ನಟ ವಿಜಯ್ ಮಗ ಸಿನಿಮಾ ಪ್ರವೇಶಿಸಲು ಸಜ್ಜು, ಮೊದಲ ಸಿನಿಮಾ ರೀಮೇಕ್

ಸ್ಟಾರ್ ನಟ ವಿಜಯ್ ಸಿನಿಮಾದಲ್ಲಿ ಮಿರಿ-ಮಿರಿ ಮಿಂಚುತ್ತಿರುವಾಗಲೇ ಅವರ ಪುತ್ರನನ್ನು ಸಿನಿಮಾ ಉದ್ಯಮಕ್ಕೆ ಎಳೆತಂದಿದ್ದಾರೆ. ದಳಪತಿ ವಿಜಯ್ ಪುತ್ರ ನಾಯಕನಾಗಿ ಮಿಂಚಲು ವೇದಿಕೆ ಸಿದ್ಧವಾಗಿದೆ.

ವಿಜಯ್ ಪುತ್ರ ಸಂಜಯ್ ಜಾಸೊನ್ ಸಿನಿಮಾ ಪ್ರವೇಶಿಸುತ್ತಿದ್ದಾರೆ. ಈ ಹಿಂದೆ ಸಿನಿಮಾವೊಂದರಲ್ಲಿ ಅಪ್ಪನೊಂದಿಗೆ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದ ಜಾಸನ್ ಈಗ ಪೂರ್ಣ ಪ್ರಮಾಣದ ನಾಯಕನಾಗಿ ತೆರೆಯ ಮೇಲೆ ಬರುತ್ತಿದ್ದಾರೆ.

ವಿಜಯ್ ಮಗನ ಸಿನಿಮಾದ ಮತ್ತೊಂದು ವಿಶೇಷವೆಂದರೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ವಿಜಯ್ ಸ್ನೇಹಿತ, ಖ್ಯಾತ ನಟ ವಿಜಯ್ ಸೇತುಪತಿ.

ತೆಲುಗಿನ ಸಿನಿಮಾದ ರೀಮೇಕ್‌ ಮೂಲಕ ಎಂಟ್ರಿ

ತೆಲುಗಿನ ಸಿನಿಮಾದ ರೀಮೇಕ್‌ ಮೂಲಕ ಎಂಟ್ರಿ

ತೆಲುಗಿನ 'ಉಪ್ಪೆನಾ' ಸಿನಿಮಾದ ರೀಮೇಕ್‌ ತಮಿಳಿನಲ್ಲಿ ನಿರ್ಮಿಸುತ್ತಿದ್ದೇ, ಇದೇ ವಿಜಯ್ ಮಗನ ಮೊದಲ ಸಿನಿಮಾ ಆಗಲಿದೆ. ಏಪ್ರಿಲ್ ಎರಡರಂದು ಬಿಡುಗಡೆಯಾಗಬೇಕಿದ್ದ 'ಉಪ್ಪೆನಾ' ಚಿತ್ರ ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಇನ್ನೂ ತೆರೆ ಕಾಣಲು ಸಾಧ್ಯವಾಗಿಲ್ಲ.

ಕೆನಡಾದಲ್ಲಿ ಸಿನಿಮಾ ಸಂಬಂಧಿತ ಕೋರ್ಸ್ ಕಲಿಯುತ್ತಿದ್ದಾರೆ

ಕೆನಡಾದಲ್ಲಿ ಸಿನಿಮಾ ಸಂಬಂಧಿತ ಕೋರ್ಸ್ ಕಲಿಯುತ್ತಿದ್ದಾರೆ

ಜಾಸನ್ ಸಂಜಯ್ ಪ್ರಸ್ತುತ ಕೆನಡಾದಲ್ಲಿ ಸಿನಿಮಾ ಕುರಿತ ಎಬಿಸಿಡಿ ಕಲಿಯುತ್ತಿದ್ದಾರೆ. ಅಲ್ಲಿ ಅವರು ಸಿನಿಮಾ ಸಂಬಂಧಿತ ಕೋರ್ಸ್ ಕಲಿಯುತ್ತಿದ್ದಾರೆ. ಲಾಕ್‌ಡೌನ್ ಅಂತ್ಯವಾದ ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆ ಆಗಲಿದೆ.

ಉಪ್ಪೆನ ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ

ಉಪ್ಪೆನ ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ

ತೆಲುಗಿನಲ್ಲಿ 'ಉಪ್ಪೆನ' ಸಿನಿಮಾ ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಅವರೇ ತಮಿಳಿನಲ್ಲಿಯೂ ನಿರ್ದೇಶನ ಮಾಡಲಿದ್ದಾರೆ. ಇದು ಅವರ ಎರಡನೇ ಸಿನಿಮಾ ಎನಿಸಿಕೊಳ್ಳಲಿದೆ. ಉಪ್ಪೆನ ಸಿನಿಮಾ ಮರ್ಯಾದೆ ಹತ್ಯೆಯ ಕತೆ ಹೊಂದಿತ್ತು, ತೆಲುಗಿನಲ್ಲಿ ನಟ ವರುಣ್ ತೇಜ ಸಹೋದರ ಪಂಜ ವೈಷ್ಣವ್ ತೇಜ್ ಈ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

ಅಪ್ಪ-ಮಗ ಇಬ್ಬರಿಗೂ ವಿಲನ್!

ಅಪ್ಪ-ಮಗ ಇಬ್ಬರಿಗೂ ವಿಲನ್!

ವಿಜಯ್ ಸೇತುಪತಿ ಈ ಸಿನಿಮಾದ ನಿರ್ಮಾಣ ಮಾಡುವ ಜೊತೆಗೆ ವಿಲನ್ ಆಗಿ ಅಭಿನಯಿಸಲಿದ್ದಾರೆ. ವಿಜಯ್ ಸೇತುಪತಿ ಪ್ರಸ್ತುತ ಮಾಸ್ಟರ್ ಸಿನಿಮಾದಲ್ಲಿ ವಿಜಯ್‌ ಗೆ ವಿಲನ್ ಆಗಿದ್ದಾರೆ. ಮಾಸ್ಟರ್ ಸಿನಿಮಾ ಲಾಕ್‌ಡೌನ್ ನಂತರ ಬಿಡುಗಡೆ ಆಗಲಿದೆ. ಅಪ್ಪ-ಮಗ ಇಬ್ಬರಿಗೂ ವಿಲನ್ ಆಗಲಿದ್ದಾರೆ ವಿಜಯ್ ಸೇತುಪತಿ.

More from Filmibeat

English summary
Tamil super star Vijay's son Sanjay Jason ready to enter movie as a Hero. Vijay Sethupati producing a movie for Vijay's son. That will be remake of Telugu movie 'Uppena'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X