ಕರಾವಳಿಯಲ್ಲೂ ತಮಿಳು ಚಿತ್ರದ ಸೌಂಡ್; ಮಂಗಳೂರಿನಲ್ಲಿ 'ವಾರಿಸು' ಬಿಗ್ ರಿಲೀಸ್!
ತಮಿಳು ಹಾಗೂ ತೆಲುಗು ಚಿತ್ರಗಳು ಬಿಡುಗಡೆಗೊಂಡಾಗ ಸಾಮಾನ್ಯವಾಗಿ ಬೆಂಗಳೂರು ಹಾಗೂ ಕರ್ನಾಟಕ ಮತ್ತು ತೆಲುಗು ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವ ಸುದ್ದಿಗಳನ್ನು ಕೇಳಿರುತ್ತೇವೆ. ಈ ನಗರಗಳನ್ನು ಹೊರತುಪಡಿಸಿ ಮೈಸೂರು ಹಾಗೂ ಇನ್ನಿತರೆ ದೊಡ್ಡ ನಗರಗಳಲ್ಲಿಯೂ ಪರಭಾಷಾ ಚಿತ್ರಗಳಿಗೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳು ಆಯೋಜನೆಗೊಳ್ಳುವುದು ಕಾಮನ್.
ಆದರೆ ಕರಾವಳಿಗೂ ತಮಿಳು ಚಿತ್ರದ ಹವಾ ಮುಟ್ಟಿದೆ. ಈ ವರ್ಷದ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಳ್ಳುತ್ತಿರುವ ವಿಜಯ್ ನಟನೆಯ ವಾರಿಸು ಚಿತ್ರಕ್ಕೆ ಮಂಗಳೂರಿನಲ್ಲಿ ಬಿಡುಗಡೆ ದಿನವೇ ಬರೋಬ್ಬರಿ 30 ಪ್ರದರ್ಶನಗಳು ಆಯೋಜನೆಗೊಂಡು ಬುಕಿಂಗ್ ಓಪನ್ ಆಗಿದೆ. ಹೌದು, ಜಿಲ್ಲೆಯ ಎರಡು ಭಾರತ್ ಸಿನಿಮಾಸ್‌ನಲ್ಲಿ 15 ಪ್ರದರ್ಶನಗಳು ( ಮಂಗಳೂರು ಹಾಗೂ ಪಡುಬಿದ್ರಿ ), ಸುರತ್ಕಲ್‌ನ ಸಿನಿ ಗ್ಯಾಲಕ್ಸಿಯಲ್ಲಿ 9 ಪ್ರದರ್ಶನಗಳು ಹಾಗೂ ಸುಚಿತ್ರಾ ಪ್ರಭಾತ್ ಚಿತ್ರಮಂದಿರದಲ್ಲಿ 6 ಪ್ರದರ್ಶನಗಳು ಸೇರಿದಂತೆ ಒಟ್ಟು 30 ಪ್ರದರ್ಶನಗಳ ಮುಂಗಡ ಬುಕಿಂಗ್ ಆರಂಭಗೊಂಡಿದೆ.

ಹೀಗೆ ವಾರಿಸು ಚಿತ್ರ ಇಷ್ಟು ದೊಡ್ಡ ಸಂಖ್ಯೆಯ ಚಿತ್ರಮಂದಿರಗಳನ್ನು ಪಡೆದುಕೊಂಡಿದ್ದರೆ, ವಾರಿಸು ಎದುರಾಳಿ ಎಂದೇ ಪರಿಗಣಿಸಲಾಗಿರುವ ಅತ್ತ ಅಜಿತ್ ಕುಮಾರ್ ನಟನೆಯ ತುನಿವು ಸಹ ಇದೇ ದಿನ ಬಿಡುಗಡೆಗೊಳ್ಳುತ್ರಿದ್ದು, ಸುರತ್ಕಲ್‌ನ ಸಿನಿ ಗ್ಯಾಲಕ್ಸಿ ಚಿತ್ರಮಂದಿರದಲ್ಲಿ 6 ಪ್ರದರ್ಶನ ಹಾಗೂ ಸುಚಿತ್ರ ಪ್ರಭಾತ್ ಚಿತ್ರಮಂದಿರದಲ್ಲಿ 6 ಪ್ರದರ್ಶನ ಸೇರಿದಂತೆ ಒಟ್ಟು ಹನ್ನೆರಡು ಪ್ರದರ್ಶನಗಳ ಮುಂಗಡ ಬುಕಿಂಗ್ ತೆರೆದಿದೆ. ಇನ್ನು ತುನಿವು ಚಿತ್ರಕ್ಕೆ ಭಾರತ್ ಸಿನಿಮಾಸ್ ಬುಕಿಂಗ್ ಆರಂಭಗೊಳ್ಳಬೇಕಿದೆ.
ಇನ್ನು ಈ ಎರಡೂ ಚಿತ್ರಗಳೂ ಸೇರಿದಂತೆ ಮಂಗಳೂರಿನಲ್ಲಿ ಐವತ್ತಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಳ್ಳಲಿದ್ದು, ಆ ವಾರ ಬಿಡುಗಡೆಯಾಗಲಿರುವ ಇತರೆ ಚಿತ್ರಗಳಿಗೆ ಪೆಟ್ಟು ಬೀಳುವುದಂತೂ ಖಚಿತ.


Click it and Unblock the Notifications











