ವಿಜಯ್ 'ಮಾಸ್ಟರ್' ಬಿಡುಗಡೆಗೆ ಹೊಸ ದಿನಾಂಕ ನಿಗದಿ: ಅಭಿಮಾನಿಗಳಿಗೆ ಡಬಲ್ ಸಂಭ್ರಮ

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಇಳಯದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಕೂಡ ಒಂದು. ಈಗಾಗಲೆ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಮಾಸ್ಟರ್ ಏಪ್ರಿಲ್ 9ಕ್ಕೆ ತೆರೆಗೆ ಬರಬೇಕಿತ್ತು.

ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ಲೆಕ್ಕಾಚಾರವೆ ತಲೆಕೆಳಗಾಗಿದ್ದು, ಮಾಸ್ಟರ್ ರಿಲೀಸ್ ಮುಂದಕ್ಕೆ ಹೋಗಿದೆ. ಮೇ 3ರವರೆಗೂ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಪರಿಸ್ಥಿತಿ ಹೀಗೆ ಇದ್ದರೆ ಮತ್ತೆ ಮುಂದುವರೆಯುವ ಸಾಧ್ಯತೆಯು ಇದೆ. ಆದರೂ ಮಾಸ್ಟರ್ ಸಿನಿಮಾತಂಡ ಹೊಸ ರಿಲೀಸ್ ಡೇಟ್ ಫಿಕ್ಸ್ ಮಾಡಿದೆ. ಹೌದು, ಬಹುನಿರೀಕ್ಷೆಯ ಮಾಸ್ಟರ್ ಜೂನ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಮುಂದೆ ಓದಿ..

ಜೂನ್ 22ಕ್ಕೆ ಮಾಸ್ಟರ್ ರಿಲೀಸ್

ಜೂನ್ 22ಕ್ಕೆ ಮಾಸ್ಟರ್ ರಿಲೀಸ್

ಬಹು ನಿರೀಕ್ಷೆಯ ಮಾಸ್ಟರ್ ಸಿನಿಮಾ ಜೂನ್ 22ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೂನ್ ಅಷ್ಟೊತ್ತಿಗೆ ಲಾಕ್ ಡೌನ್ ಕೊನೆಯಾಗಲಿದ್ದು, ಚಿತ್ರಮಂದಿರಗಳು ಮತ್ತು ಮಾಲ್ ಗಳು ಓಪನ್ ಆಗುವ ಸಾಧ್ಯತೆ ಇದೆ. ಹಾಗಾಗಿ ಚಿತ್ರತಂಡ ಮಾಸ್ಟರ್ ಸಿನಿಮಾವನ್ನು ಜೂನ್ 22ಕ್ಕೆ ರಿಲೀಸ್ ಮಾಡುವ ಸಾಧ್ಯತೆ ಇದೆ.

ವಿಜಯ್ ಹಟ್ಟುಹಬ್ಬಕ್ಕೆ ಮಾಸ್ಟರ್ ಸಿನಿಮಾ

ವಿಜಯ್ ಹಟ್ಟುಹಬ್ಬಕ್ಕೆ ಮಾಸ್ಟರ್ ಸಿನಿಮಾ

ಜೂನ್ 22ಕ್ಕೆ ಮಾಸ್ಟರ್ ಸಿನಿಮಾವನ್ನು ರಿಲೀಸ್ ಮಾಡುವ ನಿರ್ಧಾರ ಮಾಡಲು ಕಾರಣ ದಳಪತಿ ವಿಜಯ್ ಹುಟ್ಟುಹಬ್ಬ. ಸಿನಿಮಾ ರಿಲೀಸ್ ಮಾಡೋಕೆ ಇದಕ್ಕಿಂತ ಉತ್ತಮ ಸಮಯ ಬೇಕಾಗಿಲ್ಲ ಎಂದು ಹುಟ್ಟುಹಬ್ಬದ ದಿನವೇ ರಿಲೀಸ್ ಮಾಡಲು ಪ್ಲಾನ್ ಮಾಡಿದೆ. ಹಾಗಾಗಿ ದಳಪತಿ ಅಭಿಮಾನಿಗಳಿಗೆ ಡಬಲ್ ಸಂಭ್ರಮವಾಗಿದೆ.

ಪ್ರೊಫೆಸರ್ ಪಾತ್ರದಲ್ಲಿ ವಿಜಯ್

ಪ್ರೊಫೆಸರ್ ಪಾತ್ರದಲ್ಲಿ ವಿಜಯ್

ಮಾಸ್ಟರ್ ಚಿತ್ರದಲ್ಲಿ ನಟ ವಿಜಯ್ ಕಾಲೇಜ್ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಚಿತ್ರದಿಂದ ಪೋಸ್ಟರ್ಸ್ ಮತ್ತು ಹಾಡುಗಳು ರಿಲೀಸ್ ಆಗಿವೆ. ಬಿಗಿಲ್ ಚಿತ್ರದ ನಂತರ ವಿಜಯ್ ಮಾಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ

ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ

ನಿರ್ದೇಶಕ ಕನಗರಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ವಿಜಯ್ ಗೆ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿಯರಾಗಿ ಮಾಳವಿಕಾ ಮೋಹನ್, ಆಂಡ್ರಿಯಾ ಜೆರಿಮಿಯಾ ಕಾಣಿಸಿಕೊಂಡಿದ್ದಾರೆ.

More from Filmibeat

English summary
Vijay starrer Master film will release on June 22 Vjay Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X