಗೆ ವಿಜಯ್ ಸೇತುಪತಿಗೆ ಅತ್ಯುತ್ತಮ ಪೋಷಕ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಪಡೆದ ಬಗ್ಗೆ ವಿಜಯ್ ಸೇತುಪತಿ ತಡವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಸಹಾಯ ಮಾಡಿದ್ದ ನಿರ್ದೇಶಕ ಸಾವು: ಕುಟುಂಬಕ್ಕೆ ಆಸರೆಯಾದ ವಿಜಯ್ ಸೇತುಪತಿಸಹಾಯ ಮಾಡಿದ್ದ ನಿರ್ದೇಶಕ ಸಾವು: ಕುಟುಂಬಕ್ಕೆ ಆಸರೆಯಾದ ವಿಜಯ್ ಸೇತುಪತಿ

  'ನಾನು ಪ್ರಶಸ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದಿಲ್ಲ. ಕೆಲವು ವರ್ಷಗಳಿಂದ ಅವಾರ್ಡ್‌ ಫಂಕ್ಷನ್‌ಗಳಿಗೆ ಸಹ ಹೋಗುತ್ತಿಲ್ಲ. ಸಿನಿಮಾದಲ್ಲಿ ನಟಿಸಬೇಕಾದರೆ ಪ್ರಶಸ್ತಿಯನ್ನು ಗಮನದಲ್ಲಿಟ್ಟುಕೊಂಡು ನಟನೆ ಮಾಡುವುದಿಲ್ಲ' ಎಂದಿದ್ದಾರೆ ವಿಜಯ್ ಸೇತುಪತಿ.

  'ನನಗೆ ರಾಷ್ಟ್ರಪ್ರಶಸ್ತಿ ದೊರಕಿದ ವಿಷಯ ತಡವಾಗಿಯೇ ಗೊತ್ತಾಯಿತು. ನಾನು ಮಧುರೈನಲ್ಲಿ ಚಿತ್ರೀಕರಣದಲ್ಲಿದ್ದೆ. ಒಮ್ಮೆಲೇ ಹಲವು ಗೆಳೆಯರು, ಅಭಿಮಾನಿಗಳು ಸಂದೇಶಗಳನ್ನು, ಕರೆ ಮಾಡಲು ಆರಂಭಿಸಿದರು. ಆಗ ಗೊತ್ತಾಯಿತು ನನಗೆ ಪ್ರಶಸ್ತಿ ದೊರಕಿದೆ ಎಂದು. ಆದರೆ ಅವರಿಗೆ ಹೇಗೆ ಪ್ರತಿಕ್ರಿಯಸಬೇಕು ಎಂಬುದು ನನಗೆ ಗೊತ್ತಾಗಲಿಲ್ಲ' ಎಂದಿದ್ದಾರೆ ವಿಜಯ್ ಸೇತುಪತಿ.

  ವಿಜಯ್ ಸೇತುಪತಿ ಅವರು ರಾಷ್ಟ್ರಪ್ರಶಸ್ತಿ ಪಡೆಯಲು ಹೋಗುವುದಿಲ್ಲ ಎನ್ನಲಾಗಿತ್ತು, ಆದರೆ ಇದನ್ನು ಅಲ್ಲಗಳೆದಿರುವ ವಿಜಯ್ ಸೇತುಪತಿ. ರಾಷ್ಟ್ರಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಹಾಜರಿದ್ದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುವುದಾಗಿ ಹೇಳಿದ್ದಾರೆ.

  ಅಮೀರ್ ಖಾನ್‌ ಸಿನಿಮಾದಿಂದ ಹೊರಬಂದಿದ್ದಕ್ಕೆ ನಿಜ ಕಾರಣ ಕೊಟ್ಟ ವಿಜಯ್ ಸೇತುಪತಿಅಮೀರ್ ಖಾನ್‌ ಸಿನಿಮಾದಿಂದ ಹೊರಬಂದಿದ್ದಕ್ಕೆ ನಿಜ ಕಾರಣ ಕೊಟ್ಟ ವಿಜಯ್ ಸೇತುಪತಿ

  Chaithra Kotoor ನಾಗಾರ್ಜುನ‌ ನಡುವಿನ ಸಂಬಂಧದ ಬಗ್ಗೆ ಸಾಕ್ಷಿ ಹೇಳ್ತಿವೆ ಫೋಟೋಸ್ | Filmibeat Kannada

  'ಸೂಪರ್ ಡಿಲಕ್ಸ್' ತಮಿಳು ಸಿನಿಮಾದಲ್ಲಿ ವಿಜಯ್ ಸೇತುಪತಿ ತೃತೀಯಲಿಂಗಿಯ ಪಾತ್ರವನ್ನು ನಿರ್ವಹಿಸಿದ್ದರು. ವಿಜಯ್ ಸೇತುಪತಿ ಅಭಿನಯ ಭಾರಿ ಮೆಚ್ಚುಗೆ ಗಳಿಸಿತ್ತು.

  English summary
  Actor Vijay Sethupathi talked about winning national award for Super Deluxe movie acting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X