ಬಿಗ್ ಅನೌನ್ಸ್ ಮೆಂಟ್; ದಳಪತಿ ವಿಜಯ್ 'ಮಾಸ್ಟರ್' ಬಿಡುಗಡೆ ದಿನಾಂಕ ಘೋಷಣೆ
ದಳಪತಿ ವಿಜಯ್ ಅಭಿಮಾನಿಗಳು ವರ್ಷದಿಂದ ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ಹೌದು, ಮಾಸ್ಟರ್ ಸಿನಿಮಾಗಾಗಿ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಕೊನೆಗೂ ಮಾಸ್ಟರ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈ ವರ್ಷ ಏಪ್ರಿಲ್ ನಲ್ಲೇ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ನಿಂದ ಈ ವರ್ಷ ಸಿನಿಮಾ ರಿಲೀಸ್ ಸಾಧ್ಯವಾಗಿರಲಿಲ್ಲ.
ಇದೀಗ ನಿರೀಕ್ಷೆಯಂತೆ ಸಿನಿಮಾ ಮುಂದಿನ ವರ್ಷ ಜನವರಿಗೆ ರಿಲೀಸ್ ಆಗುತ್ತಿದೆ. ಜನವರಿ 13 ಪೊಂಗಲ್ ಹಬ್ಬದ ವಿಶೇಷವಾಗಿ ಮಾಸ್ಟರ್ ಸಿನಿಮಾವನ್ನು ರಿಲೀಸ್ ಆಗುತ್ತಿದೆ ಎಂದು ಸಿನಿಮಾತಂಡ ಘೋಷಣೆ ಮಾಡಿದೆ. ಈ ಸುದ್ದಿ ಬ್ರೇಕ್ ಆಗುತ್ತಿದ್ದಂತೆ ವಿಜಯ್ ಅಭಿಮಾನಿಗಳು ಕುಣಿದುಕಪ್ಪಳಿಸುತ್ತಿದ್ದಾರೆ. ಅಂದಹಾಗೆ ಮಾಸ್ಟರ್ ಸಿನಿಮಾ ಭಾರಿ ನಿರೀಕ್ಷೆ ಮತ್ತು ಕಾತರದೊಂದಿಗೆ ತೆರೆಗೆ ಬರುತ್ತಿದೆ. ಮುಂದೆ ಓದಿ..

ಹೊಸ ವರ್ಷಕ್ಕೆ ಬರ್ತಿರುವ ಮೊದಲ ಸ್ಟಾರ್ ನಟನ ಸಿನಿಮಾ
ಕೊರೊನಾ ಲಾಕ್ ಡೌನ್ ಬಳಿಕ ಹಾಗೂ ಹೊಸ ವರ್ಷಕ್ಕೆ ರಿಲೀಸ್ ಆಗುತ್ತಿರುವ ಮೊದಲ ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾ ಇದಾಗಿದೆ. ಈಗಾಗಲೇ ಕೆಲವು ಸಿನಿಮಾಗಳು ಚಿತ್ರಮಂದಿರದ ಅಂಗಳಕ್ಕೆ ಬಂದಿವೆ. ಆದರೆ ಕೊರೊನಾ ನಿಯಮದ ಪ್ರಕಾರ ಚಿತ್ರಮಂದಿರಗಳಲ್ಲಿ ಕೆವಲ 50% ಮಾತ್ರ ಅವಕಾಶ ನೀಡಲಾಗಿದೆ. ಹಾಗಾಗಿ 100% ಪ್ರೇಕ್ಷಕರಿಗೆ ಅವಕಾಶ ಕೊಡುವವರೆಗೂ ದೊಡ್ಡ ಬಜೆಟ್ ನ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಆದರೆ ಮಾಸ್ಟರ್ ಸಿನಿಮಾ ಧೈರ್ಯವಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.

ಸಿಎಂ ಭೇಟಿಯಾಗಿದ್ದ ವಿಜಯ್
ಇನ್ನೂ ಸಿನಿಮಾ ರಿಲೀಸ್ ವಿಚರವಾಗಿ ನಟ ವಿಜಯ್ ಇತ್ತೀಚಿಗಷ್ಟೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ವಿಜಯ್ ಮತ್ತು ಸಿಎಂ ನಡುವೆ ನಡೆದ ಮಾತುಕತೆ ಬಹಿರಂಗವಾಗಿಲ್ಲ. ಸಿಎಂ ಭೇಟಿಯ ಬಳಿಕ ಸಿನಿಮಾ ಡೇಟ್ ಅನೌನ್ಸ್ ಆಗಿರುವುದು ಅಚ್ಚರಿ ಮೂಡಿಸಿದೆ.

ಜನವರಿ 7ರಿಂದ ಮುಂಗಡ ಟಿಕೆಟ್ ಬುಕ್ಕಿಂಗ್
ಇನ್ನೂ ಮೂಲಗಳ ಪ್ರಕಾರ ಮಾಸ್ಟರ್ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ. ಜನವರಿ 7ರಿಂದ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಸದ್ಯ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಸಿನಿಮಾತಂಡ ಮುಂಗಡ ಬುಕ್ಕಿಂಗ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.
Recommended Video

ಕನ್ನಡದಲ್ಲಿ ಬರ್ತಿಲ್ಲ ಮಾಸ್ಟರ್ ಸಿನಿಮಾ
ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಆದರೆ ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ. ಈ ಹಿಂದೆ ಕನ್ನಡದಲ್ಲೂ ತೆರೆಗೆ ಬರಲಿದೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಇಂದು ಅನೌನ್ಸ್ ಮಾಡಿರುವ ಪೋಸ್ಟರ್ ನಲ್ಲಿ ಕನ್ನಡ ಪೋಸ್ಟರ್ ಇಲ್ಲ. ಮಾಸ್ಟರ್ ಸಿನಿಮಾವನ್ನು ಕನ್ನಡದಲ್ಲಿ ನೋಡಬಯಸುವವರಿಗೆ ಇದು ನಿರಾಸೆ ಮೂಡಿಸಿದೆ.


Click it and Unblock the Notifications











