ಕೆನಡಾದಲ್ಲಿ ಸಿಲುಕಿರುವ ವಿಜಯ್ ಪುತ್ರ: ಮಗನ ಸುರಕ್ಷತೆಯ ಚಿಂತೆಯಲ್ಲಿ ದಳಪತಿ

ವಿಶ್ವದಾದ್ಯಂತ ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಭಾರತ ಸೇರಿದಂದೆ ಸಾಕಷ್ಟು ದೇಶಗಳು ಲಾಕ್ ಡೌನ್ ನಿರ್ಧಾರ ತೆಗೆದುಕೊಂಡಿದೆ.

Recommended Video

ದೇಹದ ತೂಕ ಇಳಿಸಿಕೊಳ್ಳಲು ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯೇ ಜೀವಕ್ಕೆ ಮುಳುವಾಯ್ತಾ??| Bullet Prakash No More

ದೇಶದಿಂದ ದೇಶಕ್ಕೆ ಪ್ರಯಾಣಿಸುವುದಿರಲಿ, ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾಭ್ಯಾಸ, ಪ್ರವಾಸ, ಉದ್ಯೋಗ ಅಂತ ವಿದೇಶದಲ್ಲಿಯೆ ನೆಲೆಸಿದವರ ಸ್ಥಿತಿ ಕಷ್ಟದಲ್ಲಿದೆ. ಕೊರೊನಾ ವೈರಸ್ ಹಾವಳಿ ಪ್ರಾರಂಭವಾಗುತ್ತಿದ್ದಂತೆ ವಿದೇಶದಲ್ಲಿ ನೆಲೆಸಿದ್ದ ಸಾಕಷ್ಟು ಭಾರತಿಯರನ್ನು ವಾಪಸ್ ಕರೆದುಕೊಂಡು ಬರಲಾಗಿದೆ. ಆದರೆ ಇನ್ನೂ ಸಾಕಷ್ಟು ಮಂದಿ ವಿದೇಶದಲ್ಲಿಯೇ ಸಿಲುಕಿಕೊಂಡಿದ್ದಾರೆ. ಹೊರದೇಶದಲ್ಲಿ ಸಿಲುಕಿದವರ ಪೈಕಿ ಕಾಲಿವುಡ್ ನ ಸ್ಟಾರ್ ನಟ ವಿಜಯ್ ಪುತ್ರ ಸಂಜಯ್ ಕೂಡ ಇದ್ದಾರೆ. ಮುಂದೆ ಓದಿ...

ಕೆನಡಾದಲ್ಲಿ ಸಿಲುಕಿರುವ ವಿಜಯ್ ಪುತ್ರ

ಕೆನಡಾದಲ್ಲಿ ಸಿಲುಕಿರುವ ವಿಜಯ್ ಪುತ್ರ

ಕಾಲಿವುಡ್ ಸ್ಟಾರ್ ವಿಜಯ್ ಪುತ್ರ ಜಾಸನ್ ಸಂಜಯ್ ಕೆನಡಾದಲ್ಲಿ ನೆಲೆಸಿದ್ದಾರೆ. ಲಾಕ್ ಡೌನ್ ಹಿನ್ನಲೆ ಸಂಜಯ್ ಭಾರತಕ್ಕೆ ವಾಪಸ್ ಆಗದ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಹಾವಳಿಯ ಸಂದಿಗ್ದ ಸ್ಥಿತಿಯಲ್ಲಿ ಮಗ ವಿದೇಶದಲ್ಲಿಯೇ ಸಿಲುಕಿರುವ ಬಗ್ಗೆ ನಟ ವಿಜಯ್ ಚಿಂತೆಯಲ್ಲಿದ್ದಾರಂತೆ.

ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೆನಡಾಗೆ ತೆರಳಿರುವ ಸಂಜಯ್

ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೆನಡಾಗೆ ತೆರಳಿರುವ ಸಂಜಯ್

ವಿಜಯ್ ಪುತ್ರ ಸಂಜಯ್ ಉನ್ನತ ವಿದ್ಯಾಭ್ಯಾಸಕ್ಕಾಗಿ ಕೆನಡಾದಲ್ಲಿ ನೆಲೆಸಿದ್ದಾರೆ. ಕೆನಡಾದ ಜನಪ್ರಿಯ ವಿಶ್ವವಿದ್ಯಾಲಯವೊಂದರಲ್ಲಿ ಚಲನಚಿತ್ರ ನಿರ್ದೇಶನದ ಬಗ್ಗೆ ಕಲಿಯುತ್ತಿದ್ದಾರಂತೆ. ಭಾರತಕ್ಕೆ ವಾಪಸ್ ಆಗದೆ ವಿದೇಶದಲ್ಲಿಯೆ ಉಳಿದಿರುವ ಮಗನ ಬಗ್ಗೆ ವಿಜಯ್ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆನಾಡದಲ್ಲಿ ಕೊರೊನಾ ಸೋಂಕಿತರು ಕಡಿಮೆ

ಕೆನಾಡದಲ್ಲಿ ಕೊರೊನಾ ಸೋಂಕಿತರು ಕಡಿಮೆ

ಬೇರೆ ದೇಶಗಳಿಗೆ ಹೋಲಿಸಿದರೆ ಕೆನಡಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕಡಿಮೆ. ಆದರೂ ಈ ಸಮಯದಲ್ಲಿ ಮನೆಯಿಂದ ದೂರ ಇರುವ ಮಗನ ಬಗ್ಗೆ ವಿಜಯ್ ಗೆ ತೀರ ಚಿಂತೆಯಾಗಿದೆಯಂತೆ. ಮಗನಿಗೆ ಮನೆಯಲ್ಲಿಯೆ ಸುರಕ್ಷಿತವಾಗಿ ಇರುವಂತೆ ಸಲಹೆ ನೀಡುತ್ತಿದ್ದಾರಂತೆ. ವಿಜಯ್ ಮತ್ತು ಪತ್ನಿ ಸಂಗೀತ ಹಗೂ ಮಗಳು ದಿವ್ಯಾ ಚೆನ್ನೈನ ತಮ್ಮ ನಿವಾಸದಲ್ಲಿದ್ದಾರೆ.

ಉತ್ತಮ ಕ್ರೀಡಾಪಟು ಸಂಜಯ್

ಉತ್ತಮ ಕ್ರೀಡಾಪಟು ಸಂಜಯ್

ವಿಜಯ್ ಪುತ್ರ ಈ ಹಿಂದೆಯೆ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಸಂಜಯ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆನಡಾಗೆ ತೆರಳಿದ್ದಾರೆ. ಸಂಜಯ್ ಓದಿನ ಜೊತೆಗೆ ಉತ್ತಮ ಕ್ರೀಡಾಪಟು ಕೂಡ ಹೌದು. ಶಾಲದಿನಗಳಿಂದ ಸಂಜಯ್ ಉತ್ತಮ ಬ್ಯಾಡ್ಮಿಂಟನ್ ಪಟುವಂತೆ. ಅದೇನೆ ಇರಲಿ ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂಜಯ್ ಸುರಕ್ಷಿತವಾಗಿ ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

More from Filmibeat

English summary
Tollywood Actor Vijay son Jason Sanjay stuck in Canada amid Coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X