ಸೆನ್ಸಾರ್ ಮುಗಿಸಿದ ದಳಪತಿ 'ಗೋಟ್'; ತಮಿಳುನಾಡಿಗೂ ಮುನ್ನ ಕರ್ನಾಟಕದಲ್ಲಿ ಸಿನಿಮಾ ರಿಲೀಸ್

ದಳಪತಿ ವಿಜಯ್ ನಟನೆಯ ತಮಿಳು ಸಿನಿಮಾ 'ಗೋಟ್' ರಿಲೀಸ್ ಡೇಟ್ ಹತ್ತರವಾಗುತ್ತಿದೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಸೆಪ್ಟೆಂಬರ್ 5ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ವೆಂಕಟ್ ಪ್ರಭು ಈ ಸೈನ್ಸ್ ಫಿಕ್ಷನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ದಳಪತಿ ವಿಜಯ್ ಡಬಲ್ ರೋಲ್ ಪ್ಲೇ ಮಾಡಿದ್ದಾರೆ. ತಂದೆ, ಮಗನಾಗಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಈಗಾಗಲೇ ವಿಜಯ್ ಹೊಸ ಪಕ್ಷ ಕಟ್ಟಿ ತಮಿಳುನಾಡು ರಾಜಕೀಯರಂಗ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಪಕ್ಷದ ಹೆಸರು, ಬಾವುಟ, ಚಿಹ್ನೆ ಎಲ್ಲವರನ್ನು ಅನಾವರಣ ಮಾಡಿದ್ದಾರೆ.

Vijay starrer Goat gets U A certificate first show to begin at 4 AM in Karnataka

ವಿಜಯ್ ಪಾಲಿಟಿಕ್ಸ್ ಕಡೆ ಮುಖ ಮಾಡಿರುವುದರಿಂದ ಇನ್ನು ಮುಂದೆ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗ್ತಿದೆ. ಸಿನಿಮಾ- ರಾಜಕೀಯ ಎರಡನ್ನೂ ಸರಿದೂಗಿಸಿಕೊಂಡು ಹೋಗುವುದು ಕಷ್ಟ. 'ಗೋಟ್' ಬಳಿಕ ಒಂದು ಸಿನಿಮಾ ಮಾತ್ರ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಇನ್ನು 'ಗೋಟ್' ಕೊನೆ ಸಿನಿಮಾ ಆಗಬಹುದು ಎನ್ನುವ ಚರ್ಚೆ ಕೂಡ ನಡೀತಿದೆ.

ಶೀಘ್ರದಲ್ಲೇ ಪಾದಯಾತ್ರೆ ನಡೆಸಿ ವಿಜಯ್ ಪಕ್ಷ ಸಂಘಟನೆ ಮಾಡಲು ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೆಲ್ಲದರ ನಡುವೆ 'ಗೋಟ್' ಸಿನಿಮಾ ಸೆನ್ಸಾರ್ ಸರ್ಟಿಫಿಕೇಟ್ ಪಡೆದು ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ರನ್ ಟೈಮ್ ಕೇಳಿದವರು ಶಾಕ್ ಆಗಿದ್ದಾರೆ.

'ಗೋಟ್' ಚಿತ್ರದ ಕಾಲಾವಧಿ 3 ಗಂಟೆ 3 ನಿಮಿಷ ಎಂದು ಗೊತ್ತಾಗಿದೆ. ಇದನ್ನು ಕೇಳಿ ಕೆಲವರು ಅಷ್ಟು ಹೊತ್ತು ಸಿನಿಮಾ ಪ್ರೇಕ್ಷಕರನ್ನು ನೋಡಿಸಿಕೊಳ್ಳುತ್ತಾ? ಎನ್ನುವ ಕುತೂಹಲ ಮೂಡಿದೆ. ಈ ಹಿಂದೆ 'ನನ್ಬನ್', 'ಮಾಸ್ಟರ್', 'ತಲೈವರ್' ಸಿನಿಮಾಗಳ ಕಾಲಾವಧಿ ಕೂಡ ಹೆಚ್ಚು ಕಡಿಮೆ 3 ಗಂಟೆ ಇತ್ತು. 'ನನ್ಬನ್' ಹಾಗೂ 'ತಲೈವರ್' ಚಿತ್ರಗಳು ಸೋತರೆ 'ಮಾಸ್ಟರ್' ಸೂಪರ್ ಹಿಟ್ ಆಗಿತ್ತು.

Vijay starrer Goat gets U A certificate first show to begin at 4 AM in Karnataka

ವಿಜಯ್ ಜೊತೆಗೆ 'ಗೋಟ್' ಚಿತ್ರದಲ್ಲಿ ಸ್ನೇಹಾ, ಪ್ರಭುದೇವಾ, ಪ್ರಶಾಂತ್ ಸೇರಿ ದೊಡ್ಡ ತಾರಾಗಣವಿದೆ. ಕೋಕಿಲ ಮೋಹನ್ ವಿಲನ್ ಆಗಿ ನಟಿಸಿದ್ದಾರೆ. ಯುವನ್ ಶಂಕರ್ ರಾಜಾ ಸಂಗೀತ, ಸಿದ್ಧಾರ್ಥ್ ನುನಿ ಛಾಯಾಗ್ರಹಣವಿದೆ. ವೆಂಕಟ್ ಪ್ರಭು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಟ್ರೈಲರ್‌ನಲ್ಲಿ ವಿಜಯ್‌ನ ಡಿಏಜ್ ತಂತ್ರಜ್ಞಾನ ಬಳಸಿ ಯುವಕನಂತೆ ತೋರಿಸಿರುವುದು ಟ್ರೋಲ್‌ಗೆ ಗುರಿಯಾಗಿತ್ತು.

ಚಿತ್ರದಲ್ಲಿ ಸ್ಪೈ ಏಜೆಂಟ್ ಗಾಂಧಿ ಎನ್ನುವ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ತಾನು ಸೇವೆಯಲ್ಲಿ ಇದ್ದಾಗ ಭಯೋತ್ಪಾದಕರಿಗೆ ಕಂಟಕವಾಗಿರುತ್ತಾನೆ. ನಿವೃತ್ತಿ ಬಳಿಕ ದುಷ್ಠಶಕ್ತಿಗಳು ಗಾಂಧೀ ಹಾಗೂ ಆತನ ಸಹಚರರ ವಿರುದ್ಧ ಸಮರ ಸಾರುತ್ತಾರೆ. ಅಲ್ಲಿಂದ ಮುಂದೆ ಮತ್ತೆ ಗಾಂಧಿ ಹೋರಾಟ ಶುರುವಾಗುತ್ತದೆ. ಅದಕ್ಕೆ ಮಗ ಜೀವನ್ ಸಾಥ್ ಕೂಡ ಸಿಗುತ್ತದೆ. ಮುಂದೇನು ಎನ್ನುವುದು ಸಿನಿಮಾ ಕಥೆ ಅನ್ನೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ.

'ಗೋಟ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸಾಮಾನ್ಯವಾಗಿ ವಿಜಯ್ ತಮ್ಮ ಸಿನಿಮಾಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಲ್ಲ. ಈ ಬಾರಿಯೂ ಅದೇ ನಿಯಮ ಪಾಲಿಸುತ್ತಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಸೆಪ್ಟೆಂಬರ್ 5 ಬೆಳಗ್ಗೆ 9 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಕರ್ನಾಟಕ, ಕೇರಳದಲ್ಲಿ ಬೆಳಗ್ಗೆ 4 ಗಂಟೆಗೆ ಫ್ಯಾನ್ಸ್ ಶೋಗಳು ಆರಂಭವಾಗಲಿದೆ.

More from Filmibeat

English summary
Thalapathy Vijay's GOAT won't have early morning shows in tamilnadu;
Read more about: vijay tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X