ಅಜಿತ್ ಹುಟ್ಟುಹಬ್ಬದಂದು ದಳಪತಿ ವಿಜಯ್ ಟ್ರೆಂಡ್: ಮುಂದುವರೆದ ಅಭಿಮಾನಿಗಳ ವಾರ್

ಕಾಲಿವುಡ್ ನಲ್ಲಿ ನಟ ಅಜಿತ್ ಮತ್ತು ದಳಪತಿ ವಿಜಯ್ ಅಭಿಮಾನಿಗಳ ನಡುವೆ ಆಗಾಗ ವಾರ್ ಆಗುತ್ತಿರುತ್ತೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿತ್ತಾಡಿಕೊಳ್ಳುತ್ತಿರುತ್ತಾರೆ. ಅಜಿತ್ ಮತ್ತು ವಿಜಯ್ ಇಬ್ಬರು ಸ್ನೇಹಿತರು, ಇತ್ತೀಚಿಗೆ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ವಿಜಯ್, ಗೆಳೆಯ ಅಜಿತ್ ಹಾಗೆ ಡ್ರೆಸ್ ಮಾಡಿಕೊಂಡು ಬಂದಿದ್ದೀನಿ ಅಂತ ಹೇಳಿ ಅಚ್ಚರಿ ಮೂಡಿಸಿದ್ದರು. ಆದರೆ ಅಭಿಮಾನಿಗಳು ಮಾತ್ರ ಸದಾ ಜಗಳವಾಡಿಕೊಳ್ಳುತ್ತಿರುತ್ತಾರೆ.

Recommended Video

I request you please don't go to your native place : Daali Dhananjaya | Filmibeat Kannada

ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಕಿತ್ತಾಡಿಕೊಂಡು ತಣ್ಣಗಾಗಿದ್ದ ಅಭಿಮಾನಿಗಳು ಈಗ ಮತ್ತೆ ವಾರ್ ಶುರು ಮಾಡಿದ್ದಾರೆ. ಮೇ 1 ತಲಾ ಅಜಿತ್ ಹುಟ್ಟುಹಬ್ಬ. ಕೊರೊನಾ ಲಾಕ್ ಡೌನ್ ಪರಿಣಾಮ ಅಭಿಮಾನಿಗಳು ಅಜಿತ್ ಮನೆ ಬಳಿ ಹೋಗಿ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಇತ್ತ ವಿಜಯ್ ಅಭಿಮಾನಿಗಳು ಸಹ ದಿಢೀರನೆ ವಿಜಯ್ ಹೆಸರನ್ನು ಟ್ರೆಂಡ್ ಮಾಡಿದ್ದಾರೆ. ಮುಂದೆ ಓದಿ...

#HBDAjith ಟ್ರೆಂಡ್

#HBDAjith ಟ್ರೆಂಡ್

ಮೇ 1 ತಲಾ ಅಜಿತ್ ಗೆ ಹುಟ್ಟು ಹಬ್ಬದ ಸಂಭ್ರಮ. ಕಾರ್ಮಿಕರ ದಿನಾಚರಣೆ ದಿನ ಹುಟ್ಟಿದ್ದ ಅಜಿತ್ ಗೆ ಅಭಿಮಾನಿಗಳು ಸಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ವಿಶ್ ಮಾಡಿ ಸಂತಸ ಪಡುತ್ತಿದ್ದಾರೆ. ಜೊತೆಗೆ ಟ್ವಿಟ್ಟರ್ ನಲ್ಲಿ #HBDAjith ಎಂದು ಟ್ರೆಂಡ್ ಮಾಡಲಾಗಿದೆ.

ವಿಜಯ್ ಹೆಸರು ಟ್ರೆಂಡ್

ವಿಜಯ್ ಹೆಸರು ಟ್ರೆಂಡ್

ನಟ ಅಜಿತ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರೆ. ಎಲ್ಲರೂ ಅಜಿತ್ ಗೆ ವಿಶ್ ಮಾಡುತ್ತಿದ್ದಾರೆ. ಆದರೆ ಟ್ವಿಟ್ಟರ್ ನಲ್ಲಿ ವಿಜಯ್ ಹೆಸರು ಟ್ರೆಂಡ್ ಆಗಿದೆ. ವಿಜಯ್ ಫೇಸ್ ಆಫ್ ದಿ ಕಾಲಿವುಡ್ ಎಂದು ಅಭಿಮಾನಿಗಳು ಟ್ರೆಂಡ್ ಮಾಡಿದ್ದಾರೆ. VijayFaceOfKollywood ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಮಾಡಿದ್ದಾರೆ.

ಕಾರ್ಮಿಕರ ದಿನಾಚರಣೆ ಆದರು ವಿಜಯ್ ಟ್ರೆಂಡ್ ಆಗಿದ್ದೇಕೆ?

ಕಾರ್ಮಿಕರ ದಿನಾಚರಣೆ ಆದರು ವಿಜಯ್ ಟ್ರೆಂಡ್ ಆಗಿದ್ದೇಕೆ?

ವಿಜಯ್ ಅಭಿಮಾನಿಗಳು ದಿಢೀರನೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಲು ಪ್ರಾರಂಭಿಸಿದ್ದು, ವಿಜಯ್ ಹೆಸರು ಎರಡನೇ ಸ್ಥಾನದಲ್ಲಿತ್ತು. ಅಜಿತ್ ಹೆಸರು ಟ್ರೆಂಡ್ ಆಗುತ್ತಿದ್ದಂತೆ ವಿಜಯ್ ಅಭಿಮಾನಿಗಳು ಟ್ರೆಂಡ್ ಮಾಡಲು ಪ್ರಾರಂಬಿಸಿದ್ದಾರೆ. 2 ಮಿಲಿಯನ್ ಗೂ ಅಧಿಕ ಟ್ವೀಟ್ ಮಾಡುವ ಮೂಲಕ ಟ್ವಿಟ್ಟರ್ ನಲ್ಲಿ ವಿಜಯ್ ಟ್ರೆಂಡಿಂಗ್ ಎರಡನೇ ಸ್ಥಾನದಲ್ಲಿತ್ತು. ಕಾರ್ಮಿಕರ ದಿನಾಚರಣೆ ಇದ್ದರೂ ವಿಜಯ್ ಹೆಸರು ಟ್ರೆಂಡ್ ಆಗಿರುವುದು ಅಚ್ಚರಿ ಮೂಡಿಸಿದೆ.

ವಿಜಯ್ ಫೋಟೋ, ವಿಡಿಯೋ ಶೇರ್ ಮಾಡುತ್ತಿರುವ ಅಭಿಮಾನಿಗಳು

ವಿಜಯ್ ಫೋಟೋ, ವಿಡಿಯೋ ಶೇರ್ ಮಾಡುತ್ತಿರುವ ಅಭಿಮಾನಿಗಳು

ವಿಜಯ್ ಚಿತ್ರೀಕರಣದಲ್ಲಿ ಭಾಗಿಯಾದ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ತಮಿಳುನಾಡು ಮಾತ್ರವಲ್ಲ ಎಲ್ಲಾ ಕಡೆ ವಿಜಯ್ ಕ್ರೇಜ್ ಹೇಗಿದೆ ನೋಡಿ ಎಂದು, ಅಭಿಮಾನಿಗಳು ವಿಜಯ್ ನನ್ನು ಮುತ್ತಿಕೊಂಡಿರುವ ಫೋಟೋ ಶೇರ್ ಮಾಡುತ್ತಿದ್ದಾರೆ. ಕಾಲಿವುಡ್ ನ ನಂ.1 ನಟ ವಿಜಯ್, ಗ್ರೇಟ್ ನಟ ಎಂದೆಲ್ಲ ಅಭಿಮಾನಿಗಳು ಹಾಡಿ ಹೊಗಳಿ ಟ್ವೀಟ್ ಮಾಡುತ್ತಿದ್ದಾರೆ.

ಜೂನ್ 22ಕ್ಕೆ ಮಾಸ್ಟರ್ ರಿಲೀಸ್ ಸಾಧ್ಯತೆ

ಜೂನ್ 22ಕ್ಕೆ ಮಾಸ್ಟರ್ ರಿಲೀಸ್ ಸಾಧ್ಯತೆ

ನಟ ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತಿದೆ. ಮೂಲಗಳ ಪ್ರಕಾರ ಸಿನಿಮಾ ವಿಜಯ್ ಹುಟ್ಟುಹಬ್ಬಕ್ಕೆ ಅಂದರೆ ಜೂನ್ 22ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Kollywood Actor Vijay Name trend on Actor Ajith birthday. Ajith celebrated his 50th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X