twitter
    For Quick Alerts
    ALLOW NOTIFICATIONS  
    For Daily Alerts

    ವಿಜಯ್ 'ಮಾಸ್ಟರ್' ಬಿಡುಗಡೆಗೆ ಹೊಸ ದಿನಾಂಕ ನಿಗದಿ: ಅಭಿಮಾನಿಗಳಿಗೆ ಡಬಲ್ ಸಂಭ್ರಮ

    |

    ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಇಳಯದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಕೂಡ ಒಂದು. ಈಗಾಗಲೆ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಮಾಸ್ಟರ್ ಏಪ್ರಿಲ್ 9ಕ್ಕೆ ತೆರೆಗೆ ಬರಬೇಕಿತ್ತು.

    ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ಲೆಕ್ಕಾಚಾರವೆ ತಲೆಕೆಳಗಾಗಿದ್ದು, ಮಾಸ್ಟರ್ ರಿಲೀಸ್ ಮುಂದಕ್ಕೆ ಹೋಗಿದೆ. ಮೇ 3ರವರೆಗೂ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಪರಿಸ್ಥಿತಿ ಹೀಗೆ ಇದ್ದರೆ ಮತ್ತೆ ಮುಂದುವರೆಯುವ ಸಾಧ್ಯತೆಯು ಇದೆ. ಆದರೂ ಮಾಸ್ಟರ್ ಸಿನಿಮಾತಂಡ ಹೊಸ ರಿಲೀಸ್ ಡೇಟ್ ಫಿಕ್ಸ್ ಮಾಡಿದೆ. ಹೌದು, ಬಹುನಿರೀಕ್ಷೆಯ ಮಾಸ್ಟರ್ ಜೂನ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಮುಂದೆ ಓದಿ..

    ಕೆನಡಾದಲ್ಲಿ ಸಿಲುಕಿರುವ ವಿಜಯ್ ಪುತ್ರ: ಮಗನ ಸುರಕ್ಷತೆಯ ಚಿಂತೆಯಲ್ಲಿ ದಳಪತಿಕೆನಡಾದಲ್ಲಿ ಸಿಲುಕಿರುವ ವಿಜಯ್ ಪುತ್ರ: ಮಗನ ಸುರಕ್ಷತೆಯ ಚಿಂತೆಯಲ್ಲಿ ದಳಪತಿ

    ಜೂನ್ 22ಕ್ಕೆ ಮಾಸ್ಟರ್ ರಿಲೀಸ್

    ಜೂನ್ 22ಕ್ಕೆ ಮಾಸ್ಟರ್ ರಿಲೀಸ್

    ಬಹು ನಿರೀಕ್ಷೆಯ ಮಾಸ್ಟರ್ ಸಿನಿಮಾ ಜೂನ್ 22ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೂನ್ ಅಷ್ಟೊತ್ತಿಗೆ ಲಾಕ್ ಡೌನ್ ಕೊನೆಯಾಗಲಿದ್ದು, ಚಿತ್ರಮಂದಿರಗಳು ಮತ್ತು ಮಾಲ್ ಗಳು ಓಪನ್ ಆಗುವ ಸಾಧ್ಯತೆ ಇದೆ. ಹಾಗಾಗಿ ಚಿತ್ರತಂಡ ಮಾಸ್ಟರ್ ಸಿನಿಮಾವನ್ನು ಜೂನ್ 22ಕ್ಕೆ ರಿಲೀಸ್ ಮಾಡುವ ಸಾಧ್ಯತೆ ಇದೆ.

    ವಿಜಯ್ ಹಟ್ಟುಹಬ್ಬಕ್ಕೆ ಮಾಸ್ಟರ್ ಸಿನಿಮಾ

    ವಿಜಯ್ ಹಟ್ಟುಹಬ್ಬಕ್ಕೆ ಮಾಸ್ಟರ್ ಸಿನಿಮಾ

    ಜೂನ್ 22ಕ್ಕೆ ಮಾಸ್ಟರ್ ಸಿನಿಮಾವನ್ನು ರಿಲೀಸ್ ಮಾಡುವ ನಿರ್ಧಾರ ಮಾಡಲು ಕಾರಣ ದಳಪತಿ ವಿಜಯ್ ಹುಟ್ಟುಹಬ್ಬ. ಸಿನಿಮಾ ರಿಲೀಸ್ ಮಾಡೋಕೆ ಇದಕ್ಕಿಂತ ಉತ್ತಮ ಸಮಯ ಬೇಕಾಗಿಲ್ಲ ಎಂದು ಹುಟ್ಟುಹಬ್ಬದ ದಿನವೇ ರಿಲೀಸ್ ಮಾಡಲು ಪ್ಲಾನ್ ಮಾಡಿದೆ. ಹಾಗಾಗಿ ದಳಪತಿ ಅಭಿಮಾನಿಗಳಿಗೆ ಡಬಲ್ ಸಂಭ್ರಮವಾಗಿದೆ.

    ವಿಜಯ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ವಾರ್: ಕೊರೊನಾ ನಡುವೆಯೂ ಟ್ವಿಟ್ಟರ್ ನಲ್ಲಿ ಟ್ರೆಂಡ್ವಿಜಯ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ವಾರ್: ಕೊರೊನಾ ನಡುವೆಯೂ ಟ್ವಿಟ್ಟರ್ ನಲ್ಲಿ ಟ್ರೆಂಡ್

    ಪ್ರೊಫೆಸರ್ ಪಾತ್ರದಲ್ಲಿ ವಿಜಯ್

    ಪ್ರೊಫೆಸರ್ ಪಾತ್ರದಲ್ಲಿ ವಿಜಯ್

    ಮಾಸ್ಟರ್ ಚಿತ್ರದಲ್ಲಿ ನಟ ವಿಜಯ್ ಕಾಲೇಜ್ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಚಿತ್ರದಿಂದ ಪೋಸ್ಟರ್ಸ್ ಮತ್ತು ಹಾಡುಗಳು ರಿಲೀಸ್ ಆಗಿವೆ. ಬಿಗಿಲ್ ಚಿತ್ರದ ನಂತರ ವಿಜಯ್ ಮಾಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

    ವಿಜಯ್ ಸೇತುಪತಿ 'ಮಾಸ್ಟರ್' ಸಿನಿಮಾ ಒಪ್ಪಿಕೊಂಡ ಕಾರಣ ಬಹಿರಂಗ ಪಡಿಸಿದ ದಳಪತಿವಿಜಯ್ ಸೇತುಪತಿ 'ಮಾಸ್ಟರ್' ಸಿನಿಮಾ ಒಪ್ಪಿಕೊಂಡ ಕಾರಣ ಬಹಿರಂಗ ಪಡಿಸಿದ ದಳಪತಿ

    ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ

    ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ

    ನಿರ್ದೇಶಕ ಕನಗರಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ವಿಜಯ್ ಗೆ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿಯರಾಗಿ ಮಾಳವಿಕಾ ಮೋಹನ್, ಆಂಡ್ರಿಯಾ ಜೆರಿಮಿಯಾ ಕಾಣಿಸಿಕೊಂಡಿದ್ದಾರೆ.

    English summary
    Vijay starrer Master film will release on June 22 Vjay Birthday.
    Thursday, April 16, 2020, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X