For Quick Alerts
  ALLOW NOTIFICATIONS  
  For Daily Alerts

  ದಾಖಲೆ ನಿರ್ಮಿಸಿದ ದಳಪತಿ ವಿಜಯ್ 'ಮಾಸ್ಟರ್' ಸಿನಿಮಾದ ಟೀಸರ್

  |

  ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟರ್ ಸಿನಿಮಾದ ಮಾಸ್ಟರ್ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ದಾಖಲೆ ನಿರ್ಮಿಸಿದೆ. ಮಾಸ್ಟರ್ ಸಿನಿಮಾದ ಅಪ್ ಡೇಟ್ ಗಾಗಿ ಅನೇಕ ತಿಂಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮಾಸ್ಟರ್ ತಂಡ ದೀಪಾವಳಿ ಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.

  ಮಾಸ್ಟರ್ ಟೀಸರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟ ವಿಜಯ್ ಇಲ್ಲಿ ಕುಡುಕ ಪ್ರೊಫೆಸರ್ ಆಗಿ ನಟಿಸಿದ್ದಾರೆ. ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡಿರುವ ವಿಜಯ್ ಲುಕ್ ಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಟೀಸರ್ ರಿಲೀಸ್ ಆಗಿ 16 ಗಂಟೆಯಲ್ಲೇ 1.6 ಮಿಲಿಯನ್ ಗಿಂತಲೂ ಅಧಿಕ ಲೈಕ್ಸ್ ಪಡೆದು ಕೊಂಡಿದೆ, ಜೊತೆಗೆ 16 ಮಿಲಿಯನ್ ಅಧಿಕ ವೀಕ್ಷಣೆ ಕಂಡಿದೆ. ಈ ಮೂಲಕ ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡ ಭಾರತೀಯ ಸಿನಿಮಾ ಎನ್ನುವ ಖ್ಯಾತಿ ಪಡೆದಿದೆ.

  ಈಡೇರಿದ ವಿಜಯ್ ಅಭಿಮಾನಿಗಳ ಆಸೆ: 'ಮಾಸ್ಟರ್' ಅವತಾರ ಅನಾವರಣಈಡೇರಿದ ವಿಜಯ್ ಅಭಿಮಾನಿಗಳ ಆಸೆ: 'ಮಾಸ್ಟರ್' ಅವತಾರ ಅನಾವರಣ

  ಸಾಮಾಜಿಕ ಜಾಲತಾಣದಲ್ಲಿ ಮಾಸ್ಟರ್ ಟೀಸರ್ ಟ್ರೆಂಡ್ ಸೃಷ್ಟಿ ಆಗಿದೆ. ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಮಾಸ್ಟರ್ ಟೀಸರ್ ಎಂದು ಬರೆದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ನಟ ವಿಜಯ್ ಎದುರು ವಿಲನ್ ಆಗಿ ಖ್ಯಾತ ನಟ ವಿಜಯ್ ಸೇತುಪತಿ ನಟಿಸಿದ್ದಾರೆ.

  ಸಿನಿಮಾದಲ್ಲಿ ಸಖತ್ ಆಕ್ಷನ್ ದೃಶ್ಯಗಳಿರುವುದು ಟೀಸರ್ ನಲ್ಲಿ ಕಂಡು ಬರುತ್ತಿದೆ. ವಿಜಯ್ ಹಾಗೂ ವಿಜಯ್ ಸೇತುಪತಿ ನಡುವಿನ ಆಕ್ಷನ್ ದೃಶ್ಯ ದೃಶ್ಯಗಳು ಅಭಿಮಾನಿಗಳಿಗೆ ಸಖತ್ ಕಿಕ್ ನೀಡುತ್ತಿದೆ.

  Vijay starrer Master movie Becomes Most Liked Teaser On YouTube In India
  ಕೊಹ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಮುಖಂಡ | Filmibeat Kannada

  ಅಂದಹಾಗೆ ಸಿನಿಮಾಗೆ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿಯಾಗಿ ಮಾಳವಿಕಾ ಮೋಹನ್ ಕಾಣಿಸಿಕೊಂಡಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಅರ್ಜುನ್ ದಾಸ್, ಗೌರಿ ಕೃಷ್ಣ, ರಮ್ಯಾ ಸುಬ್ರಹ್ಮಣ್ಯನ್, ಆಂಡ್ರೆಯಾ ಜರ್ಮಿಯಾ, ನಾಸರ್ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ.

  English summary
  Tamil Actor Vijay starrer Master movie becomes the most liked teaser on YouTube in India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X