ಚಿತ್ರಮಂದಿರದ ಬಳಿಕ ಒಟಿಟಿಯಲ್ಲಿ ವಿಜಯ್ 'ಮಾಸ್ಟರ್'; ಬಿಡುಗಡೆ ದಿನಾಂಕ ಇಲ್ಲಿದೆ

ದಳಪತಿ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ. ಕೊರೊನಾ ಬಳಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಮೊದಲ ಬಿಗ್ ಬಜೆಟ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಕೋಟಿ ಕೋಟಿ ಬಾಚಿಕೊಂಡಿರುವ ಮಾಸ್ಟರ್ ಈಗ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

ಮಾಸ್ಟರ್ ಸಿನಿಮಾ ರಿಲೀಸ್ ಆಗಿ ಎಂಟೇ ದಿನಕ್ಕೆ 200 ಕೋಟಿ ಕ್ಲಬ್ ಸೇರಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನಗಳಿಗೆ ಮಾತ್ರ ಅವಕಾಶವಿದ್ದರೂ ಸಹ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ ಕೆಲವೇ ದಿನಗಳಲ್ಲೇ ಈಗ ಒಟಿಟಿ ಪ್ರೇಕ್ಷರನ್ನು ರಂಜಿಸಲು ಸಜ್ಜಾಗಿದೆ. ಅಂದಹಾಗೆ ಮಾಸ್ಟರ್ ಆನ್ ಲೈನ್ ನಲ್ಲಿ ಇದೇ ತಿಂಗಳು ರಿಲೀಸ್ ಆಗುತ್ತಿದೆ.

ಜನವರಿ 13 ಪೊಂಗಲ್ ಹಬ್ಬಕ್ಕೆ 'ಮಾಸ್ಟರ್' ಬಿಡುಗಡೆ

ಜನವರಿ 13 ಪೊಂಗಲ್ ಹಬ್ಬಕ್ಕೆ 'ಮಾಸ್ಟರ್' ಬಿಡುಗಡೆ

ಅಂದಹಾಗೆ ಮಾಸ್ಟರ್ ಸಿನಿಮಾ ಜನವರಿ 13 ಪೊಂಗಲ್ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಸಿನಿಮಾ ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲೂ ಸಿನಿಮಾ ತೆರೆಗೆ ಬಂದಿದೆ. ವಿಶೇಷ ಎಂದರೆ ವಿಜಯ್ ಮಾಸ್ಟರ್ ಸಿನಿಮಾ ಹಿಂದಿಯಲ್ಲೂ ರಿಲೀಸ್ ಆಗಿದೆ.

ಅಮೆಜಾನ್ ಪ್ರೈಂ ನಲ್ಲಿ ಬರ್ತಿದೆ ಮಾಸ್ಟರ್

ಅಮೆಜಾನ್ ಪ್ರೈಂ ನಲ್ಲಿ ಬರ್ತಿದೆ ಮಾಸ್ಟರ್

ಮಾಸ್ಟರ್ ಸಿನಿಮಾ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗುತ್ತಿದೆ. ಅಮೆಜಾನ್ ಪ್ರೈಂ ಭಾರಿ ಮೊತ್ತಕ್ಕೆ ವಿಜಯ್ ನಟನೆಯ ಮಾಸ್ಟರ್ ಸಿನಿಮಾದ ಸ್ಟ್ರೀಮಿಂಗ್ ಹಕ್ಕನ್ನು ಖರೀದಿಸಿದೆ ಎನ್ನಲಾಗುತ್ತಿದೆ. ಇದೀಗ ಅಮೆಜಾನ್ ನಲ್ಲಿ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಸಿನಿಮಾ ಹಳತು ಎನಿಸಿಕೊಳ್ಳುವ ಮುನ್ನವೇ ಬಿಡುಗಡೆ ಮಾಡಿ ಲಾಭ ಮಾಡಲು ಯೋಚಿಸುತ್ತಿದೆ ಅಮೆಜಾನ್.

ಜನವರಿ 29ಕ್ಕೆ ಅಮೆಜಾನ್ ಪ್ರೈಂ ನಲ್ಲಿ ರಿಲೀಸ್

ಜನವರಿ 29ಕ್ಕೆ ಅಮೆಜಾನ್ ಪ್ರೈಂ ನಲ್ಲಿ ರಿಲೀಸ್

ಮಾಸ್ಟರ್ ಸಿನಿಮಾ ಇದೆ ತಿಂಗಳು ಜನವರಿ 29ಕ್ಕೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗುತ್ತಿದೆ. ಈ ಬಗ್ಗೆ ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಅಧಿಕೃತಗೊಳಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ 15 ದಿನಗಳಲ್ಲೇ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

Recommended Video

ಎಲ್ಲರ ಪ್ರಶ್ನೆಗೆ ಉತ್ತರಕೊಟ್ಟ ಐಂದ್ರಿತಾ | Filmibeat Kannada
ಲೋಕೇಶ್ ಕನಕರಾಜನ್ ನಿರ್ದೇಶನ

ಲೋಕೇಶ್ ಕನಕರಾಜನ್ ನಿರ್ದೇಶನ

ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಜೊತೆಗೆ ವಿಲನ್ ಆಗಿ ವಿಜಯ್ ಸೇತುಪತಿ ನಟಿಸಿದ್ದಾರೆ. ನಾಯಕಿಯಾಗಿ ಮಾಳವಿಕಾ ಮೋಹನನ್ ಇದ್ದಾರೆ. ಸಿನಿಮಾವನ್ನು ಲೋಕೇಶ್ ಕನಕರಾಜನ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಹಾಗೂ ವಿಜಯ್ ಸೇತುಪತಿ ನಟನೆ ಜುಗಲ್‌ಬಂಧಿ ಭಾರಿ ಮೆಚ್ಚುಗೆ ಗಳಿಸಿದೆ.

More from Filmibeat

English summary
Tamil Actor Vijay starrer Master movie release on amazon prime on January 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X