For Quick Alerts
  ALLOW NOTIFICATIONS  
  For Daily Alerts

  'ವಡಾ ಚೆನ್ನೈ' ಚಿತ್ರದ ಅವಕಾಶ ಕೈ ಬಿಟ್ಟಿದ್ದ ಸೇತುಪತಿ, ರವಿತೇಜ: ಯಾವುದು ಆ ಪಾತ್ರ?

  |

  ವೆಟ್ರಿಮಾರನ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಗ್ಯಾಂಗ್‌ಸ್ಟರ್ ಸಿನಿಮಾ 'ವಡಾ ಚೆನ್ನೈ'. 2018ರಲ್ಲಿ ತೆರೆಕಂಡಿದ್ದ ಈ ಸಿನಿಮಾ ತಮಿಳು ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್ ಆಯ್ತು. ತಮಿಳು ಬಿಟ್ಟು ಬೇರೆ ಭಾಷೆಯ ಪ್ರೇಕ್ಷಕರು ಸಹ ಈ ಚಿತ್ರ ಮೆಚ್ಚಿಕೊಂಡಿದ್ದರು.

  ಧನುಶ್ ನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಸಮುದ್ರಕಣಿ, ಅಮೀರ್, ಆಂಡ್ರಿಯಾ, ಡೇನೆಲ್ ಬಾಲಾಜಿ, ಕಿಶೋರ್, ಐಶ್ವರ್ಯ ರಾಜೇಶ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಗಮನಿಸಬೇಕಾದ ವಿಚಾರ ಏನಪ್ಪಾ ಅಂದ್ರೆ ವಡಾ ಚೆನ್ನೈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಮೊದಲು ವಿಜಯ್ ಸೇತುಪತಿ ಮತ್ತು ರವಿತೇಜ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತಂತೆ. ನಂತರ ಆ ಪಾತ್ರವನ್ನು ನಿರ್ದೇಶಕ ಅಮೀರ್ ಮಾಡಿದ್ರು ಎಂದು ವೆಟ್ರಿಮಾನ್ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ಯಾವುದು ಆ ಪಾತ್ರ? ಮುಂದೆ ಓದಿ...

  ರಾಜನ್ ಪಾತ್ರಕ್ಕೆ ಸೇತುಪತಿ ಮೊದಲ ಆಯ್ಕೆ

  ರಾಜನ್ ಪಾತ್ರಕ್ಕೆ ಸೇತುಪತಿ ಮೊದಲ ಆಯ್ಕೆ

  ಧನುಶ್ ನಾಯಕನಾಗಿ ನಟಿಸಿದ್ದ 'ವಡಾ ಚೆನ್ನೈ' ಸಿನಿಮಾದ ಫ್ಲ್ಯಾಶ್‌ಬ್ಯಾಕ್ ಸನ್ನಿವೇಶದಲ್ಲಿ ಬರುವ ರಾಜನ್ ಪಾತ್ರ ಬಹುಮುಖ್ಯ ಕಥಾವಸ್ತು. ಈ ಪಾತ್ರದಿಂದಲೇ ಇಡೀ ಚಿತ್ರ ಮುಂದುವರಿಯುತ್ತದೆ. ಇಂತಹ ಪಾತ್ರವನ್ನು ನಿರ್ದೇಶಕ ಅಮೀರ್ ನಿಭಾಯಿಸಿದ್ದಾರೆ. ಅಂದ್ಹಾಗೆ, ಈ ಪಾತ್ರವನ್ನು ಮೊದಲು ವಿಜಯ್ ಸೇತುಪತಿ ಅವರಿಂದ ಮಾಡಿಸಲು ನಿರ್ದೇಶಕ ವೆಟ್ರಿಮಾರನ್ ನಿರ್ಧರಿಸಿದ್ದರಂತೆ.

  ದುಬಾರಿ ಏರಿಯಾದಲ್ಲಿ ಧನುಶ್ ಐಶಾರಾಮಿ ಮನೆ: ಬೆಲೆ ಎಷ್ಟು ಗೊತ್ತೆ?ದುಬಾರಿ ಏರಿಯಾದಲ್ಲಿ ಧನುಶ್ ಐಶಾರಾಮಿ ಮನೆ: ಬೆಲೆ ಎಷ್ಟು ಗೊತ್ತೆ?

  ಕಥೆ ಇಷ್ಟ ಪಟ್ಟಿದ್ದ ಸೇತುಪತಿ

  ಕಥೆ ಇಷ್ಟ ಪಟ್ಟಿದ್ದ ಸೇತುಪತಿ

  ''ವಡಾ ಚೆನ್ನೈ ಚಿತ್ರದ ರಾಜನ್ ಪಾತ್ರಕ್ಕಾಗಿ ಮೊದಲು ವಿಜಯ್ ಸೇತುಪತಿ ಅವರನ್ನು ಸಂಪರ್ಕಿಸಿದ್ದೆ. ಸ್ಕ್ರಿಪ್ಟ್ ಕೇಳಿ ಬಹಳ ಇಷ್ಟಪಟ್ಟರು. ಸಿನಿಮಾ ಮಾಡ್ತೀನಿ ಅಂತ ಹೇಳಿದ್ರು. ಆಮೇಲೆ ನಮ್ಮ ಸಿನಿಮಾದ ಚಿತ್ರೀಕರಣದ ದಿನಾಂಕಕ್ಕೆ ಅವರ ಡೇಟ್ ಹೊಂದಾಣಿಕೆಯಾಗಲಿಲ್ಲ. ಹಾಗಾಗಿ, ಅವರು ಕೈ ಬಿಟ್ಟರು'' ಎಂದು ವೆಟ್ರಿಮಾರನ್ ಅವರು ರವಿಚಂದ್ರನ್ ಅಶ್ವಿನ್ ಜೊತೆಗಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

  ರವಿತೇಜ ಸಹ ಕೇಳಿದ್ದರು

  ರವಿತೇಜ ಸಹ ಕೇಳಿದ್ದರು

  ''ಸೇತುಪತಿ ಆಗಲ್ಲ ಅಂದ್ಮೇಲೆ ರವಿತೇಜ ಅವರನ್ನು ಕೇಳಲಾಯಿತು. ಆಗ ರವಿತೇಜ ಪಾಂಡಿಚೇರಿಯಲ್ಲಿದ್ದರು. ನಾನು ಭೇಟಿ ಮಾಡಿದೆ. ಸ್ಕ್ರಿಪ್ಟ್ ವಿವರಿಸಿದೆ, ಇಷ್ಟಪಟ್ಟರು. ಆದರೇ ಅವರದ್ದು ಸಹ ಬ್ಯುಸಿ ಶೆಡ್ಯೂಲ್. ಓಕೆ ಆಗಲಿಲ್ಲ'' ಎಂದು ವೆಟ್ರಿಮಾರನ್ ಇಂಟರೆಸ್ಟಿಂಗ್ ವಿಷಯ ಬಿಟ್ಟಿದ್ದಾರೆ.

  ಧನುಷ್ ಮಾಡಬೇಕಿದ್ದ ಖ್ಯಾತ ಕ್ರೀಡಾಪಟುವಿನ ಪಾತ್ರದಲ್ಲಿ ಅಮೀರ್ ಖಾನ್ಧನುಷ್ ಮಾಡಬೇಕಿದ್ದ ಖ್ಯಾತ ಕ್ರೀಡಾಪಟುವಿನ ಪಾತ್ರದಲ್ಲಿ ಅಮೀರ್ ಖಾನ್

  ಅಣ್ಣಾವ್ರನ್ನ 108 ದಿನ ಕಾಡಿನಲ್ಲಿ ಕಾಪಾಡಿದ್ದು ಯಾರು ಅನ್ನೋ ಕಥೆ ಹೇಳಿದ ಚಂದ್ರಚೂಡ್
  ನಾನೇ ಏಕೆ ಎಂದು ಕೇಳಿದ್ದರು

  ನಾನೇ ಏಕೆ ಎಂದು ಕೇಳಿದ್ದರು

  ''ಇಬ್ಬರು ಸ್ಟಾರ್ ನಟರ ಕಾಲ್‌ಶೀಟ್ ಸಿಗದ ನಂತರ ನಾನು ಮತ್ತು ನನ್ನ ತಂಡ ನಿರ್ದೇಶಕ ಅಮೀರ್ ಈ ಪಾತ್ರ ಸೂಕ್ತ ಎಂದು ನಿರ್ಧರಿಸಿದೆವು. ನಾನು ಅವರನ್ನು ಭೇಟಿಯಾದೆ. ಕಥೆಯನ್ನು ಕೇಳದೆ ಚಿತ್ರ ಮಾಡಲು ಒಪ್ಪಿಕೊಂಡರು. ಚಿತ್ರದ ಕಥೆಯನ್ನು ಕೇಳಲು ನಾನು ಅವರನ್ನು ಕೇಳಿದೆ. ಆಮೇಲೆ ಸ್ಕ್ರಿಪ್ಟ್ ಕೇಳಿದರು. ಈ ಪಾತ್ರಕ್ಕೆ ನನ್ನನ್ನೇ ಏಕೆ ಆಯ್ಕೆ ಮಾಡಿದ್ರಿ ಅಂತ ಅಂದರು. ಸೂಕ್ತವಾಗಿದ್ದಾರೆ ಅದಕ್ಕೆ ಅಂದೆ. ಅನುಮಾನದಿಂದಲೇ ಸರಿ ಮಾಡ್ತೇನೆ ಎಂದು ಸಮ್ಮತಿಸಿದರು'' ಎಂದು ವೆಟ್ರಿಮಾರನ್ ಹೇಳಿಕೊಂಡಿದ್ದಾರೆ.

  English summary
  Actor Ravi teja and Vijay Sethupathi Was The First Choice to Raajan Role in Vada Chennai Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X