ಬೆಂಗಳೂರಿನಲ್ಲಿ 2ನೇ ದಿನಕ್ಕೆ 291 ಶೋ ಕಳೆದುಕೊಂಡು ಮುಗ್ಗರಿಸಿದ ವಾರಿಸು; ತುನಿವು ಸೇಫ್!

ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಳ್ಳುತ್ತಿರುವ ಸ್ಟಾರ್ ನಟರ ಚಿತ್ರಗಳ ನಡುವೆ ಥಿಯೇಟರ್ ವಾರ್ ಜೋರಾಗಿಯೇ ಇದೆ. ಬಿಡುಗಡೆಯಾದ ದಿನ ಹೆಚ್ಚೆಚ್ಚು ಚಿತ್ರಮಂದಿರಗಳನ್ನು, ಹೆಚ್ಚೆಚ್ಚು ಶೋಗಳನ್ನು ಪಡೆದುಕೊಂಡು ಆದಷ್ಟು ಗಳಿಕೆಯನ್ನು ಮಾಡಿಕೊಳ್ಳಬಿಡಬೇಕೆಂಬ ಉದ್ದೇಶ ನಿರ್ಮಾಪಕರದ್ದು. ಅದರಲ್ಲೂ ಈಗ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವುದರಿಂದ ಭಾಷೆಗಳನ್ನು ಲೆಕ್ಕಿಸದೇ ಚಿತ್ರಗಳನ್ನು ವೀಕ್ಷಕರು ಚಿತ್ರಗಳನ್ನು ವೀಕ್ಷಿಸುತ್ತಿದ್ದು, ಮೊದಲಿಗಿಂತ ಈಗ ಚಿತ್ರಗಳ ರೀಚ್ ಹೆಚ್ಚಿದೆ.

ಹೀಗಾಗಿ ಈ ಬಾರಿಯ ಸಂಕ್ರಾಂತಿಗೆ ತೆರೆ ಕಾಣುತ್ತಿರುವ ಚಿತ್ರಗಳು ತಮ್ಮ ರಾಜ್ಯಗಳಲ್ಲದೇ ಪರ ರಾಜ್ಯಗಳಲ್ಲಿಯೂ ದೊಡ್ಡ ಸಂಖ್ಯೆಯಲ್ಲಿಯೇ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿವೆ. ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರಿರುವ ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಹೆಚ್ಚೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿವೆ. ಮೊದಲಿಗೆ ಒಂದೇ ದಿನ ಬಿಡುಗಡೆಯಾಗಿ ಪೈಪೋಟಿಗೆ ಬಿದ್ದಿದ್ದ ತಮಿಳಿನ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳೆರಡೂ ಸೇರಿ ಬೆಂಗಳೂರಿನಲ್ಲಿ ಬಿಡುಗಡೆಯ ದಿನ 1200ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿದ್ದವು.

ತುನಿವುಗಿಂತ ವಾರಿಸು ಚಿತ್ರ ಮೊದಲ ದಿನ ಬೆಂಗಳೂರಿನಲ್ಲಿ ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು. ಆದರೆ ವಾರಿಸು ಚಿತ್ರದ ಈ ಅಬ್ಬರ ಎರಡನೇ ದಿನಕ್ಕೆ ಮಂಕಾಗಿದೆ. ಮೊದಲ ದಿನ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ಕಂಡಿದ್ದ ವಾರಿಸು ಚಿತ್ರ ಎರಡನೇ ದಿನಕ್ಕೆ 300ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ. ಹಾಗಿದ್ದರೆ ಮೊದಲ ದಿನ ಹಾಗೂ ಎರಡನೇ ದಿನ ವಾರಿಸು ಹಾಗೂ ತುನಿವು ಚಿತ್ರಗಳು ಬೆಂಗಳೂರಿನಲ್ಲಿ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡವು ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ.

ಎರಡನೇ ದಿನ ವಾರಿಸುಗೆ ಹಿನ್ನಡೆ

ಎರಡನೇ ದಿನ ವಾರಿಸುಗೆ ಹಿನ್ನಡೆ

ಬಿಡುಗಡೆಯ ದಿನ ( ಜನವರಿ 11 ) ಬೆಂಗಳೂರಿನಲ್ಲಿ ಬರೋಬ್ಬರಿ 757 ಪ್ರದರ್ಶನಗಳನ್ನು ಪಡೆದುಕೊಂಡು ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ಅಬ್ಬರಿಸಿದ್ದ ವಾರಿಸು ಇಂದು ( ಎರಡನೇ ದಿನ, ಜನವರಿ 12 ) ಬೆಂಗಳೂರಿನಲ್ಲಿ 466 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ಮೂಲಕ ಮೊದಲ ದಿನಕ್ಕಿಂತ ಎರಡನೇ ದಿನ ವಾರಿಸು 291 ಪ್ರದರ್ಶನಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.

ತುನಿವು ಪಡೆದುಕೊಂಡ ಪ್ರದರ್ಶನಗಳೆಷ್ಟು?

ತುನಿವು ಪಡೆದುಕೊಂಡ ಪ್ರದರ್ಶನಗಳೆಷ್ಟು?

ವಾರಿಸು ಬೆಂಗಳೂರಿನಲ್ಲಿ ಎರಡನೇ ದಿನ ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನಗಳನ್ನು ಕಳೆದುಕೊಂಡರೆ ಅಜಿತ್ ನಟನೆಯ ತುನಿವು ಹೆಚ್ಚೇನೂ ಪ್ರದರ್ಶನಗಳನ್ನು ಕಳೆದುಕೊಂಡಿಲ್ಲ. ಬಿಡುಗಡೆಯ ದಿನ ( ಜನವರಿ 11 ) ಬೆಂಗಳೂರಿನಲ್ಲಿ 568 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ತುನಿವು ಇಂದು ( ಎರಡನೇ ದಿನ, ಜನವರಿ 12 ) ಬೆಂಗಳೂರಿನಲ್ಲಿ 397 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ಮೂಲಕ ಮೊದಲ ದಿನಕ್ಕಿಂತ ಎರಡನೇ ದಿನ ತುನಿವು 171 ಪ್ರದರ್ಶನಗಳನ್ನು ಕಳೆದುಕೊಂಡಿದೆ. ಈ ಮೂಲಕ ವಾರಿಸುಗೆ ಹೋಲಿಸಿದರೆ ತುನಿವು ಬೆಂಗಳೂರಿನಲ್ಲಿ ಎರಡನೇ ದಿನ ಕಡಿಮೆ ಪ್ರದರ್ಶನಗಳನ್ನು ಕಳೆದುಕೊಂಡಿದೆ ಎನ್ನಬಹುದು.

ವಾರಿಸುಗೆ ಹೊಡೆತ ಕೊಟ್ಟದ್ದು ಬಾಲಯ್ಯ

ವಾರಿಸುಗೆ ಹೊಡೆತ ಕೊಟ್ಟದ್ದು ಬಾಲಯ್ಯ

ಇನ್ನು ವಾರಿಸು ಚಿತ್ರ ಮೊದಲ ದಿನದಿಂದ ಎರಡನೇ ದಿನಕ್ಕೆ ಈ ಮಟ್ಟಿಗಿನ ಪ್ರದರ್ಶನಗಳನ್ನು ಕಳೆದುಕೊಳ್ಳಲು ಕಾರಣ ಇಂದು ( ಜನವರಿ 12 ) ತೆಲುಗಿನ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಬಿಡುಗಡೆಗೊಂಡಿರುವುದು. ಹೌದು, ಬಾಲಯ್ಯ ನಟನೆಯ ವೀರಸಿಂಹ ರೆಡ್ಡಿ 406 ಪ್ರದರ್ಶನಗಳನ್ನು ಪಡೆದುಕೊಂಡಿರುವುದರಿಂದ ಬೆಂಗಳೂರಿನಲ್ಲಿ ವಾರಿಸು ಹಾಗೂ ತುನಿವು ತಮ್ಮ ಪ್ರದರ್ಶನಗಳನ್ನು ಕಳೆದುಕೊಂಡಿವೆ.

ಕರ್ನಾಟಕದಲ್ಲಿ ಹೆಚ್ಚು ಗಳಿಸಿದ್ದು ವಾರಿಸು

ಕರ್ನಾಟಕದಲ್ಲಿ ಹೆಚ್ಚು ಗಳಿಸಿದ್ದು ವಾರಿಸು

ಇದು ಪ್ರದರ್ಶನಗಳ ಲೆಕ್ಕಾಚಾರವಾದರೆ ರಾಜ್ಯಾದ್ಯಂತ ಬಿಡುಗಡೆಯ ದಿನ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನಿಸಿಕೊಂಡಿದೆ ವಿಜಯ್ ನಟನೆಯ ವಾರಿಸು. ಹೌದು, ವಿಜಯ್ ನಟನೆಯ ವಾರಿಸು ಚಿತ್ರ ಮೊದಲ ದಿನ ಕರ್ನಾಟಕದಲ್ಲಿ 5.65 ಕೋಟಿ ಗಳಿಕೆ ಮಾಡಿದ್ದು, ತುನಿವು ಚಿತ್ರ 4.77 ಕೋಟಿ ಗಳಿಸಿದೆ. ಹೀಗೆ ಕಲೆಕ್ಷನ್ ವಿಚಾರದಲ್ಲಿ ವಾರಿಸು ಮೊದಲ ದಿನ ಗೆದ್ದರೂ ಸಹ ಎರಡನೇ ದಿನ ಪ್ರದರ್ಶನಗಳನ್ನು ಕಳೆದುಕೊಂಡು ಮುಗ್ಗರಿಸಿದೆ. ಇನ್ನು ಎರಡನೇ ದಿನ ಬೆಂಗಳೂರಿನಲ್ಲಿ ವಾರಿಸು ಚಿತ್ರಕ್ಕಿಂತ ತುನಿವು ಚಿತ್ರದ ಬುಕಿಂಗ್ ಚೆನ್ನಾಗಿದೆ.

More from Filmibeat

English summary
Vijay starrer Varisu lost 291 shows on 2nd day in Bengaluru; Thunivu is in safe zone. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X