'ಮಾಸ್ಟರ್' ಆಡಿಯೋ ಬಿಡುಗಡೆಯಲ್ಲಿ ತಲಾ ಅಜಿತ್ ಬಗ್ಗೆ ವಿಜಯ್ ಹೇಳಿದ್ದೇನು?
ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ ಬಹು ನಿರೀಕ್ಷೆಯ ಮಾಸ್ಟರ್ ಸಿನಿಮಾ ಆಡಿಯೋ ಅದ್ದೂರಿಯಾಗಿ ತೆರೆಗೆ ಬಂದಿದೆ. ಚಿತ್ರದ ಆಡಿಯೋ ಮೇಲೆ ಅಭಿಮಾನಿಗಳ ನಿರೀಕ್ಷೆ ಎಷ್ಟಿತ್ತೋ ಕಾರ್ಯಕ್ರಮದಲ್ಲಿ ವಿಜಯ್ ಏನು ಮಾತನಾಡಲಿದ್ದಾರೆ ಎನ್ನುವ ಕುತೂಹಲ, ಕಾತರ ಕೂಡ ಅಷ್ಟೆ ಇತ್ತು.
ಸಿನಿಮಾ ಹೊರತುಪಡಿಸಿ ವಿಜಯ್ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಾರಾ ಎಂದು ಅಭಿಮಾನಿಗಳು ಮಾತ್ರವಲ್ಲದೆ ಇಡೀ ಕಾಲಿವುಡ್ ಕಾತರದಿಂದ ಎದುರು ನೋಡುತ್ತಿತ್ತು. ವಿಜಯ್ ವೇದಿಕೆ ಮೇಲೆ ಹೋಗುತ್ತಿದ್ದಂತೆ ಅಭಿಮಾನಿಗಳ ಚಪ್ಪಾಳೆ, ಶಿಳ್ಳೆ ಜೋರಾಗಿ ಕೇಳಿಸುತ್ತಿತ್ತು. ವಿಶೇಷ ಅಂದರೆ ವಿಜಯ್ ಸಿನಿಮಾ ಜೊತೆಗೆ ನಟ ಅಜಿತ್ ಬಗ್ಗೆ ಮಾತನಾಡಿರುವುದು ಅಚ್ಚರಿವುಂಟು ಮಾಡಿದೆ.
ಕಾಲಿವುಡ್ ನಲ್ಲಿ ಅಜಿತ್ ಮತ್ತು ವಿಜಯ್ ಅಭಿಮಾನಿಗಳು ಆಗಾಗ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಚಿತ್ರರಂಗದಲ್ಲಿ ಇಬ್ಬರ ನಡುವ ಪೈಪೋಟಿ ಜಾಸ್ತಿ. ಹೀಗಿರುವಾಗ ಅಜಿತ್ ಬಗ್ಗೆ ಹೇಳಿರುವುದು ಚರ್ಚೆಯಾಗುತ್ತಿದೆ. ಹಾಗಾದರೆ ವಿಜಯ್ ಹೇಳಿದ್ದೇನು? ಮುಂದೆ ಓದಿ..

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ವಿಜಯ್
ವಿಜಯ್ ಮಾತು ಪ್ರಾರಂಭಿಸುತ್ತಿದ್ದಂತೆ ವಿಜಯ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಈ ಕಾರ್ಯಕ್ರಮವನ್ನು ದೊಡ್ಡ ಮಟ್ಟಕ್ಕೆ ಅಭಿಮಾನಿಗಳ ಮಧ್ಯೆ ಮಾಡಬೇಕೆಂದು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದ ಕಾರ್ಯಕ್ರಮವನ್ನು ಕಡಿಮೆ ಜನ ಸಂಖ್ಯೆಯ ನಡುವೆ ಮಾಡಲಾಯಿತು ಹಾಗಾಗಿ ವಿಜಯ್ ಕ್ಷಮೆ ಕೇಳಿದ್ದಾರೆ.

ಅಭಿಮಾನಿಗಳು ನನ್ನ ಹೃದಯದಲ್ಲಿ ನೆಲೆಸಿದ್ದಾರೆ
"ನನ್ನ ಪ್ರೀತಿಯ ಅಭಿಮಾನಿಗಳು ನನ್ನ ಹೃದಯದಲ್ಲಿ ನೆಲೆಸಿದ್ದಾರೆ. ನನ್ನ ಅಭಿಮಾನಿಗಳು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲವೆಂಬ ಬೇಸರವಿದೆ. ನನ್ನ ಕಡೆಯಿಂದ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದರು.

ಅಜಿತ್ ಬಗ್ಗೆ ಮಾತನಾಡಿದ ವಿಜಯ್
ಕಾಲಿವುಡ್ ಲನಲ್ಲಿ ನಟ ಅಜಿತ್ ಮತ್ತು ವಿಜಯ್ ಅಭಿಮಾನಿಗಳ ನಡುವೆ ಆಗಾಗ ಕಿತ್ತಾಟ ನಡೆಯುತ್ತಿರುತ್ತೆ. ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಹಾವು ಮುಂಗುಸಿ ಹಾಗೆ. ಒಮ್ಮೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕಿತ್ತಾಡುತ್ತಿರುತ್ತಾರೆ. ಹೀಗಿರುವಾಗ ವಿಜಯ್ ಆಡಿಯೋ ರಿಲೀಸ್ ನಲ್ಲಿ ಅಜಿತ್ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.

ಅಜಿತ್ ಹಾಗೆ ಬ್ಲೇಸರ್ ಧರಿಸಿ ಬಂದಿದ್ದೀನಿ
ನಟ ವಿಜಯ್ ಮಾಸ್ಟರ್ ಚಿತ್ರದ ಆಡಿಯೋ ಮತ್ತು ಸಿನಿಮಾದ ಬಗ್ಗೆ ಮಾತನಾಡುತ್ತ ಮಧ್ಯದಲ್ಲಿ ತಲಾ ಅಜಿತ್ ಹೆಸರನ್ನು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಗಣ್ಯರು ಜೋರಾಗಿ ಚಪ್ಪಾಳೆ ತಟ್ಟುತ್ತಾರೆ. ನಾನು "ಈ ಕಾರ್ಯಕ್ರಮಕ್ಕೆ ನನ್ನ ಸ್ನೇಹಿತ ಅಜಿತ್ ಹಾಗೆ ಬ್ಲೇಸರ್ ಧರಿಸಿ ಬಂದಿದ್ದೀನಿ" ಎಂದು ವಿಜಯ್ ಹೇಳುತ್ತಾರೆ. ವಿಜಯ್ ಯಾಕೆ ತಲಾ ಡ್ರೆಸ್ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ಸದ್ಯ ಚರ್ಚೆಗೆ ಕಾರಣವಾಗಿದೆ.


Click it and Unblock the Notifications











