ವಿಡಿಯೋ ವೈರಲ್: ವಿಜಯ್ 'ಮಾಸ್ಟರ್' ಸಿನಿಮಾದ ಬೈಕ್ ಸ್ಟಂಟ್ ದೃಶ್ಯ ಲೀಕ್
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಇಳಯದಳಪತಿ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ ಕೂಡ ಒಂದು. ಈಗಾಗಲೆ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಮಾಸ್ಟರ್ ಅಂದುಕೊಂಡಂತೆ ಆಗಿದ್ದರೆ ಈಗಾಗಲೆ ರಿಲೀಸ್ ಆಗಿ ಬಾಕ್ಸ್ ಆಫೀಸ್ ಲೂಟಿ ಮಾಡಬೇಕಿತ್ತು.
Recommended Video
ಆದರೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಮೂಲಗಳ ಪ್ರಕಾರ ಸಿನಿಮಾ ದೀಪಾಳಿಗೆ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸಿನಿಮಾದ ಬಗ್ಗೆ ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗುತ್ತಲೆ ಇದೆ. ಸಿನಿಮಾದ ಬಗ್ಗೆ ಕೇಳಿ ಬರುತ್ತಿರುವ ಪಾಸಿಟಿವ್ ಟಾಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಈ ನಡುವೆ ಈಗ ಚಿತ್ರದ ಬೈಕ್ ಸ್ಟಂಟ್ ದೃಶ್ಯವೊಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ..

ಬೈಕ್ ಸಾಹಸ ದೃಶ್ಯ
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ನಟ ವಿಜಯ್ ಕೆಂಪು ಬಣ್ಣದ ಬೈಕ್ ಮೇಲೆ ಕುಳಿತು ಸ್ಟಂಟ್ ಮಾಡುವ ವಿಡಿಯೋ ಲೀಕ್ ಆಗಿದೆ. ಕ್ಯಾಮರಾಗೆ ಪೋಸ್ ನೀಡುತ್ತ ಚೇಸ್ ಮಾಡುತ್ತಿರುವ ದೃಶ್ಯ ಇದಾಗಿದ್ದು, ಸುತ್ತಲು ಜನ ಶೂಟಿಂಗ್ ಅನ್ನು ವೀಕ್ಷಿಸುತ್ತಿದ್ದಾರೆ. ಈ ವಿಡಿಯೋ ಮಾಸ್ಟರ್ ಸಿನಿಮಾದ ಕ್ಲೈಮ್ಯಾಕ್ಸ್ ವಿಡಿಯೋ ಎಂದು ಹೇಳಲಾಗುತ್ತಿದೆ.
ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ
ಇದು ನಿಜಕ್ಕೂ ಮಾಸ್ಟರ್ ಸಿನಿಮಾದ ವಿಡಿಯೋನಾ ಎನ್ನುವುದು ಅನೇಕರಿಗೆ ಅನುಮಾನ ಮೂಡಿಸಿದೆ. ಆದರೆ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಳಪತಿ ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.

ಚಿತ್ರದಲ್ಲಿ ಸಾಕಷ್ಟು ರೋಮಾಂಚನಕಾರಿ ದೃಶ್ಯಗಳಿವೆ
ಮಾಸ್ಟರ್ ಸಿನಿಮಾದ ಬಗ್ಗೆ ಮತ್ತು ವಿಜಯ್ ಪಾತ್ರದ ಬಗ್ಗೆ ನಟ ಶಾಂತಾನು ಭಾಗ್ಯರಾಜ್ ಇತ್ತೀಚಿಗೆ ಮಾತನಾಡಿ ವಿಜಯ್ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸಂಪೂರ್ಣ ವಿಭಿನ್ನವಾದ ವಿಜಯ್ ಅವರನ್ನು ನೋಡಿರುವುದಾಗಿ ಹೇಳಿದ್ದಾರೆ. ವಿಜಯ್ ಕಳೆದೆಲ್ಲ ಸಿನಿಮಾಗಳಲ್ಲಿ ಮಾಡಿರುವ ಪಾತ್ರಕ್ಕಿಂತ ಈ ಪಾತ್ರ ವಿಭಿನ್ನ ಮತ್ತು ಅದ್ಭುತವಾಗಿದೆ ಎಂದಿದ್ದಾರೆ. ಜೊತೆಗೆ ಚಿತ್ರದಲ್ಲಿ ಸಾಕಷ್ಟು ರೋಮಾಂಚನಕಾರಿ ದೃಶ್ಯಗಳಿವೆ ಎಂದು ಹೇಳಿ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ದೀಪಾವಳಿಗೆ ಮಾಸ್ಟರ್ ರಿಲೀಸ್ ಸಾಧ್ಯತೆ
ಜೂನ್ 22 ವಿಜಯ್ ಹುಟ್ಟುಹಬ್ಬಕ್ಕೆ ಮಾಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಹುಟ್ಟುಹಬ್ಬದ ಗಿಫ್ಟ್ ನೀಡಲು ಸಿದ್ಧವಾಗಿತ್ತು. ಆದರೆ ಪರಿಸ್ಥಿತಿ ಇನ್ನೂ ಸುಧಾರಿಸದ ಕಾರಣ ರಿಲೀಸ್ ಡೇಟ್ ಅನ್ನು ಮತ್ತೆ ಮುಂದಕ್ಕೆ ಹಾಕಿದೆ ಚಿತ್ರತಂಡ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಮಾಸ್ಟರ್ ಈ ವರ್ಷ ದೀಪಾವಳಿಗೆ ಬಿಡುಗಡೆ ಮಾಡಲು ಪ್ಲಾನ್ ಇದೆ.


Click it and Unblock the Notifications











