ವಿಜಯ್ 'ಮಾಸ್ಟರ್' ಸಿನಿಮಾ ರಿಲೀಸ್ ಗೂ ಮೊದಲೇ ಲೀಕ್; ಶೇರ್ ಮಾಡದಂತೆ ನಿರ್ದೇಶಕರ ಮನವಿ
ಕೊರೊನಾ ಲಾಕ್ ಡೌನ್ ಬಳಿಕ ಮತ್ತು ಹೊಸ ವರ್ಷದ ಪ್ರಾರಂಭದಲ್ಲೇ ರಿಲೀಸ್ ಗೆ ರೆಡಿಯಾಗಿರುವ ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾ ವಿಜಯ್ ನಟನೆ ಮಾಸ್ಟರ್. ಹೌದು, ಜನವರಿ 13 ಪೊಂಗಲ್ ಹಬ್ಬದ ಪ್ರಯುಕ್ತ ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ.
Recommended Video
ಅನೇಕ ವಿಘ್ನಗಳ ನಡುವೆಯೂ ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗ ಬರುತ್ತಿದೆ. ಶೇ.50ಆಸದಲ್ಲೇ ಪ್ರೇಕ್ಷಕರಿಗೆ ಸಿನಿಮಾ ತೋರಿಸಲು ಮುಂದಾಗಿದೆ ಮಾಸ್ಟರ್ ತಂಡ. ಸಂಕಷ್ಟಗಳ ನಡುವೆಯೂ ಸಿನಿಮಾ ರಿಲೀಸ್ ಮಾಡುತ್ತಿರುವ ಚಿತ್ರತಂಡಕ್ಕೆ ಹ್ಯಾಕರ್ಸ್ ಗಳ ಕಾಟ ಶುರುವಾಗಿದೆ. ಇತ್ತೀಚಿಗೆ ಕನ್ನಡದ ಕೆಜಿಎಫ್-2 ಟೀಸರ್ ಲೀಕ್ ಆಗಿ, ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿತ್ತು. ಬಳಿಕ ಟೀಸರ್ ರಿಲೀಸ್ ಡೇಟ್ ಗಿಂತ ಮುಂಚಿತವಾಗಿ ಅಭಿಮಾನಿಗಳ ಮುಂದೆ ಇಡಬೇಕಾಯಿತು. ಇದೀಗ ಮಾಸ್ಟರ್ ಸಿನಿಮಾಗೂ ಹ್ಯಾಕರ್ಸ್ ಕಾಟ ಶುರುವಾಗಿರುವುದು ಸಿನಿಮಾರಂಗಕ್ಕೆ ದೊಡ್ಡ ತಲೆನೋವಾಗಿದೆ. ಮುಂದೆ ಓದಿ.

ಸಿನಿಮಾದ ಪ್ರಮುಖ ದೃಶ್ಯಗಳು ಲೀಕ್
ಸಿನಿಮಾ ರಿಲೀಸ್ ಗೂ ಮೊದಲೇ ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದ ಇಂಟ್ರುಡಕ್ಷನ್ ದೃಶ್ಯ ಸೇರಿದಂತೆ ಪ್ರಮುಖ ದೃಶ್ಯಗಳು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿನಿಮಾ ರಿಲೀಸ್ ಗೆ ಇನ್ನೇನು ಒಂದೇ ದಿನ ಬಾಕಿ ಇದೆ. ಆದರೆ ಆಗಲಿ ಲೀಕ್ ಮಾಡಿರುವುದು ಚಿತ್ರತಂಡಕ್ಕೆ ಬೇಸರತಂದಿದೆ.

ವಿಡಿಯೋ ಶೇರ್ ಮಾಡದಂತೆ ಚಿತ್ರತಂಡದ ಮನವಿ
ಚಿತ್ರತಂಡ ಈ ಬಗ್ಗೆ ಕ್ರಮಕೈಗೊಳ್ಳಲು ಮುಂದಾಗಿದೆ. ಸಿನಿಮಾದ ದೃಶ್ಯಗಳು ಲೀಕ್ ಆಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಸಿನಿಮಾತಂಡ ಸೋರಿಕೆಯಾದ ಕ್ಲಿಪ್ ಗಳನ್ನು ಶೇರ್ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಸಿನಿಮಾ ಲೀಕ್ ಆದ ಸೈಟ್ ಗಳನ್ನು ರಿಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ.

ನಿರ್ದೇಶಕ ಲೋಕೇಶ್ ಕನಗರಾಜ್ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಲೋಕೇಶ್ ಕನಗರಾಜ್, 'ಮಾಸ್ಚರ್ ಸಿನಿಮಾ 1.5 ವರ್ಷದಿಂದ ಕಷ್ಟಪಟ್ಟು ಸಿನಿಮಾ ಮಾಡಿದೆ. ನೀವೆಲ್ಲರೂ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡುತ್ತೀರಿ ಎಂದು ಭಾವಿಸುತ್ತೇನೆ. ಲೀಕ್ ಆದ ವಿಡಿಯೋವನ್ನು ಶೇರ್ ಮಾಡಬೇಡಿ. ಇನ್ನೊಂದು ದಿನ ಕಾಯಿರಿ. ಮಾಸ್ಟರ್ ನಿಮ್ಮ್ ಮುಂದೆ ಬರಲಿದೆ' ಎಂದು ಹೇಳಿದ್ದಾರೆ.

ಪೊಂಗಲ್ ಹಬ್ಬದ ಪ್ರಯುಕ್ತ ಬರ್ತಿದೆ ಸಿನಿಮಾ
ಪ್ರತಿದಿನ ಹೊಸ ಹೊಸ ಪ್ರೋಮೋಗಳನ್ನು ರಿಲೀಸ್ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದ ಮಾಸ್ಟರ್ ಸಿನಿಮಾ ಲೀಕ್ ಆಗಿರುವುದು ಇಡೀ ತಂಡಕ್ಕೆ ಬೇಸರತಂದಿದೆ. ಮಾಸ್ಟರ್ ಪೊಂಗಲ್ ಹಬ್ಬದ ಪ್ರಯುಕ್ತ ನಾಳೆ ರಿಲೀಸ್ ಆಗುತ್ತಿದೆ. ತಮಿಳು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ಸಿನಿಮಾ ರಿಲೀಸ್ ಆಗುತ್ತಿದ್ದೆ. ಚಿತ್ರದಲ್ಲಿ ದಳಪತಿ ವಿಜಯ್ ಎದುರು ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.


Click it and Unblock the Notifications











