ಮುತ್ತಯ್ಯ ಮುರಳೀಧರನ್ ಬಯೋಪಿಕ್ ಫಸ್ಟ್ ಲುಕ್, ದಿಗ್ಗಜನ ಕ್ರಿಕೆಟಿಗನಾಗಿ ಸ್ಟಾರ್ ನಟ
ಶ್ರೀಲಂಕಾ ಕ್ರಿಕೆಟ್ ತಂಡದ ದಿಗ್ಗಜ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಅವರ ಜೀವನಕಥೆ ತೆರೆಮೇಲೆ ಬರಲಿದೆ ಎಂಬ ವದರಿಗಳು ಕಳೆದ ವರ್ಷದಿಂದಲೂ ಸದ್ದು ಮಾಡಿವೆ. ಇದೀಗ, ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.
Recommended Video
ಮುತ್ತಯ್ಯ ಮುರಳೀಧರನ್ ಬಯೋಪಿಕ್ ಕುರಿತು ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದು, ಸೌತ್ ಇಂಡಿಯಾ ಸೂಪರ್ ಸ್ಟಾರ್ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಪ್ರಕಟ ಮಾಡಲಾಗಿದೆ. ಇನ್ನುಳಿದಂತೆ ಈ ಚಿತ್ರದ ಬಗ್ಗೆ ಏನಿದೆ ಮಾಹಿತಿ ಎಂದು ತಿಳಿಯಲು ಮುಂದೆ ಓದಿ...

ಮುರಳೀಧರನ್ ಪಾತ್ರದಲ್ಲಿ ಸೇತುಪತಿ
ಮುತ್ತಯ್ಯ ಮುರಳೀಧರನ್ ಬಯೋಪಿಕ್ ಚಿತ್ರದಲ್ಲಿ ವಿಜಯ್ ಸೇತುಪತಿ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಎಂಎಸ್ ಶ್ರೀಪತಿ ನಿರ್ದೇಶಿಸುತ್ತಿದ್ದು, ಮೂವಿ ಟ್ರೈನ್ ಮೋಷನ್ ಪಿಕ್ಚರ್ಸ್ ಮತ್ತು ಡಾರ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಜಂಟಿಯಾಗಿ ನಿರ್ಮಿಸುತ್ತಿದೆ.

ಎರಡು ವರ್ಷದ ತಯಾರಿ
ಕಳೆದ ಎರಡು ವರ್ಷಗಳಿಂದ ಮುತ್ತಯ್ಯ ಮುರಳೀಧರನ್ ಅವರ ಕುರಿತು ಬಯೋಪಿಕ್ ಮಾಡಲು ತಯಾರಿ ನಡೆಸಿದ್ದು, ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆಯಂತೆ. ಬಿಗ್ ಬಜೆಟ್ ನಲ್ಲಿ ತಯಾರಾಗಲಿರುವ ಈ ಚಿತ್ರ ಭಾರತ, ಶ್ರೀಲಂಕಾ ಮತ್ತು ಇಂಗ್ಲೆಂಡ್ ನಲ್ಲಿ ಚಿತ್ರೀಕರಣ ಮಾಡಲು ಯೋಜನೆ ಹಾಕಿದ್ದಾರೆ ಎಂದು ಸುದ್ದಿ ಹೊರಬಿದ್ದಿದೆ.

ಟೈಟಲ್ ಬಗ್ಗೆ ಮಾಹಿತಿ ಇಲ್ಲ
133 ಟೆಸ್ಟ್ ಪಂದ್ಯಗಳನ್ನ ಆಡಿರುವ ಮುರಳೀಧರನ್ 800 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ ಪ್ರಥಮ ಬೌಲರ್. ಹಾಗಾಗಿ, ಈ ಚಿತ್ರಕ್ಕೆ '800' ಎಂದು ಹೆಸರಿಡಲು ಚಿಂತಿಸಲಾಗಿದೆ. ಉಳಿದ ಮಾಹಿತಿಗಳನ್ನು ಶೀಘ್ರದಲ್ಲಿ ತಿಳಿಸಲಿದ್ದೇವೆ ಎಂದು ಪ್ರೊಡಕ್ಷನ್ ಸಂಸ್ಥೆ ಹೇಳಿದೆ.

ವಿಶ್ವಕ್ಕೊಬ್ಬನೇ ಮುರಳೀಧರನ್
ವಿಶ್ವಕ್ರಿಕೆಟ್ ನಲ್ಲಿ ಮುತ್ತಯ್ಯ ಮುರಳೀಧರನ್ ಹೆಸರು ಬಹಳ ದೊಡ್ಡದು. ತನ್ನ ವಿಭಿನ್ನ ಬೌಲಿಂಗ್ ಶೈಲಿಯ ಮೂಲಕ ಬ್ಯಾಟ್ಸಮನ್ ಗಳನ್ನ ಕಾಡಿರುವ ಬೌಲರ್. ಶ್ರೀಲಂಕಾ ಪರ ಟೆಸ್ಟ್, ಏಕದಿನ ಹಾಗೂ ಟಿ-ಟ್ವೆಂಟಿ ಆಡಿರುವ ಮುರಳೀಧರನ್ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲನೇ ಆಟಗಾರ. 133 ಟೆಸ್ಟ್ ಪಂದ್ಯಗಳನ್ನ ಆಡಿರುವ ಮುರಳೀಧರನ್ 800 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ ಪ್ರಥಮ ಬೌಲರ್. 350 ಏಕದಿನ ಪಂದ್ಯದಲ್ಲಿ 534 ವಿಕೆಟ್ ಪಡೆದುಕೊಂಡಿದ್ದಾರೆ. 12 ಟಿ-ಟ್ವೆಂಟಿ ಪಂದ್ಯದಲ್ಲಿ 13 ವಿಕೆಟ್ ಪಡೆಯುವ ಮೂಲಕ ಒಟ್ಟು 1,247 ಅಂತಾರಾಷ್ಟ್ರಿಯ ವಿಕೆಟ್ ಪಡೆಯುವ ಮೂಲಕ ಹಲವು ದಾಖಲೆಗಳನ್ನ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.


Click it and Unblock the Notifications











