For Quick Alerts
  ALLOW NOTIFICATIONS  
  For Daily Alerts

  ಎರಡು ದೊಡ್ಡ ಪ್ರಾಜೆಕ್ಟ್‌ಗಳ ಮಾಹಿತಿ ನೀಡಿದ ಸನ್ ಪಿಕ್ಚರ್ಸ್

  |

  ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಪ್ರಸ್ತುತ ಮೂರು ದೊಡ್ಡ ಪ್ರಾಜೆಕ್ಟ್‌ಗಳನ್ನು ನಿರ್ಮಾಣ ಮಾಡುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ, ವಿಜಯ್ 65 ಹಾಗೂ ಸೂರ್ಯ 40 ಚಿತ್ರ ನಿರ್ಮಿಸುತ್ತಿದ್ದಾರೆ. ಈಗ ಎರಡು ಚಿತ್ರದ ಬಗ್ಗೆ ಮಾಹಿತಿ ನೀಡಿದೆ.

  ತಮಿಳು ನಟ ವಿಜಯ್ ನಟಿಸುತ್ತಿರುವ 65ನೇ ಸಿನಿಮಾ ಜಾರ್ಜಿಯಾದಲ್ಲಿ ಚಿತ್ರೀಕರಣ ಆರಂಭಿಸಿದೆ. ಶೂಟಿಂಗ್‌ನಲ್ಲಿ ವಿಜಯ್ ಭಾಗವಹಿಸಿರುವ ಫೋಟೋವನ್ನು ಶೇರ್ ಮಾಡಿರುವ ಸನ್ ಪಿಕ್ಚರ್ಸ್ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

  ಸೈಕಲ್ ನಲ್ಲಿ ಬಂದು ಮತಚಲಾಯಿಸಿ ಸಂಚಲನ ಮೂಡಿಸಿದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ನಟ ವಿಜಯ್ಸೈಕಲ್ ನಲ್ಲಿ ಬಂದು ಮತಚಲಾಯಿಸಿ ಸಂಚಲನ ಮೂಡಿಸಿದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ನಟ ವಿಜಯ್

  'ಕೋಲಮಾವು ಕೋಕಿಲಾ' ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡ್ತಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಏಪ್ರಿಲ್ 6ರಂದು ನಡೆದ ತಮಿಳುನಾಡು ಚುನಾವಣೆಯಲ್ಲಿ ಮತದಾನ ಮಾಡಿದ ನಟ ವಿಜಯ್, ಸಂಜೆ ವೇಳೆ ಜಾರ್ಜಿಯಾಗೆ ಪ್ರಯಾಣ ಬೆಳೆಸಿದ್ದರು. ಈಗ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಫೋಟೋ ಬಹಿರಂಗವಾಗಿದೆ.

  ದಳಪತಿ ವಿಜಯ್ ಜೊತೆ ನಟಿಸಲು ಪೂಜಾ ಹೆಗ್ಡೆ ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರಾ?ದಳಪತಿ ವಿಜಯ್ ಜೊತೆ ನಟಿಸಲು ಪೂಜಾ ಹೆಗ್ಡೆ ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರಾ?

  ಮತ್ತೊಂದೆಡೆ ಸೂರ್ಯ ನಟಿಸುತ್ತಿರುವ 40ನೇ ಚಿತ್ರದ ಕೆಲಸವೂ ಪ್ರಗತಿಯಲ್ಲಿದೆ. 'ಸೂರರೈ ಪೊಟ್ರು' ಸಿನಿಮಾದ ಯಶಸ್ಸಿನ ಬಳಿಕ ಸನ್ ಪಿಕ್ಚರ್ಸ್ ಜೊತೆ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಸೂರ್ಯ ವಿಭಿನ್ನವಾದ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಂಡಿದ್ದಾರೆ.

  ಸೂರ್ಯ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುವ ಫೋಟೋವೊಂದು ಸಂಚಲನ ಸೃಷ್ಟಿಸಿದೆ. ಉದ್ದ ಕೂದಲು ಬಿಟ್ಟು, ಪಂಚೆ ಮತ್ತು ಶರ್ಟ್ ತೊಟ್ಟು ಕೈಯಲ್ಲಿ ತಲ್ವಾರ್ ಹಿಡಿದಿರುವ ಸೂರ್ಯ ಅವರ ಲುಕ್ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ.

  ನಟಿ ತಮನ್ನಾ ಭಾಟಿಯಾ ಹಿಂದೆ ವಿರಾಟ್ ಕೊಹ್ಲಿ ಕುಳಿತಿರುವುದು ನಿಜಾನಾ? | Filmibeat Kannada

  ಇನ್ನುಳಿದಂತೆ ರಜನಿಕಾಂತ್ ಮತ್ತು ಸಿರುತೈ ಶಿವ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಚಿತ್ರ ಹೈದರಾಬಾದ್‌ನಲ್ಲಿ ಶೂಟಿಂಗ್ ಮಾಡ್ತಿದೆ. ಈ ಚಿತ್ರದಲ್ಲಿ ನಯನತಾರ, ಕೀರ್ತಿ ಸುರೇಶ್, ಖುಷ್ಬೂ, ಮೀನಾ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

  English summary
  Tamil Actor Vijay's 65th movie shooting has started in Georgia. and Suriya starrer 40th Movie Making Photo out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X